ಗಣರಾಜ್ಯೋತ್ಸವದಂದು ಟಿಪ್ಪು ಸುಲ್ತಾನನ ಭಾವಚಿತ್ರ ಬಿಡುಗಡೆಗೊಳಿಸುವ ಅರವಿಂದ್ ಕೇಜ್ರಿವಾಲ್ ಗೆ ಏನೆನ್ನಬೇಕು?
ದೆಹಲಿ: ಅದಕ್ಕೆ ಇತಿಹಾಸವನ್ನೇ ಓದಬೇಕು ಎಂದಲ್ಲ, ಕಾಮನ್ ಸೆನ್ಸು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು 1857ರಲ್ಲಿ. ಟಿಪ್ಪು ಸುಲ್ತಾನ ಸತ್ತಿದ್ದು, 1799ರಲ್ಲಿ. ಇಷ್ಟಾದರೂ ಈ ಕೊಳಕು ಮನಸ್ಸಿನ ರಾಜಕಾರಣಿಗಳು ಮಾತ್ರ ಅಲ್ಪ ಸಂಖ್ಯಾತರ ಮತಕ್ಕಾಗಿ ಆತನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದೇ ಬಿಂಬಿಸಿ ಇತಿಹಾಸ ಕೊಲ್ಲುತ್ತಾರೆ.
ಈಗ ಇಂಥಾದ್ದೇ ಒಂದು ಪ್ರಮಾದವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾಡಿದ್ದು, ಭಾರಿ ಟೀಕೆಗೊಳಗಾಗಿದ್ದಾರೆ.
ಗಣರಾಜ್ಯೋತ್ಸವದ ದಿನದಂದು ಸರ್ಕಾರದಿಂದ 70 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಬಿಡುಗಡೆಗೊಳಿಸಿದ್ದು, ಅವುಗಳನ್ನು ದೆಹಲಿ ವಿಧಾನಸಭೆಯಲ್ಲಿ ನೇತುಹಾಕಿದ್ದಾರೆ. ಅದರಲ್ಲಿ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಸೇರಿ ಹಲವು ವೀರ ಕಲಿಗಳ, ಸ್ವಾತಂತ್ರ್ಯಕ್ಕಾಗಿ ಪ್ರಾಣಬಿಟ್ಟವರ ಫೋಟೋಗಳಿವೆ. ಆದರೆ ಸಾಮ್ರಾಜ್ಯಕ್ಕಾಗಿ ಹೋರಾಡಿದ ಟಿಪ್ಪು ಸುಲ್ತಾನನ ಭಾವಚಿತ್ರವನ್ನು ಗೋಡೆಗೆ ನೇತುಹಾಕಿದ್ದು, ಅರವಿಂದ ಕೇಜ್ರಿವಾಲರ ಇತಿಹಾಸ ಜ್ಞಾನಶೂನ್ಯತೆ ಎದ್ದುಕಾಣುತ್ತಿದೆ.
ಇದಕ್ಕೆ ಬಿಜೆಪಿ ಮುಖಂಡರು ಬಹುವಾಗಿ ಟೀಕಿಸಿದ ಬಳಿಕವೂ ಪಾಠ ಕಲಿಯದ ಅರವಿಂದ ಕೇಜ್ರಿವಾಲ್ ತಮ್ಮ ಎಂದಿನ ಶೈಲಿಯಂತೆ “ಭಾರತ ತುಂಬ ಕಠಿಣವಾದ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಗಳಿಸಿತು, ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಾವು ಸ್ವತಂತ್ರ್ಯವಾಗಿ ಇರಲಾರದಂಥ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದ್ದಾರೆ.
ಆದರೆ ಟಿಪ್ಪು ಸುಲ್ತಾನ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂಬುದು ಮಾತ್ರ ಈ ಕೇಜ್ರಿವಾಲ್, ಸಿದ್ದರಾಮಯ್ಯನವರಿಗೆ ಅರ್ಥವಾಗೋಲ್ಲ ಎಂದರೆ ಇವರಿಗೆ ಏನೆನ್ನಬೇಕು? ನಾಚಿಕೆಯಾಗಬೇಕು ಇವರಿಗೆ.
Leave A Reply