ಪ್ರವಾದಿ ಮೊಹಮ್ಮದರ ಕುರಿತು ಸಿನಿಮಾ ಮಾಡುವ ತಾಕತ್ತು ಸಂಜಯ್ ಲೀಲಾ ಬನ್ಸಾಲಿಗಿದೆಯಾ?
ದೆಹಲಿ: ರಜಪೂತರ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಪದ್ಮಾವತ್ ಸಿನಿಮಾ ಬಿಡುಗಡೆಗೆ ದೇಶಾದ್ಯಂತ ವಿರೋಧವಾದ ಬೆನ್ನಲ್ಲೇ ಚಿತ್ರ ಬಿಡುಗಡೆಯಾದರೂ ಆ ಚಿತ್ರದ ವಿರುದ್ಧ ಇರುವ ಆಕ್ರೋಶ ಮಾತ್ರ ತಣ್ಣಗಾಗಿಲ್ಲ.
ಸಂಜಯ್ ಲೀಲಾ ಹಿಂದೂಗಳು, ರಜಪೂತರನ್ನು ಗುರಿಯಾಗಿಸಿಕೊಂಡು ಸಿನಿಮಾ ಮಾಡುವ ಕುರಿತು ಮಾತನಾಡಿರುವ ಬಿಜೆಪಿ ಮುಖಂಡ, ಕೇಂದ್ರ ಸಚಿವ ಗಿರಿರಾಜ್ ಸಿಂಗ್, “ರಾಣಿ ಪದ್ಮಾವತಿ ಬಗ್ಗೆ ಸಿನಿಮಾ ಮಾಡಿರುವ ಸಂಜಯ್ ಲೀಲಾ ಬನ್ಸಾಲಿ ಅಥವಾ ಯಾರಿಗೇ ಆದರೂ ಮುಸ್ಲಿಮರ ಧರ್ಮಗುರು ಪ್ರವಾದಿ ಮೊಹಮ್ಮದರ ಕುರಿತು ಸಿನಿಮಾ ಮಾಡುವ ಧೈರ್ಯವಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಪದ್ಮಾವತಿ (ಈಗ ಪದ್ಮಾವತ್) ಸಿನಿಮಾದ ಹೆಸರು ಘೋಷಣೆಯಾದ ಬಳಿಕವೇ ವಿರೋದ ವ್ಯಕ್ತವಾಗಿದೆ. ಸಿನಿಮಾ ಶೂಟಿಂಗ್ ಆರಂಭವಾದ ಬಳಿಕವಂತೂ ಪ್ರತಿಭಟನೆಗಳೇ ನಡೆದಿವೆ. ಆದರೂ ಸಂಜಯ್ ಲೀಲಾ ಬನ್ಸಾಳಿ ಸಿನಿಮಾ ಶೂಟಿಂಗ್ ಏಕೆ ಸ್ಥಗಿತಗೊಳಿಸಿಲ್ಲ ಎಂದು ಗಿರಿರಾಜ್ ಪ್ರಶ್ನಿಸಿದ್ದಾರೆ.
ಸಿನಿಮಾದಲ್ಲಿ ರಜಪೂತರ ರಾಣಿ ಪದ್ಮಾವತಿ ನೃತ್ಯ ಮಾಡುವುದನ್ನು ತೋರಿಸಲಾಗಿದೆ. ಆದರೆ ರಾಣಿ ಪದ್ಮಾವತಿ ಎಂದಾದರೂ ನೃತ್ಯ ಮಾಡಿದ್ದಳೇ? ಬನ್ಸಾಲಿ ಈ ಕುರಿತು ಏಕೆ ಸಿನಿಮಾ ಮಾಡಬೇಕು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇತಿಹಾಸಕಾರರನ್ನು ಅವರು ಹೇಗಿದ್ದರೋ ಹಾಗೆಯೇ ಚಿತ್ರೀಕರಿಸಬೇಕು. ಅದು ಬಿಟ್ಟು ಬೇಕಾಬಿಟ್ಟಿಯಾಗಿ ಚಿತ್ರಿಸಿದರೆ ಹೇಗೆ? ಮಹಾತ್ಮ ಗಾಂಧೀಜಿ ಕುರಿತು ಚಿತ್ರ ನಿರ್ಮಿಸಿ, ಸಿನಿಮಾದಲ್ಲಿ ಅವರು ನೃತ್ಯ ಮಾಡುವ ಕುರಿತು ಸೀನ್ ಇಟ್ಟರೆ ಹೇಗೆ? ಅದನ್ನು ಯಾರೂ ಕ್ಷಮಿಸುವುದಿಲ್ಲ ಎಂದು ಗಿರಿರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave A Reply