ಹಿಂದೂ ಯುವಕನ ಹತ್ಯೆ ಮಾಡಿದ ಮತಾಂಧ ಸಲೀಮ್ ನನ್ನು ಬಂಧಿಸಿದ ಯೋಗಿ ಸರ್ಕಾರ
ಲಖನೌ: ಗಣರಾಜ್ಯೋತ್ಸವದಂದು ಉತ್ತರ ಪ್ರದೇಶದ ಕಸಗಂಜ್ ನಲ್ಲಿ ತಿರಂಗಾ ರ್ಯಾಲಿ ಮೇಲೆ ದಾಳಿ ಮಾಡಿ, ಹಿಂದೂ ಯುವಕ ಚಂದನ ಗುಪ್ತಾ ಸಾವಿಗೆ ಕಾರಣವಾಗಿದ್ದ ಮತಾಂಧ ಸಲೀಮ್ ನನ್ನು ಉತ್ತರ ಪ್ರದೇಶ ಪೊಲೀಸರು ಹೆಡೆ ಮುರಿಕಟ್ಟಿ ಬಂಧಿಸಿದ್ದಾರೆ.
ಗಣರಾಜ್ಯೋತ್ಸವದಂದು ತಿರಂಗಾ ರ್ಯಾಲಿ ನಡೆಸುತ್ತಿದ್ದ ರಾಷ್ಟ್ರವಾಧಿ ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಳಿ ನಡೆಸಿ, ಹಿಂಸಾಚಾರ ನಡೆಸಲಾಗಿತ್ತು. ಈ ಘಟನೆಯಲ್ಲಿ ಮತಾಂಧ ಸಲೀಮ್ ಪ್ರಮುಖ ಆರೋಪಿಯಾಗಿದ್ದ. ಅಲ್ಲದೇ ರ್ಯಾಲಿ ವೇಳೆ ಕೆಲ ದೇಶದ್ರೋಹಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದಲ್ಲದೇ, ಪಾಕಿಸ್ತಾನದ ಧ್ವಜ ಹಾರಿಸುವ ಮೂಲಕ ದೇಶದ್ರೋಹ ಎಸಗಿದ್ದರು.
ರಾಷ್ಟ್ರವಾದಿ ಸಂಘಟನೆಗಳ ಯುವಕ ಚಂದನ ಗುಪ್ತಾ ಸಾವಿಗೆ ಕಾರಣರಾದವರನ್ನು ಶೀಘ್ರದಲ್ಲಿ ಬಂಧಿಸಿ, ದೇಶದ್ರೋಹಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯೋಗಿ ಸರ್ಕಾರ ಸಫಲವಾಗಿದೆ.
ಸಲೀಮ್ ಮನೆಯಲ್ಲಿ ಸಿಕ್ಕಿತ್ತು ಬಾಂಬ್
ಕಾಸಗಂಜ್ ಹಿಂಸಾಚಾರದ ಪ್ರಮುಖ ಆರೋಪಿ ಸಲೀಮ್ ಮನೆಯಲ್ಲಿ ಪೊಲೀಸರು ದಾಳಿ ನಡೆಸಿದಾಗ ದುಷ್ಕೃತ್ಯ ಎಸಗಲು ಬಾಂಬ್ ಮತ್ತು ಪಿಲ್ತೂಲ್ ಇಟ್ಟುಕೊಂಡಿರುವುದು ಪತ್ತೆಯಾಗಿತ್ತು. ಅಲ್ಲದೇ ಹಿಂಸಾಚಾರ ಒಂದು ಪೂರ್ವನಿಯೋಜಿತ ಘಟನೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿತ್ತು. ಇದೀಗ ಯೋಗಿ ಆದಿತ್ಯನಾಥ ಸರ್ಕಾರದ ದಿಟ್ಟ ನಡೆಗಳಿಂದ, ಮತಾಂಧ ಶಕ್ತಿಗಳು ಪತರಗುಟ್ಟಿದ್ದು, ಕಠಿಣ ಕ್ರಮಗಳನ್ನು ಯೋಗಿ ಕೈಗೊಂಡು ಮತಾಂಧ ಅಟ್ಟಹಾಸಕ್ಕೆ ನಿಯಂತ್ರಣ ಹೇರುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಶಾಂತಿ ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ. ಜಾತಿ, ಧರ್ಮ ಮೀರಿ ರಾಜ್ಯದ ಪ್ರತಿ ನಾಗರೀಕರನ್ನು ರಕ್ಷಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ಸ್ಪಷ್ಟಪಡಿಸಿದ್ದಾರೆ.
Leave A Reply