ಮತ್ತೆ ಪಾಕ್ ದುಷ್ಟತನ, ಉಗ್ರ ಮಸೂದ್ ಗೆ ಅಜಾದ್ ಕಾಶ್ಮೀರ ರ್ಯಾಲಿಗೆ ಅವಕಾಶ
ಇಸ್ಲಾಮಾಬಾದ್: ಸದಾ ಭಯೋತ್ಪಾದಕರನ್ನು ಪೋಷಿಸಿ, ಬೆಳೆಸುತ್ತಿರುವ ಮತ್ತು ಭಾರತದ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಾ ನೀಚತನ ಮೆರೆಯುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ವಿಶ್ವದ ವಿರುದ್ಧ ಕಟ್ಟಿಕೊಂಡು ಜಾಗತಿಕ ಉಗ್ರ ಮಸೂದ್ ಅಜರ್ ಗೆ ‘ಅಜಾದ್ ಇ ಕಾಶ್ಮೀರ ರ್ಯಾಲಿಗೆ ಅವಕಾಶ ನೀಡುವ ಮೂಲಕ ತಾನು ಸದಾ ಉಗ್ರ ಪೋಷಕ ಎಂಬುದನ್ನು ಬಹಿರಂಗಪಡಿಸಿದೆ.
ಕರಾಚಿಯಲ್ಲಿ ನಡೆಯಲಿರುವ ಅಜಾದ್ ಇ ಕಾಶ್ಮೀರ ರ್ಯಾಲಿ ಕುರಿತ ಪೋಸ್ಟರ್ ಗಳು ಹೊರಬಿದಿದ್ದು, ಅದರಲ್ಲಿ ಜಾಗತಿಕ ಉಗ್ರ, ಪಠಾಣಕೋಟ್ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜಾದ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾನೆ. ಕಾಶ್ಮೀರದ ಪ್ರಮುಖ ನಗರ ಕರಾಚಿಯಲ್ಲಿ ಈ ರ್ಯಾಲಿ ನಡೆಯುತ್ತಿರುವುದು ಕಾಶ್ಮೀರದ ಭಯೋತ್ಪಾದನಾ ಬೆಂಬಲಿಗ ನೀತಿ ಬಹಿರಂಗವಾಗಿದೆ.
ತನ್ನ ನೆಲದಲ್ಲೇ ಜಾಗತಿಕ ಉಗ್ರನಿಗೆ ರ್ಯಾಲಿಯಲ್ಲಿ ಮಾತನಾಡಲು ಅವಕಾಶ ನೀಡುತ್ತಿರುವುದು ಪಾಕ್ ಸದಾ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಜಾಗತೀಕ ಉಗ್ರರಾದ ಮಸೂದ್ ಮತ್ತು 26/11ರ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ವಿರುದ್ಧ ಉದ್ದೇಶ ಪೂರ್ವಕವಾಗಿ ಸೂಕ್ತ ದಾಖಲೆಗಳಿಲ್ಲ ಎಂಬ ನೆಪ ಹೇಳುತ್ತಿದೆ.
ಇನ್ನು ಇತ್ತೀಚೆಗೆ ಹಫೀಜ್ ಸಯೀದ್ ಸ್ವಂತ ಪಕ್ಷ ಘೋಷಿಸಿದ್ದು, ಪಾಕ್ ಸರ್ಕಾರಕ್ಕೆ ಭೀತಿ ಎದುರಾಗಿದ್ದು, ಮುಂಬಲಿರುವ ಚುನಾವಣೆಯಲ್ಲಿ ಸಯೀದ್ ಪಕ್ಷದಿಂದ ಹೊಡೆತ ತಪ್ಪಿಸಿಕೊಳ್ಳಲು ಭಯೋತ್ಪಾದಕರಿಗೆ ಪರೋಕ್ಷವಾಗಿ ನೆರವು ನೀಡುತ್ತಿದೆ.
Leave A Reply