ಬ್ರಿಟಿಷ್ ಗುಲಾಮಗಿರಿ ಸಂಕೇತವಾಗಿರುವ ಕಾಯಿದೆ ರದ್ದುಪಡಿಸಲು ಯೋಗಿ ಸರ್ಕಾರ ನಿರ್ಧಾರ
ಲಖನೌ: ಭಾರತವನ್ನು 200 ವರ್ಷ ಆಳಿದ ಬ್ರಿಟಿಷರು ಜಾರಿಗೆ ತಂದಿರುವ ನಿಯಮಗಳಿಗೆ ಜೋತು ಬಿದ್ದಿರುವಾಗಲೇ. ಕಾಂಗ್ರೆಸ್ ನಂತಹ ಪಕ್ಷ 70 ವರ್ಷ ಆಡಳಿತವನ್ನು ಬ್ರಿಟಿಷರ ನಿಯಮಗಳಂತೆ ಆಡಳಿತ ನಡೆಸಿದ್ದಾರೆ. ಆದರೆ ಇದೀಗ ಗುಲಾಮಗಿರಿಯ ಸಂಕೇತವಾಗಿರುವ, ಅಪ್ರಸ್ತುತವಾಗಿರುವ ಬ್ರಿಟಿಷರ ಕಾಲದ ಕೆಲವು ಕಾಯಿದೆಗಳನ್ನು ರದ್ದುಪಡಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
150 ಕ್ಕೂ ಹೆಚ್ಚು ವರ್ಷ ಹಳೆಯದಾಗಿರುವ ಬ್ರಿಟಿಷರ ಕಾಲದ 1,000ಕ್ಕೂ ಹೆಚ್ಚು ಕಾಯಿದೆಗಳನ್ನು ರದ್ದುಪಡಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ರದ್ದುಪಡಿಸುವ ವಿಧೇಯಕ ಸರ್ಕಾರ ಮಂಡಿಸಲಿದೆ ಎಂದು ಉತ್ತರ ಪ್ರದೇಶದ ಕಾನೂನು ಸಚಿವ ಬೃಜೇಶ್ ಪಾಠಕ್ ತಿಳಿಸಿದ್ದಾರೆ.
ಕಾನೂನು ಇಲಾಖೆ ಸಿದ್ಧಪಡಿಸಿದ ಪಟ್ಟಿಯಲ್ಲಿ, ‘ಸಂಯುಕ್ತ ಪ್ರಾಂತ್ಯ ಕಾಯಿದೆಯಾದ 1890’ ಕೂಡ ಸೇರಿದೆ. 1896ರ ಅಕ್ಟೋಬರ್ 16ರಂದು ಬ್ರಿಟಿಷ್ ಗವರ್ನರ್ ಜನರಲ್ ಇನ್ ಕೌನ್ಸಿಲ್ ವಾಯುವ್ಯ ಪ್ರಾಂತ್ಯ ಹಾಗೂ ಅವಧ್‌ನ ಆಡಳಿಕ್ಕಾಗಿ ಈ ಕಾಯಿದೆ ರೂಪಿಸಿದ್ದರು.
ಸಂಯುಕ್ತ ಪ್ರಾಂತ್ಯಗಳಿಂದ ಪ್ರತ್ಯೇಕಗೊಂಡು ಉತ್ತರ ಪ್ರದೇಶ ರಾಜ್ಯ ರಚನೆಯಾಗಿ 68ನೇ ವಾರ್ಷಿಕ ಆಚರಣೆಯನ್ನು ವಾರದ ಹಿಂದೆಯಷ್ಟೇ ಯೋಗಿ ಸರಕಾರ ಆಚರಿಸಿತ್ತು. ಡಿಸೆಂಬರ್‌ನಲ್ಲಿ ಕೇಂದ್ರ ಸರಕಾರ ಕೂಡ 245 ಪುರಾತನ ಕಾನೂನಗಳನ್ನು ರದ್ದುಪಡಿಸುವ 2 ವಿಧೇಯಕಗಳನ್ನು ಅಂಗೀಕರಿಸಿತ್ತು.
Leave A Reply