ಜಮ್ಮು-ಕಾಶ್ಮೀರಕ್ಕೆ ಒಳನುಸುಳಲು ಐಎಸ್ಐ ತರಬೇತಿ ಪಡೆದ 386 ಉಗ್ರರು ಹೂಡಿರುವ ತಂತ್ರ ಎಂಥಾದ್ದು?
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಎಂದಿಗೂ ಉಗ್ರರ ಉಪಟಳ ಜಾಸ್ತಿಯಿದ್ದು, ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಉಗ್ರರ ವಿರುದ್ಧ ಕಾರ್ಯಾಚಾರಣೆ ಕೈಗೊಂಡ ಬಳಿಕ ಬಾಲ ಸುಟ್ಟ ಕೋತಿಯಂತಾಗಿದ್ದ ಪಾಕಿಸ್ತಾನಿ ಉಗ್ರರು ಈಗ ಮತ್ತೊಂದು ಸಂಚು ರೂಪಿಸಿದ್ದಾರೆ.
ಪಾಕಿಸ್ತಾನಿ ಆಂತರಿಕ ಸೇವೆಗಳ ಗುಪ್ತಚರ ಇಲಾಖೆ (ಐಎಸ್ಐ) ಯಿಂದ ವಿಶೇಷ ತರಬೇತಿ ಪಡೆದಿರುವ ಸುಮಾರು 386 ಉಗ್ರರು ಜಮ್ಮು-ಕಾಶ್ಮೀರಕ್ಕೆ ಒಳನುಸುಳಲು ಸಂಚು ರೂಪಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದ್ದು, ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ 13 ಸ್ಥಳಗಳಿಂದ ಭಾರತದೊಳಕ್ಕೆ ಅಕ್ರಮವಾಗಿ ನುಸುಳಲು ವಿಶೇಷ ಕಾರ್ಯಾಚರಣೆ ಪಡೆಯೊಂದು ಪಾಕಿಸ್ತಾನ ತಯಾರಿಸಿದ್ದು, ಅದರಲ್ಲಿ 386 ಉಗ್ರರು ಸೇರಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಕೇಲ್, ಸರ್ದಿ, ದುಧ್ ನಿಯಾಲ್, ಅತ್ಮುಕಂ, ಜುರಾ, ಲಿಪಾ, ಪಚ್ಚಿಬನ್, ಫಾರ್ವರ್ಡ್ ಕುತಾ, ಕೋತ್ಲಿ, ಕುರೈತ, ನಿಕೈಲ್, ಚಮನ್ ಕೋಟ್ ಮತ್ತು ಜಾಂಕೋಟೆ ಎಂಬ ಪ್ರದೇಶಗಳಿಂದ ಒಳನುಸುಳಲು ಸಂಚು ರೂಪಿಸಿದ್ದು, ಅದರಲ್ಲಿ ಉಗ್ರರ ಜತೆಗೆ ಪಾಕಿಸ್ತಾನಿ ಸೈನಿಕರೂ ಇದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿದ್ದಾಗ ಇಂಡಿಯಾ ಟುಡೇ ವರದಿ ಮಾಡಿದೆ.
ಇದಕ್ಕೆ ಪ್ರತಿಯಾಗಿ ಭಾರತವೂ ಶಸ್ತ್ರಸಜ್ಜಿತ ಹಾಗೂ ಹಲವು ತಂತ್ರಗಳಿಂದ ಸನ್ನದ್ಧವಾಗಿದ್ದು, ಉಗ್ರರು ಒಳನುಸುಳಲು ಉದ್ದೇಶಿಸಿರುವ ಪ್ರತಿ ಪ್ರದೇಶ ಗುರುತಿಸಿ, ಅಲ್ಲೆಲ್ಲ ವಿಶೇಷ ಪಡೆ ನಿಯೋಜಿಸಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಭಾರತೀಯ ಸೈನಿಕರು ಕಾರ್ಯಾಚರಣೆ ಕೈಗೊಂಡು ಸುಮಾರು 213ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿದ ಹಿನ್ನೆಲೆಯಲ್ಲಿ ಜೈಷೆ ಮೊಹಮ್ಮದ್ ಸೇರಿ ಹಲವು ಉಗ್ರ ಸಂಘಟನೆಗಳ ಬೆಂಬಲ ಪಡೆದಿರುವ ಪಾಕಿಸ್ತಾನ, ತನ್ನ ಸೈನಿಕರು ಹಾಗೂ ಉಗ್ರರನ್ನು ಕಾಶ್ಮೀರದೊಳಕ್ಕೆ ಬಿಟ್ಟು ಅರಾಜಕತೆ ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದಾಗ್ಯೂ ಭಾರತವೂ ಪಾಕಿಸ್ತಾನದ ತಂತ್ರಕ್ಕೆ ಪ್ರತಿತಂತ್ರ ಹೆಣೆದಿರುವುದು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ.
Leave A Reply