ರೋಹಿಂಗ್ಯಾಗಳಿಗೆ ಆಶ್ರಯ ನೀಡಲು ಭಾರತ ನಿರಾಶ್ರಿತರ ತಾಣವಲ್ಲ
ದೆಹಲಿ: ಭಾರತದಲ್ಲಿ ಅಕ್ರಮವಾಗಿ ನುಸುಳಿ ಆಶ್ರಯ ಪಡೆಯುತ್ತಿರುವ ರೋಹಿಂಗ್ಯಾ ಮುಸ್ಲಿಮರಿಗೆ ರಕ್ಷಣೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದವರಿಗೆ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡಿದ್ದು, ರೋಹಿಂಗ್ಯಾಗಳಿಗೆ ಆಶ್ರಯ ನೀಡಲು ಭಾರತ ನಿರಾಶ್ರಿತರ ತಾಣವಲ್ಲ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಭಾರತದ ಗಡಿಯಲ್ಲಿ ಬಿಎಸ್ ಎಫ್ ಸೈನಿಕರು ರೋಹಿಂಗ್ಯಾಗಳನ್ನು ಸ್ಟೇನ್ ಗನ್ ಮತ್ತು ಖಾರದ ಪುಡಿ ಎರಚಿ ಅವರನ್ನು ಭಾರತವನ್ನು ಪ್ರವೇಶಿಸುವುದನ್ನು ತಡೆಯುತ್ತಿದ್ದಾರೆ. ಇದು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಸಿದಂತೆ. ಕೂಡಲೇ ಅದಕ್ಕೆ ತಡೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಉತ್ತರಿಸುವ ಕೇಂದ್ರ ಸರ್ಕಾರ ಎಲ್ಲರನ್ನೂ ಭಾರತದೊಳಕ್ಕೆ ಬಿಟ್ಟುಕೊಳ್ಳಲು ಆಗುವುದಿಲ್ಲ. ಭಾರತ ನಿರಾಶ್ರೀತರ ರಾಜಧಾನಿಯಲ್ಲ. ಆಕಸ್ಮಿಕವಾಗಿ ಪ್ರವೇಶಿಸಿ ಒಳ ಬಂದಾಗ ಅವರಿಗೆ ರಕ್ಷಣೆ ನೀಡೋಣ. ಆದರೆ ಬರುವವರೆಲ್ಲರನ್ನು ಬಿಟ್ಟುಕೊಳ್ಳಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತದ ರಕ್ಷಣಾ ಪಡೆಗಳು ದೇಶದ ಸೌರ್ವಭೌಮತ್ವವನ್ನು ರಕ್ಷಿಸುವ ಕಾರ್ಯ ಮಾಡುತ್ತಿವೆ. ನಿರಾಶ್ರಿತರ ಪ್ರವೇಶ ತಡೆದು ಹಿಂದಕ್ಕೆ ಕಳುಹಿಸಲಾಗುವುದು. ರೋಹಿಂಗ್ಯಾ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Leave A Reply