ಮೋದಿ ನಾಯಕತ್ವಕ್ಕೆ ಜೈ ಅಂದ 27 ಸಾವಿರ ಮುಸ್ಲಿಂ ಮಹಿಳೆಯರು! ರಾಜ್ಯ ರಾಜಕೀಯದಲ್ಲಿ ತಲ್ಲಣ!
ಬೆಂಗಳೂರು: “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಇದು ನರೇಂದ್ರ ಮೋದಿ ಸರಕಾರದ ಅಜೆಂಡಾ.
ದೇಶದ ಮುಸ್ಲಿಂ ಮಹಿಳೆಯರನ್ನು ಸಮಾಜದಲ್ಲಿ ಸುಭದ್ರ ಸ್ಥಿತಿಗೆ ತಂದು ನಿಲ್ಲಿಸುವ ಸಲುವಾಗಿ ಹತ್ತು ಹಲವು ಯೋಜನೆಗಳನ್ನು ಈವರೆಗೆ ಜಾರಿಗೆ ತರಲಾಗಿದೆ.
ಅದರಲ್ಲಿ “ನಯಿ ರೋಶನಿ”ಯೂ ಒಂದು. ಈಗಾಗಲೇ ಅಲ್ಪಸಂಖ್ಯಾತ ಮೋರ್ಚಾ ನೇತೃತ್ವದ ‘ನಯೀ ರೋಶನಿ’ ಯೋಜನೆಯಲ್ಲಿ 16 ಸಾವಿರ ಮುಸ್ಲಿಂ ಮಹಿಳೆಯರು ಭಾಗೀದಾರರಾಗಿದ್ದು, ಇದೀಗ 27 ಸಾವಿರ ಮಂದಿ ಬಿಜೆಪಿ ಸದಸ್ಯತ್ವ ಪಡೆದಿದ್ದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ತ್ರಿವಳಿ ತಲಾಖ್ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯ ಸಭೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಮುಸ್ಲಿಂ ಮಹಿಳೆಯರ ಈ ಬೆಳವಣಿಗೆಯಿಂದ ಕಾಂಗ್ರೆಸ್ ತತ್ತರಿಸಿ ಹೋಗಿದೆ. ಬೆಂಗಳೂರು ಶಿವಮೊಗ್ಗ ಕಲಬುರ್ಗಿ ಹಾವೇರಿ ಕೋಲಾರ ಮುಂತಾದ ಜಿಲ್ಲೆಗಳಲ್ಲಿ ಭಾರೀ ಸ್ಪಂದನೆ ದೊರಕುತ್ತಿರುವ “ನಯಿ ರೋಶನಿ”ಯ ಜವಾಬ್ದಾರಿಯನ್ನು ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿ ಡಿಸೋಜ ವಹಿಸಿಕೊಂಡು ಮಹಿಳೆಯರ ಸಬಲೀಕರಣ, ಆರೋಗ್ಯ, ವಿಕಾಸ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕುಂದು ಕೊರತೆಗಳಿಗೆ ನಾವು ಧ್ವನಿಯಾಗಲಿದ್ದೇವೆ ಎಂದು ಹೇಳಿದರು
ಇದೇ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದನ್ವಯ ತ್ರಿವಳಿ ತಲಾಖ್ ಎಂಬ ಅನಿಷ್ಟ ಪದ್ಧತಿಯನ್ನು ರದ್ದು ಪಡಿಸಿ ಮುಸ್ಲಿಂ ಮಹಿಳೆಯರ ಹಕ್ಕನ್ನು ಕಾಪಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರಿಗೆ ಇನ್ನು ಮೇಲೆ ನಾವು ಉತ್ತರ ಕೊಡುತ್ತೇವೆ ಎನ್ನುತ್ತಾರೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಮುಖಂಡ ಅಬ್ದುಲ್ ಅಜೀಂ..
Leave A Reply