ಅಲ್ಪಸಂಖ್ಯಾತರ ತುಷ್ಟೀಕರಣವಲ್ಲ, ಸಬಲೀಕರಣ ಮೋದಿ ಮಂತ್ರ: ರಾಷ್ಟ್ರಪತಿ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮತಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸದೇ, ಅಲ್ಪಂಸಖ್ಯಾತರ ಸಬಲೀಕರಣದ ಮಂತ್ರದಲ್ಲಿ ಆಡಳಿತ ನಡೆಸುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸತ್ ಬಜೆಟ್ ಅಧಿವೇಶನದ ನಿಮಿತ್ತ ಇಂದು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನವಭಾರತದ ಕನಸು ಸಾಕಾರಕ್ಕೆ ಪ್ರಸಕ್ತ ವರ್ಷ ಪ್ರಮುಖ ಘಟ್ಟವಾಗಿದೆ. ಮುಸ್ಲಿಂ ಮಹಿಳೆಯರಗೆ ಕಂಟಕವಾಗಿರುವ ತ್ರಿವಳಿ ತಲಾಖ್ ವಿಧೇಯಕವನ್ನು ಶೀಘ್ರದಲ್ಲಿ ಅಂಗೀಕಾರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಈ ಕಾಯಿದೆ ಮೂಲಕ ಮುಸ್ಲಿಂ ಮಹಿಳೆಯರು ಗೌರವಯುತ ಜೀವನ ನಡೆಸಬಹುದು ಎಂದು ಹೇಳಿದರು.
ರೈತರ ಏಳಿಗೆಗೆ ಮೋದಿ ಸರ್ಕಾರ ಶ್ರಮ
ಕೇಂದ್ರ ಸರಕಾರದ ಪ್ರಥಮ ಆದ್ಯತೆಯಲ್ಲಿ ರೈತರ ಅಭಿವೃದ್ಧಿ. ಆದ್ದರಿಂದ ರೈತರ ವೆಚ್ಚಗಳನ್ನು ತಗ್ಗಿಸಿ ಬೆಳೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ. ಸರಕಾರದ ನೀತಿಗಳು ಮತ್ತು ರೈತರ ಕಠಿಣ ಪರಿಶ್ರಮದ ಫಲವಾಗಿ ದೇಶದಲ್ಲಿ 27.5 ಕೋಟಿ ಟನ್‌ಗಳಿಗೂ ಹೆಚ್ಚಿನ ಆಹಾರ ಧಾನ್ಯ ಹಾಗೂ ಸುಮಾರು 30 ಕೋಟಿಗೂ ಅಧಿಕ ತೋಟಗಾರಿಕೆ ಉತ್ಪನ್ನಗಳ ಇಳುವರಿ ಪಡೆಯಲಾಗಿದೆ ಎಂದು ಹೇಳಿದರು.
ಸುಗಮ ಬದುಕು ಮತ್ತು ಜೀವನ ಮಟ್ಟ ಹೆಚ್ಚಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಆದ್ಯತೆ ನೀಡುತ್ತಿದೆ. ಸಂವಿಧಾನದ ಮೂಲ ಆಶಯಗಳ ಮಾರ್ಗದರ್ಶನದಂತೆ, ದುರ್ಬಲ ವರ್ಗಗಳ ಏಳಿಗೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಎಂದು ಹೇಳಿದರು.
2022ಕ್ಕೆ ಎಲ್ಲ ಕುಟುಂಬಗಳಿಗೆ ವಸತಿ
2022ರಕ್ಕೆ ಭಾರತದ ಎಲ್ಲ ಬಡ, ವಸತಿ ರಹಿತ ಕುಟುಂಬಗಳಿಗೆ ಕೇಂದ್ರ ಸರ್ಕಾರದ ವಸತಿ ನೀಡಬೇಕು. ದೇಶವನ್ನು 2022ರಕ್ಕೆ ಎಲ್ಲರಿಗೂ ವಸತಿ ನಿರ್ಮಿಸುವ ಗುರಿ ಹೊಂದಲಾಗಿದೆ.
Leave A Reply