• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಶರತ್ ಹೆತ್ತವರಿಗೆ ಮಗನ ಕಣ್ಣುಗಳನ್ನು ದಾನ ಮಾಡಲಾಗಿಲ್ಲ, ಯಾಕೆ?

TNN Correspondent Posted On July 13, 2017


  • Share On Facebook
  • Tweet It

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ಥ ಶರತ್ ಮಡಿವಾಳರ ಮೇಲೆ ನರಹಂತಕರು ದಾಳಿ ಮಾಡಿದ್ದು ಜುಲೈ 4ರ ರಾತ್ರಿ ಸುಮಾರು ಒಂಭತ್ತು ಘಂಟೆಗೆ. ಸಾವು ಬದುಕಿನ ಹೋರಾಟದಲ್ಲಿ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದ ಶರತ್ ಕೊನೆಯುಸಿರೆಳೆದದ್ದು ಜುಲೈ 6ರ ಮಧ್ಯರಾತ್ರಿ 12.30. ಆದರೆ ಶರತ್ ಸಾವು ಘೋಷಣೆಯಾಗಿದ್ದು ಮಾತ್ರ ಜುಲೈ 7ರ ರಾತ್ರಿ 8.30ಕ್ಕೆ ಎಜೆ ಆಸ್ಪತ್ರೆಯಿಂದ ಸಿಕ್ಕಿರುವ ವರದಿಯಲ್ಲಿ ಸ್ಪಷ್ಟವಾಗಿ ಆತನ ಸಾವಿನ ಸಮಯವನ್ನು ಉಲ್ಲೇಖಿಸಲಾಗಿದೆ.

ಶರತ್ ಸತ್ತ 20 ಗಂಟೆಯವರೆಗೆ ಅದನ್ನು ಹೊರಜಗತ್ತಿಗೆ ತಿಳಿಸಲು ಯಾಕೆ ಹಿಂಜರಿಯಲಾಯಿತು ಎಂದು ಆಸ್ಪತ್ರೆಯವರು ತಿಳಿಸಬೇಕಿದೆ. ಅವರಿಗೆ ಯಾವುದಾದರೂ ಜನಪ್ರತಿನಿಧಿ ಅಥವಾ ರಾಜಕಾರಣಿಯಿಂದ ಈ ರಹಸ್ಯವನ್ನು ಮುಚ್ಚಿಡಲು ಒತ್ತಡವಿತ್ತೆ ಎಂದು ಕೂಡ ಜನರಿಗೆ ಗೊತ್ತಾಗಬೇಕಿದೆ. ಕನಿಷ್ಟ ಶರತ್ ನ ಹೆತ್ತ ತಾಯಿ, ತಂದೆ, ಸಹೋದರಿಯರಿಗೂ ವಿಷಯ ತಿಳಿಸದೆ ಇದ್ದ ಕಾರಣವಾದರೂ ಏನು? ಮಗ ಬದುಕಿ ಬರುತ್ತಾನೆ ಎಂದು ಅವರು ಈ ಸಮಯದಲ್ಲಿ ಅದೆಷ್ಟೋ ಬಾರಿ ದೇವರ ಬಳಿ ಪ್ರಾರ್ಥನೆ ಮಾಡಿರಬಹುದು. ಈಗ ಅದನ್ನೆಲ್ಲ ಯೋಚಿಸಿದರೆ ಅವರಿಗೆ ಇದರಿಂದ ಎಷ್ಟು ಆಘಾತವಾಗಿರಬಹುದು.

ಜುಲೈ 7 ರಂದು ಮಂಗಳೂರಿನ ಹೊರವಲಯದ ಅಡ್ಯಾರ್ ನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚನೆಯೇ ಇದಕ್ಕೆ ಕಾರಣವಾಗಿರಬಹುದೇ ಎಂದು ಕೂಡ ಜನರು ಪ್ರಶ್ನಿಸುತ್ತಿದ್ದಾರೆ. ಶರತ್ ಬದುಕಿ ಬರದೇ ಇದ್ದರೆ ಅವನ ಅಂಗಾಗಗಳನ್ನಾದರೂ ಅಗತ್ಯ ಇದ್ದವರಿಗೆ ದಾನ ಮಾಡಿ ತಮ್ಮ ಮಗನ ಸಾವಿನಲ್ಲಿಯೂ ಸಾರ್ಥಕತೆ ಕಾಣಲು ಶರತ್ ಹೆತ್ತವರು ಬಯಸಿದ್ದರು. ಇನ್ನು ಈಗಿನ ಆಧುನಿಕ ತಂತ್ರಜ್ಞಾನದಿಂದ ಬೇರೆ ಅಂಗಗಳನ್ನು ಇತರರಿಗೆ ದಾನ ಮಾಡಿದ್ದರೆ ಅದರಿಂದ ಅವನ ಸಾವಿನಲ್ಲಿಯೂ ನಾಲ್ಕು ಜನರಿಗೆ ಉಪಕಾರವಾಗುವ ಸಾಧ್ಯತೆ ಇತ್ತು. ಶರತ್ ನ ಕಣ್ಣುಗಳನ್ನು ಆತ ಮರಣ ಹೊಂದಿದ ಆರು ಗಂಟೆಯೊಳಗೆ ದಾನ ಮಾಡಿದ್ದರೆ ಇಬ್ಬರು ಅಂಧರಿಗಾದರೂ ಅದರ ಪ್ರಯೋಜನ ಸಿಗುತ್ತಿತ್ತು. ಆದರೆ ತಮ್ಮ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಬಿಜಿ ಯಾಗಿರುವ ಮುಖ್ಯಮಂತ್ರಿಗಳಿಗೆ ಇಂತಹ ಮಾನವೀಯ ಕಳಕಳಿ ಇರಲು ಸಾಧ್ಯವಿಲ್ಲ ಎಂದು ಜನರ ಅಭಿಪ್ರಾಯ. ಸಚಿವತ್ರಯರಾದ ರಮಾನಾಥ ರೈ, ಯುಟಿ ಖಾದರ್, ಶಾಸಕತ್ರಯರಾದ ಜೆ ಆರ್ ಲೋಬೋ, ಐವನ್ ಡಿಸೋಜಾ ಅವರೇ ದಕ್ಷಿಣ ಕನ್ನಡದ ಮಣ್ಣಿನಲ್ಲಿ ಹುಟ್ಟಿದರೂ ನೀವು ಮನುಷತ್ವವನ್ನು ರಾಜಕೀಯಕ್ಕಾಗಿ ಮರೆತದ್ದು ಸರಿಯಾ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಯಾವುದೇ ಜಾತಿ, ಮತ, ಧರ್ಮ, ಪಕ್ಷ, ಸಂಘಟನೆಯಲ್ಲಿಯೂ ಇಲ್ಲದ ಜನರಿಗೂ ಶರತ್ ಸಾವನ್ನು ತಡವಾಗಿ ಬಹಿರಂಗ ಪಡಿಸಲು ಇದ್ದ ಕಾರಣಗಳು ತಿಳಿಯುತ್ತಿಲ್ಲ. ಒಂದೆಡೆ ಯಾರಾದರೂ ಸಾವನ್ನು ಅಪ್ಪಿದರೆ ತಕ್ಷಣ ವೈದ್ಯರಿಗೆ ತಿಳಿಸಿ, ಮೃತ ವ್ಯಕ್ತಿಯ ಕಣ್ಣುಗಳನ್ನು ಬೇರೆಯವರಿಗೆ ದಾನ ಮಾಡಲು ಅನುಕೂಲವಾಗುತ್ತದೆ ಎಂದು ಸರಕಾರವೇ ಪ್ರಚಾರ ಮಾಡುತ್ತದೆ. ಮತ್ತೊಂದೆಡೆ ಬ್ರೈನ್ ಡೆಡ್ ಆಗಿರುವ ವ್ಯಕ್ತಿಯ ಅಂಗಾಂಗಗಳನ್ನು ಬೇರೆಯವರಿಗೆ ಅಳವಡಿಸುವ ಕ್ರಿಯೆಯಲ್ಲಿ ಎಜೆ ಆಸ್ಪತ್ರೆ ಸಾಧನೆ ಮಾಡಿದೆ. ಹಾಗಿರುವಾಗ ಶರತ್ ಸಾವಿನಲ್ಲಿ ಯಾಕೆ ಹೀಗೆ ಮಾಡಲಾಯಿತು ಎನ್ನುವುದು ಮಾನವೀಯ ಅಂತಕರಣ ಉಳ್ಳ ಪ್ರತಿಯೊಬ್ಬರ ಪ್ರಶ್ನೆ. ಸ್ವತ: ಆತನ ಪೋಷಕರೇ ಮನಸ್ಸು ಗಟ್ಟಿ ಮಾಡಿ ದಾನಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ ಜಿಲ್ಲಾಡಳಿತ, ಆಸ್ಪತ್ರೆ, ರಾಜಕಾರಣಿಗಳ ಮೌನ ಎಲ್ಲರನ್ನೂ ಅಸಹ್ಯಕ್ಕಿಡು ಮಾಡಿದೆ.

  • Share On Facebook
  • Tweet It


- Advertisement -


Trending Now
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
Tulunadu News March 23, 2023
ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
Tulunadu News March 22, 2023
Leave A Reply

  • Recent Posts

    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
    • ಯಾವ ಮುಸ್ಲಿಂ ರಾಜ ಜಾಗ ಕೊಟ್ಟಿದ್ದು ಮಿಥುನ್ ರೈ!!
  • Popular Posts

    • 1
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 2
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 3
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 4
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • 5
      ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search