ಕೇರಳದ ಯುವತಿಗೆ ಬೆಂಗಳೂರಿನಲ್ಲಿ ಲವ್ ಜಿಹಾದ್, ಐಸಿಸ್ ಸೇರಿಸಲು ಯತ್ನಿಸಿದ ಉಗ್ರ..?
ದೆಹಲಿ: ದೇಶದಲ್ಲಿ ಮಹಿಳೆಯರನ್ನು ಲವ್ ಜಿಹಾದ್ ಮೋಹಕ್ಕೆ ಒಳಪಡಿಸಿ, ಮತಾಂತರಿಸಿ ಐಸಿಸ್ ನಂತಹ ಪಾಪದ ಕೂಪಕ್ಕೆ ತಳ್ಳುವ ಕುತಂತ್ರದ ಕಾರ್ಯಗಳು ಮುಂದುವರಿದಿದ್ದು, ಇದೀಗ ಕೇರಳದ ಯುವತಿಯನ್ನು ಬೆಂಗಳೂರಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾಗ ಪ್ರೀತಿಸಿ, ಮತಾಂತರಿಸಿ ಸಿರಿಯಾದಲ್ಲಿ ಐಸಿಸ್ ಸೇರಲು ಒತ್ತಾಯಿಸುತ್ತಿದ್ದ ಮುಸ್ಲಿಮನೊಬ್ಬನ ವಿರುದ್ಧ ರಾಷ್ಟ್ರೀಯ ತನಿಖಾ ದಳ ಪ್ರಕರಣ ದಾಖಲಿಸಿದೆ.
ನನ್ನನ್ನು ಕಣ್ಣೂರಿನ ಮಹಮ್ಮದ್ ರಿಯಾಜ್ ರಶೀದ್ ಎಂಬಾತ ಅತ್ಯಾಚಾರವೆಸಗಿ, ಮದುವೆಯಾಗಿ ಐಸಿಸ್ ಸೇರಿಸಲು ಒತ್ತಾಯ ಮಾಡುತ್ತಿದ್ದ ಎಂದು ದೌರ್ಜನ್ಯಕ್ಕೆ ಒಳಗಾದ ಮಹಿಳೆ ದೂರು ನೀಡಿದ್ದಾಳೆ. ಕೇರಳದ ಪಥನಂತಿಟ್ಟಾ ಜಿಲ್ಲೆಯ 25 ವರ್ಷದ ಮಹಿಳೆ ಗುಜರಾತ್ ನಲ್ಲಿ ವಾಸಿಸುತ್ತಿದ್ದಾಳೆ. ಮಹಮ್ಮದ್ ರಿಯಾಜ್ ಜತೆ ಮದುವೆಯಾಗಿದ್ದಳು. ಮದುವೆ ನಂತರ ಮಹಮ್ಮದ್ ಅತ್ಯಾಚಾರ ವೆಸಗಿ, ಒತ್ತಾಯಪೂರ್ವಕವಾಗಿ ಮತಾಂತರಿಸಿ, ಸಿರಿಯಾಗೆ ಕಳುಹಿಸಲು ಚಿಂತನೆ ನಡೆಸಿದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಬೆಂಗಳೂರಿನಲ್ಲೇ ನಡೆದಿತ್ತು ಲವ್ ಜಿಹಾದ್
ಆರೋಪಿ ಮಹಮ್ಮದ್ ರೀಯಾಜ್ ಕೇರಳದ ಕಣ್ಣೂರಿನ ಥಲಾಸೇರಿಯವನಾಗಿದ್ದು 2014ರಲ್ಲಿ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ನನ್ನನ್ನು ಪ್ರೀತಿಸಿ, ಒತ್ತಾಯದಿಂದ ಮತಾಂತರಿಸಿ ಮದುವೆಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಎರ್ನಾಕುಲಂ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಭಯೋತ್ಪಾದನೆ ನಿಯಂತ್ರಣ ದಳ ಈ ಕುರಿತು ವರದಿ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಕೇರಳ ಹೈ ಕೋರ್ಟ್ ಗೆ ಅಫಿಡೆವಿಟ್ ಸಲ್ಲಿಸಿದ್ದು ‘ಇದು ಗಂಭೀರ ಪ್ರಕರಣವಾಗಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ರಾಷ್ಟ್ರೀಯ ತನಿಖಾ ದಳಕ್ಕೆ ಸೂಚಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಒಂಬತ್ತು ಜನರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ಮತ್ತು ಕೋಮುಗಲಭೆ ಪ್ರಚೋಧನೆ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅತ್ಯಾಚಾರ ವಿಡಿಯೋ ಮಾಡಿಕೊಂಡಿದ್ದ
ಯುವತಿಯನ್ನು ಅತ್ಯಾಚಾರವೆಸಗಿ ವಿಡಿಯೋ ಮಾಡಿಟ್ಟುಕೊಂಡಿದ್ದ ಮಹಮ್ಮದ್ ರಶೀದ್, ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ. ಅಲ್ಲದೇ ಕೆಲವು ಭಯೋತ್ಪಾದಕ ಸಂಘಟನೆಗಳಿಂದ ಸಹಾಯಧನ ಪಡೆಯುತ್ತಿದ್ದ ಎಂಬ ಮಾಹಿತಿಯನ್ನು ಎನ್ ಐಎ ಕಲೆ ಹಾಕಿದೆ.
Leave A Reply