ನಮಾಜ್ ನೇತೃತ್ವ ವಹಿಸಿದ್ದ ಮುಸ್ಲಿಂ ಮಹಿಳೆಗೆ ಜೀವ ಬೆದರಿಕೆ, ಆದರೂ ಬೆದರಿಕೆಗೆ ಬಗ್ಗಲ್ಲ ಎಂದ ದಿಟ್ಟೆ
ತಿರುವನಂತಪುರ: ಭಾರತದಲ್ಲಿ ಹಾಗೇನೆ. ಮಹಿಳೆಯರು ಪೈಲಟ್ ಆದರೆ, ಬಸ್ ಓಡಿಸಿದರೆ, ಯಾವುದೇ ಸಾಧನೆ ಮಾಡಿದರೆ ಹೆಮ್ಮೆ ಪಡುತ್ತವೆ. ಆದರೆ ಅದೇ ಮುಸ್ಲಿಂ ಮಹಿಳೆ ಬುರ್ಖಾ ತೆಗೆದರೆ ಫತ್ವಾ ಹೊರಡಿಸಲಾಗುತ್ತದೆ.
ಅದೇ ರೀತಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನಮಾಜ್ (ಜುಮಾ)ನ ನೇತೃತ್ವದ ವಹಿಸಿದ್ದ ಕೇರಳದ ಜಮಿತಾ ಅವರಿಗೆ ಮುಸ್ಲಿಂ ಮೂಲಭೂತವಾದಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ತಿಳಿದುಬಂದಿದೆ.
ಆದರೆ ಇದಕ್ಕೆ ಜಮಿತಾ ಸೊಪ್ಪು ಹಾಕದೆ ಪ್ರತಿಕ್ರಿಯಿಸಿದ್ದು, ಬೆದರಿಕೆ ಕರೆಗಳಿಗೆ ಬಗ್ಗುವುದಿಲ್ಲ, ನನ್ನ ಕೆಲಸ ನಾನು ಮಾಡಿದ್ದೇನೆ. ಇದರಲ್ಲಿ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡುವ ಮೂಲಕ ದಿಟ್ಟತನ ಮೆರೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಹ ಬೆದರಿಕೆ ಒಡ್ಡುತ್ತಿದ್ದು, ಜಮಿತಾ ಇಸ್ಲಾಂ ಧರ್ಮವನ್ನು ನಾಶಪಡಿಸುತ್ತಿದ್ದಾಳೆ. ಅವಳು ಬದಲು ಅನರ್ಹವಾದವಳು ಎಂಬಂತಹ ಕೀಳುಮಟ್ಟದ ಯೋಚನೆಗಳಿಂದ ಕೂಡಿದ ಪ್ರತಿಕ್ರಿಯೆ ಬರುತ್ತಿದ್ದು, ಇದಾವುದಕ್ಕೂ ನಾನು ಹೆದರುವುದಿಲ್ಲ ಎಂದು ಜಮಿತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಕುರಾನ್ ಸುನ್ನತ್ ಮತ್ತು ಇಮಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಜಮಿತಾ ಪುರುಷ ಧರ್ಮಗುರುಗಳೇ ನಡೆಸಿಕೊಡುವ ನಮಾಜಅನ್ನು ಜನವರಿ 26ರಂದು ತಾವೇ ನಡೆಸಿಕೊಟ್ಟಿದರು. ಸುಮಾರು 80 ಮಂದಿ ಭಾಗವಹಿಸಿದ್ದ ಪ್ರಾರ್ಥನಾ ಸಭೆಯ ನೇತೃತ್ವ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿದ್ದರು. ಇದು ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಕೆಲವರು ವಿರೋಧಿಸಿದ್ದರು.
Leave A Reply