ಮಕ್ಕಳಾಗಿಲ್ಲ ಎಂದು ಫೋನ್ ಮೂಲಕ ತಲಾಖ್
ಲಖನೌ: ತ್ರಿವಳಿ ತಲಾಖ್ ನಿಷೇಧ ಮಸೂದೆ ಕೇಂದ್ರ ಸರ್ಕಾರ ಶ್ರಮಿಸುತ್ತೀರುವಾಗಲೇ ಮತ್ತೊಂದು ತ್ರಿವಳಿ ತಲಾಖ್ ಘಟನೆ ಬಹಿರಂಗವಾಗಿದೆ. ಉತ್ತರ ಪ್ರದೇಶದ ಬಾರಾಬಂಕಿಯ ಬಡಪುರ ಕ್ಷೇತ್ರದ ಸಲೇಮಪುರದಲ್ಲಿ ಮಕ್ಕಳು ಆಗಲಿಲ್ಲ ಎಂದು ಪತ್ನಿಗೆ ಪತಿ ಫೋನ್ ನಿಂದಲೇ ತ್ರಿವಳಿ ತಲಾಖ್ ನೀಡಿ, ಧರ್ಪ ಮೆರೆದಿದ್ದಾನೆ.
ಮದುವೆಯಾಗಿ ಐದು ವರ್ಷವಾದರೂ ಮಕ್ಕಳಿಗೆ ಜನ್ಮ ನೀಡಿಲ್ಲ ಎಂದು ಅಮರಿನ್ ಬಾನೋ ಎಂಬ ಮಹಿಳೆಗೆ ಪತಿ ಮೋಬಿನ್ ಫೋನ್ ಮೂಲಕ ತಲಾಖ್ ನೀಡಿದ್ದು, ಇದೀಗ ಮಹಿಳೆ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ತಲಾಖ್ ನೀಡಿರುವ ಮೋಬಿನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.
ಗುಜರಾತ್ ನಲ್ಲಿ ಟ್ರಕ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಮೋಬಿನ್ ಫೋನ್ ಮೂಲಕ ತಲಾಖ್ ನೀಡಿದ್ದಲ್ಲದೇ, ಅಲ್ಲೇ ಮತ್ತೊಬ್ಬ ಮಹಿಳೆಯೊಂದಿಗೆ ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾನೆ. ಇದರಿಂದ ಕಂಗಾಲಾಗಿರುವ ಮಹಿಳೆ ಜನವರಿ 25ರಂದು ಪೊಲೀಸರಿಗೆ ದೂರು ನೀಡಿದ್ದಾಳೆ.
ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದು ಗುಜರಾತ್ ನ ಅಹ್ಮದಾಬಾದ್ ನಲ್ಲಿ ಟ್ರಕ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಪತ್ತೇ ಹಚ್ಚಿದ್ದಾರೆ. ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಕುರಿತು ಪೀಡಿತ ಮಹಿಳೆ ಮತ್ತು ಅವಳ ತಾಯಿ ನಿತ್ಯ ಕಣ್ಣೀರಿಡುತ್ತಿದ್ದು ‘ಐದು ವರ್ಷದ ಹಿಂದೆ ನನ್ನ ಮಗಳನ್ನು ಮೋಬಿನ್ ಮದುವೆಯಾಗಿದ್ದ. ಎರಡು ವರ್ಷದ ವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ನಂತರ ಗಂಡು ಮಗು ಆಗಲಿಲ್ಲ ಎಂದು ಮೋಬಿನ್ ಮಗಳ ಜತೆ ಜಗಳ ತೆಗೆಯುತ್ತಿದ್ದ, ಕಿರುಕುಳ ನೀಡುತ್ತಿದ್ದ. ಅದನ್ನು ಸಹಿಸಿಕೊಂಡು ಮಗಳು ಇದ್ದಳು. ಆದರೆ ಇದೀಗ ತಲಾಖ್ ನೀಡಿದ್ದರಿಂದ ನನ್ನ ಮಗಳು ಬೀದಿಗೆ ಬರುವಂತಾಗಿದೆ ಎಂದು ಅಮರಿನ್ ಬಾನೋ ತಾಯಿ ದುಖಿಃಸುತ್ತಿದ್ದಾರೆ.
Leave A Reply