ಕಲಾಂ ಅವರಲ್ಲಿದ್ದ ಸರಳತೆ ನರೇಂದ್ರ ಮೋದಿ ಅವರಲ್ಲಿ ಕಂಡೆ ಎಂದು ಹೇಳಿದ್ದು ಯಾರು ಬಲ್ಲಿರಾ?
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೆಂದೆರೇನೆ ಹಾಗೆ. ಅವರು ವಿಶ್ವದ ನಾಯಕರನ್ನೂ ಭಾರತದ ಗಣರಾಜ್ಯೋತ್ಸವಕ್ಕೆ ಕರೆಸಬಲ್ಲರು ಹಾಗೂ ಭಾರತದ ಸಾಮಾನ್ಯರೊಂದಿಗೆ ಸೇರಿ ಸಾಮಾನ್ಯರಾಗಿಯೂ ಬೆರೆಯಬಲ್ಲರು.
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಈ ಮಾತು ನಿಜವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕರೀಮ್ ಉಲ್ ಹಕ್ ಅವರೊಂದಿಗೆ ಸೆಲ್ಫೀ ತೆಗೆಸಿಕೊಂಡಿದ್ದು ದೇಶದ ಗಮನ ಸೆಳೆದಿದೆ.
ಅಷ್ಟೇ ಅಲ್ಲ, “ನಾನು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಲ್ಲಿದ್ದ ಸರಳತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಕಂಡೆ” ಎಂದು ಕರೀಮ್ ಉಲ್ ಹಕ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಜನತೆಗೆ ಉಚಿತವಾಗಿ ಬೈಕ್ ಸೇವೆ ನೀಡುವ ಮೂಲಕ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಶಸ್ತಿ ಸ್ವೀಕರಿಸಿದ ಬಳಿಕ ಕರೀಮ್ ಉಲ್ ಹಕ್ ಮೋದಿ ಜತೆ ಸೆಲ್ಫೀ ತೆಗೆಸಿಕೊಂಡ ನಂತರ ಈ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ನಾನು ಈಗೀಗ ಸ್ಮಾರ್ಟ್ ಫೋನ್ ಬಳಸುತ್ತಿದ್ದೇನೆ. ನನಗೆ ಇನ್ನೂ ಸರಿಯಾಗಿ ಸೆಲ್ಫೀ ತೆಗೆದುಕೊಳ್ಳಲು ಬರುವುದಿಲ್ಲ. ಆದರೂ ಮೋದಿ ಅವರ ಜತೆ ಒಂದು ಸೆಲ್ಫೀ ತೆಗೆದುಕೊಳ್ಳಲು ಬಯಸಿದೆ. ಆಗ ಪ್ರಧಾನಿಯವರು ಅದಕ್ಕೆ ಒಪ್ಪಿದ್ದಲ್ಲದೆ, ಸೆಲ್ಫೀ ಹೇಗೆ ತೆಗೆಯಬೇಕು ಎಂಬುದನ್ನು ಸಹ ಕಲಿಸಿದರು. ಇದಕ್ಕಿಂತ ಸರಳತೆ ಇನ್ನೇನು ಬೇಕು ಎಂದು ಕರೀಂ ಉಲ್ಲಾ ಶ್ಲಾಘಿಸಿದ್ದಾರೆ.
Leave A Reply