ಬೇನಾಮಿ ವಹಿವಾಟು ಆರೋಪ, ನಟ ಶಾರೂಖ್ ಖಾನ್ ಫಾರ್ಮ್ ಹೌಸ್ ಜಪ್ತಿ
ಮುಂಬೈ: ಯಾವಾಗಲೂ ವಿವಾದಾತ್ಮಕ ಹೇಳಿಕೆ ಹಾಗೂ ಸಿನಿಮಾದಿಂದ ಖ್ಯಾತಿಯಲ್ಲಿರುತ್ತಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಇತ್ತೀಚೆಗೆ ಶಾಂತಚಿತ್ತದಿಂದ ಇದ್ದಾರೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಈಗ ಮತ್ತೆ ಸುದ್ದಿಯಾಗಿದ್ದು, ಬೇನಾಮಿ ವಹಿವಾಟು ಆರೋಪದಲ್ಲಿ ಐಟಿ ಇಲಾಖೆ ಅಧಿಖಾರಿಗಳು ಖಾನ್ ಫಾರ್ಮ್ ಹೌಸ್ ಜಪ್ತಿ ಮಾಡಿದ್ದಾರೆ.
ಶಾರೂಖ್ ಖಾನ್ ಅಲಿಬಾಗ್ ಎಂಬಲ್ಲಿ ಕೃಷಿಗಾಗಿ ಎಂದು ಜಮೀನು ಖರೀದಿಸಿದ್ದು, ಅದಕ್ಕೆ ದೇಜಾ ವು ಫಾರ್ಮ್ ಹೌಸ್ ಎಂದು ಹೆಸರಿಟ್ಟಿದ್ದರು. ಆದರೆ ಅದನ್ನು ಈಗ ವೈಯಕ್ತಿಕ ಕಾರಣಗಳಿಗಾಗಿ ಬಳಸುವ ಫಾರ್ಮ್ ಹೌಸ್ ಆಗಿ ಪರಿವರ್ತನೆ ಮಾಡಿದ ಹಿನ್ನೆಲೆಯಲ್ಲಿ ಫಾರ್ಮ್ ಹೌಸ್ ಜಪ್ತಿ ಮಾಡಲಾಗಿದೆ.
ಬೇನಾಮಿ ವ್ಯವಹಾರ ನಿಯಂತ್ರಣ ತಿದ್ದುಪಡಿ ಕಾಯಿದೆ 2016ರ ಅನ್ವಯ ಫಾರ್ಮ್ ಹೌಸ್ ಜಪ್ತಿ ಮಾಡಿದ್ದು, ಇದು ಕಾಯಿದೆಯ ಸೆಕ್ಷನ್ 2 (9)ರ ಉಲ್ಲಂಘನೆ ಎಂದು ಐಟಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟೇ ಅಲ್ಲ ಅಲಿಬಾಗ್ ನಲ್ಲಿರುವ ದೇಜಾ ವು ಫಾರ್ಮ್ಸ್ ಇದುವರೆಗೂ ಕೃಷಿ ಚಟುವಟಿಕೆಯಿಂದ ಬಂದ ಯಾವುದೇ ಆದಾಯ ತೋರಿಸಿಲ್ಲ. ಅಲ್ಲದೆ ಶಾರೂಖ್ ಖಾನ್ ಅವರಿಂದ ಫಾರ್ಮ್ಸ್ ಗೆ 8.4 ಕೋಟಿ ರೂ. ಸಾಲ, ಅದೂ ದಾಖಲೆಯಿಲ್ಲದೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
Leave A Reply