ಮಂಗಳೂರು ಮಹಾನಗರ ಪಾಲಿಕೆಯ ಅತೀ ಬುದ್ಧಿವಂತಿಕೆ!
Posted On January 29, 2018

ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಮೂಗಿನ ನೇರದಲ್ಲಿಯೇ ಇರುವ ಸರ್ಕಲ್ ಇಡೀ ದಿನ ಅತೀ ಹೆಚ್ಚು ಬ್ಯುಸಿ ಇರುವ ಪ್ರದೇಶ. ಲಾಲ್ ಭಾಗ್ ಸಿಗ್ನಲ್ ಎಂದರೆ ನಿಜವಾಗಿಯೂ ಹೃದಯಭಾಗ. ಮಂಗಳೂರಿನ ಎಲ್ಲಾ ಪ್ರಮುಖ ರಸ್ತೆಗಳು ಸಂಧಿಸುವ ಸ್ಥಳ. ಅಲ್ಲಿ ಸರ್ಕಲ್ ಪಕ್ಕದಲ್ಲಿ ಭಾರೀ ಮರಳು ಎಲ್ಲಿಂದಲೂ ಬಂದು ಬಿದ್ದಿದೆ. ನಮ್ಮ ಪಾಲಿಕೆಗೆ ಬರುವ ಶಾಸಕರು, ಮೇಯರ್, ಅಧಿಕಾರಿಗಳು ಏನೂ ಮಾಡಬೇಕಿತ್ತು ಎಂದರೆ ಆ ಮರಳನ್ನು ಅಲ್ಲಿಂದ ತೆಗೆಸಿ ರಸ್ತೆಯನ್ನು ಸುಲಭ ಸಂಚಾರಕ್ಕೆ ಅನುಕೂಲ ಮಾಡಬೇಕಿತ್ತು. ಏಕೆಂದರೆ ಮರಳು ಅಲ್ಲಿದ್ದಷ್ಟು ಸಮಯ ವಾಹನ ಸವಾರರ ಜೀವಕ್ಕೆ ಸಂಕಟ. ಇದರಿಂದ ದ್ವಿಚಕ್ರ ವಾಹನ ಸವಾರರ ಮತ್ತು ಹಿಂಬದಿ ಸವಾರರ ಪ್ರಾಣಾಪಾಯ ಆಗುವ ಸಾಧ್ಯತೆ ಇದೆ. ಆದ್ದರಿಂದ ಆದಷ್ಟು ಬೇಗ ಮರಳು ತೆಗೆಸಿ ಜನರ ಜೀವಕ್ಕೆ ರಕ್ಷಣೆ ಒದಗಿಸಬೇಕಾದ ಪಾಲಿಕೆ ಅತೀ ಬುದ್ಧಿವಂತಿಕೆ ಪ್ರದರ್ಶಿಸಿ ಅಲ್ಲೊಂದು ಬ್ಯಾರಿಕೇಡ್ ಇಟ್ಟಿದೆ. ಬಾಯಿಂದ ತಿನ್ನಿ ಎಂದರೆ ನಾವು ಡಿಫರೆಂಟ್ ಅಂತ ಮೂಗಿನಿಂದ ತಿನ್ನಲು ಹೋಗುವ ಪಾಲಿಕೆ ಮರಳು ತೆಗೆಯಿರಿ ಎಂದು ಜನ ಮನವಿ ಕೊಟ್ಟರೆ ಬ್ಯಾರಿಕೇಡ್ ಇಟ್ಟು ತನ್ನ ಚೇಷ್ಟೆ ಮುಂದುವರೆಸಿದೆ. ಕೆಎಎಸ್ ಕಲಿತವರ ಕೈಯಲ್ಲಿ ಅಧಿಕಾರ ಕೊಟ್ಟರೆ ಹೀಗೆ ಆಗುವುದು ಕಾಮನ್ ಸೆನ್ಸ್ ಕಡಿಮೆ ಎಂದು ಜನ ತಮ್ಮಲ್ಲಿಯೇ ಮಾತನಾಡುತ್ತಾ ಮುಸಿಮುಸಿ ನಗುತ್ತಿದ್ದಾರೆ!

- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply