ಪಾವ ಬಜ್ಜಿ ಮಾರಾಟ ಕೀಳಾಗಿ ನೋಡುವವರೇ ಕೇಳಿ ಒಂದೇ ನಗರದ ವ್ಯಾಪಾರಿಗಳು ಎಷ್ಟು ಕೋಟಿ ನ್ಯಾಯಯುತ ಆದಾಯ ಘೋಷಿಸಿದ್ದಾರೆ
ಮುಂಬೈ: ಬೇರೆಯವರ ಹತ್ತಿರ ಭಿಕ್ಷೆ ಬೇಡಿ ತಿನ್ನುವುದಕ್ಕಿಂತ ಪಾವ ಬಜ್ಜಿ ಮಾರಿಯಾದರು ಉದ್ಯೋಗ ಮಾಡಬಹುದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಬೇಕಾಬಿಟ್ಟಿಯಾಗಿ ಪ್ರತಿಪಕ್ಷಗಳು ಬಳಸಿಕೊಳ್ಳುತ್ತಿವೆ. ಪ್ರಧಾನಿ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬೊಗಳೆ ಬಿಡುತ್ತಿದ್ದಾರೆ. ಆದರೆ ದುರಂತ ಎಂದರೆ ಭಾರತದಲ್ಲಿ ಕೇವಲ ಪಕೋಡಾ ಮಾರಿಯೇ ಲಕ್ಷಾಂತರ ಜನರು ಸ್ವಾಭಿಮಾನಿ ಜೀವನ ಸಾಗಿಸುತ್ತಿದ್ದಾರೆ ಎಂಬ ಸಾಮಾನ್ಯ ಜ್ಞಾನ ಕಾಂಗ್ರೆಸ್ ನವರಿಗೆ ಇಲ್ಲದಿರುವುದು.
ಪಕೋಡಾ, ಪಾವ ಬಜ್ಜಿ, ಜಿಲೇಬಿ ಮಾರುವವರೆಂದರೆ ಕೀಳು ಎಂದು ಕಾಂಗ್ರೆಸ್ಸಿಗರು ಮೋದಿ ಮಾತಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಮುಂಬೈ ಮಹಾನಗರದ ಪಾವ ಬಜ್ಜಿ, ಜಿಲೇಬಿ ಮಾರಾಟಗಾರರು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಗೆ ಶ್ರಮಪಟ್ಟು ಗಳಿಸಿದ 50 ಸಾವಿರ ಕೋಟಿ ರೂಪಾಯಿಯ ಹಣ ಮತ್ತು ಸಂಪತ್ತಿನ ದಾಖಲೆ ಸಲ್ಲಿಸಿದ್ದಾರೆ. ಈ ಮೂಲಕ ಪಾವ ಬಜ್ಜಿ ಮಾರಿಯೂ ಸ್ವಾವಲಂಭಿ ಜೀವನ ಸಾಗಿಸಬಹುದು ಎಂಬ ಸಂದೇಶವನ್ನು ನೀಡಿದ್ದಾರೆ.
ಮುಂಬೈ ನಗರದ ಉಪಹಾರ ಗೃಹಗಳ ಮಾಲೀಕರು ಸುಮಾರು 25 ಕೋಟಿ ತೆರಿಗೆಯಿಂದ ವಂಚನೆ ಮಾಡಿದ್ದರು. ಆದರೆ ಇತ್ತೀಚೆಗೆ ಆದಾಯ ಮತ್ತು ತೆರಿಗೆ ಇಲಾಖೆ ಮುಂಬೈ ನಗರದ ಹಲವು ಉಪಹಾರ ಗೃಹಗಳ ಮೇಲೆ ದಾಳಿ ಮಾಡಿದಾಗ ಪಾವ ಬಜ್ಜಿ ಮಾರಾಟಗಾರರ ಆಸ್ತಿ ಬಹಿರಂಗವಾಗಿದೆ.
ಜ್ಯೂಸ್ ಅಂಗಡಿ ಮಾಲೀಕನ ಬಳಿಯೇ ಐದು ಕೋಟಿ ಆಸ್ತಿ
ಮುಂಬೈನ ಘೋಟ್ಕಾಪುರದಲ್ಲಿ ಜ್ಯೂಸ್ ಅಂಗಡಿ ಹೊಂದಿರುವ ವ್ಯಕ್ತಿ ಐದು ಕೋಟಿಯ ಆಸ್ತಿಯನ್ನು ಘೋಷಿಸಿದ್ದಾರೆ. ಇನ್ನು ಹಲವು ರಸ್ತೆ ಬದಿ ಹೋಟೆಲ್ ಗಳ ಮಾಲೀಕರು 25 ರಿಂದ 2 ಕೋಟಿ ವರೆಗೆ ಆದಾಯ ಘೋಷಿಸಿದ್ದಾರೆ. ಹೀಗೆ ಇಡೀ ಮುಂಬೈ ನಗರದಲ್ಲಿ ಪಾವ ಬಜ್ಜಿ, ಬೀದಿ ಬದಿ ಹೋಟೆಲ್ ಮಾಲೀಕರ ಬಳಿಯೇ ಸುಮಾರು 4 ರಿಂದ 5 ಸಾವಿರ ಕೋಟಿ ಆಸ್ತಿ ಇದೆ ಎಂಬ ಮಾಹಿತಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Leave A Reply