ಸೇನೆ ಕಲ್ಯಾಣ ನಿಧಿಗೆ ದಿನದ ಆದಾಯ ನೀಡಿ, ವಡಾಪಾವ್ ಕೀಳು ಎನ್ನುವವರಿಗೆ ತಕ್ಕ ಉತ್ತರ ನೀಡಿದ ವಡಾಪಾವ್ ವಾಲೆ
ಮುಂಬೈ: ಜೀವನದಲ್ಲಿ ಬೇರೊಬ್ಬರ ಬಳಿ ಭಿಕ್ಷೆ ಬೇಡಿ ತಿನ್ನುವುದಕ್ಕಿಂತ ವಡಾಪಾವ್, ಪಕೋಡ ಮಾರಿಯಾದರೂ ಅದ್ಭುತ ಜೀವನ ಸಾಧಿಸಬಹುದು ಎಂಬ ಲಕ್ಷಾಂತರ ಉದಾಹರಣೆಗಳು ಭಾರತದಲ್ಲಿ ದೊರೆಯುತ್ತವೆ. ಅದನ್ನೆ ಮಾದರಿಯಾಗಿಟ್ಟುಕೊಂಡು ಸ್ವಾವಲಂಭೀ ಜೀವನ ಸಾಧಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ಮಾತನ್ನು ಪ್ರತಿಪಕ್ಷಗಳು ಪಕೋಡ್ ಮಾರಾಟಗಾರರ ಬಗ್ಗೆ ಕೀಳು ಮಟ್ಟದ ಮಾತುಗಳನ್ನು ಆಡುತ್ತಿದ್ದಾರೆ.
ಇದೀಗ ವಡಾಪಾವ್ ಮಾರಾಟಗಾರರನ್ನು ಅವಮಾನಿಸಿದ ಪ್ರತಿಪಕ್ಷಗಳಿಗೆ ಅವರೇ ತಕ್ಕ ಉತ್ತರ ನೀಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಮುಂಬೈನ್ ವಡಾಪಾವ್ ಮಾರಾಟಗಾರ ಮಂಗೇಶ್ ಅಹಿವಾಲೇ ಇಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 8ಗಂಟೆವರೆಗೆ ಬರುವ ಆದಾಯವನ್ನು ಸೈನಿಕರ ಕಲ್ಯಾಣ ನಿಧಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮೂಲಕ ನೀಡಲು ನಿರ್ಧರಿಸಿದ್ದಾನೆ.
ಸೇನೆಯ ಕಲ್ಯಾಣ ನಿಧಿಗೆ ಸಹಾಯಧನ ನೀಡುವುದಕ್ಕಾಗಿಯೇ ವಿಶೇಷ ಅಂಗಡಿ ಆರಂಭಿಸಿದ್ದು, ನಿತ್ಯ 14 ರೂಪಾಯಿಗೆ ಮಾರಾಟ ಮಾಡುತ್ತಿದ್ದ ವಡಾಪಾವ್ ನ್ನು ಕೇವಲ 5 ರೂಪಾಯಿಗೆ ಮಾರುವ ಮೂಲಕ, ಹೆಚ್ಚಿನ ಗ್ರಾಹಕರನ್ನು ಸೆಳೆದು, ದೇಶಸೇವೆಗೆ ಸ್ಫೂರ್ತಿ ನೀಡುತ್ತಿದ್ದಾನೆ. ಬೆಳಗ್ಗೆಯಿಂದ ಭರ್ಜರಿ ಮಾರಾಟ ನಡೆದಿದ್ದು, ನಾಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಇಡೀ ದಿನದ ಆದಾಯವನ್ನು ಹಸ್ತಾಂತರಿಸಲಿದ್ದಾನೆ.
Leave A Reply