ಪ್ರಕಾಶ್ ರೈ, ನೀವು ಪ್ರಗತಿಪರರೋ, ವಿಚಾರ ನಪುಂಸಕರೋ? ಈ ಹಿಂದೂವಿನ ಹತ್ಯೆಯನ್ನು ಖಂಡಿಸುವಿರೋ?
ಕರ್ನಾಟಕದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾವೇರಿ ವಿವಾದ ಕುರಿತು ಟಿವಿ ಆ್ಯಂಕರ್ ಪ್ರಶ್ನೆ ಕೇಳುತ್ತಲೇ ಯಾಕ್ರೀ ವಿವಾದ ಸೃಷ್ಟಿಸುತ್ತೀರಿ ಎಂದು ಕರೆಂಟು ಹೊಡೆಸಿಕೊಂಡ ಕಾಗೆಯಂತೆ ಮೈಕ್ ಬಿಸಾಕಿ ಎದ್ದು ಹೋದ ಪ್ರಕಾಶ್ ರೈ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗುತ್ತಲೇ, ನರಿಯಂತೆ ಬಂದು ಏನಾಗ್ತಿದೆರೀ ಕರ್ನಾಟಕದಲ್ಲಿ ಎಂದು ಪ್ರಶ್ನೆ ಕೇಳಿದರು.
ಅಲ್ಲಿಂದ ಶುರುವಾಯಿತು, ಈ ಪ್ರಕಾಶ್ ರೈ ಎಂಬ ನಟನ ನಟನೆ. ಕೇರಳದಲ್ಲಿ ಹಿಂದೂ, ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗುತ್ತಿದ್ದರೆ, ಅದನ್ನು ಖಂಡಿಸುವುದನ್ನು ಬಿಟ್ಟು, ಕೇರಳವೇ ಸೇಫ್ ಎಂದರು. ನಾನು ಹಿಂದೂಗಳ ವಿರೋಧಿಯಲ್ಲ, ಬಿಜೆಪಿ, ಮೋದಿ, ಅನಂತಕುಮಾರ ಹೆಗಡೆ ವಿರೋಧಿ ಅಂದರು. ಆದರೆ ಕರ್ನಾಟಕದಲ್ಲಿ ಸಾಲು ಸಾಲು ಹಿಂದೂಗಳ ಕೊಲೆಯಾದರೂ ಖಂಡಿಸುವುದನ್ನು ಮರೆತರು.
ಮೊನ್ನೆಯಷ್ಟೇ ಗೌರಿ ದಿನ ಎಂಬ ಕಾರ್ಯಕ್ರಮ ಆಯೋಜಿಸಿದ ಈ ಉಪದ್ವ್ಯಾಪಿ, ದೇಶದ್ರೋಹಿ ಹೇಳಿಕೆ ನೀಡಿದವರನ್ನು ಕರೆಸಿ ಬಿಜೆಪಿ ವಿರುದ್ಧ ಮಾತನಾಡಿಸಿದರು. ಅಷ್ಟೇ ಅಲ್ಲ, ಬುಧವಾರವಷ್ಟೇ ಮೈಕ್ ಹಿಡಿದ ಈ ನಟ, 2014ರ ಬಳಿಕ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ತನ್ನ ಎಲುಬಿಲ್ಲದ ನಾಲಗೆಯನ್ನು ಹರಿಬಿಟ್ಟಿದ್ದಾರೆ.
ಇದೆಂಥ ಬೌದ್ಧಿಕ ದಿವಾಳಿತನ ಪ್ರಕಾಶ್ ರೈ ನಿಮ್ದು? ಇದೆಂಥ ವಿಚಾರ ನಪುಂಸಕತನ? ನಿಮ್ಮ ಮಿದುಳಿಗೆ ಏನಾಗಿದೆ? ನೀವ್ಯಾವ ಸೀಮೆ ಪ್ರಗತಿಪರರ ಮಾರ್ರೇ? ನಿಮ್ಮ ತರ್ಕಕ್ಕೆ ಯಾವ ದೆವ್ವ ಮೆಟ್ಟಿಕೊಂಡಿದೆ? ಏನಾಗಿದೆ ನಿಮಗೆ? ಯಾರನ್ನು ಮೆಚ್ಚಿಸಲು ಹೀಗೆ ಮಾತನಾಡುತ್ತಿದ್ದೀರಿ? ನಿಮಗೆ ನಿಜವಾಗಿಯೂ ಬುದ್ಧಿ ಇದೆಯೇ ಪ್ರಕಾಶ್ ರೈ?
ಹೌದು, ಹೀಗಂತ ಈ ನಟನನ್ನು ಪ್ರಶ್ನಿಸಲೇಬೇಕಾಗಿದೆ. ಕಠೋರ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಳ್ಳಲೇಬೇಕಾಗಿದೆ. ನೀವೇ ಯೋಚನೆ ಮಾಡಿ. “ಗೌರಿದಿನ” ಎಂಬ ಕಾರ್ಯಕ್ರಮ ಗೌರಿ ಲಂಕೇಶ್ ಜನ್ಮದಿನದ ಪ್ರಯುಕ್ತ ಆಚರಿಸಿದ್ದು. ಅದರಲ್ಲಿ ಗೌರಿ ಲಂಕೇಶ್ ಸಾವಿನ ತನಿಖೆಯಾಗಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕಿತ್ತು. ಸಿಬಿಐಗೆ ವಹಿಸಿ ಪ್ರಕರಣವನ್ನು ಎಂದು ಆಗ್ರಹಿಸಬಹುದಿತ್ತು. ಆದರೆ ಅದನ್ನು ಬಿಟ್ಟು ಇಡೀ ಕಾರ್ಯಕ್ರಮವನ್ನು ಬಿಜೆಪಿ ವಿರುದ್ಧದ ಸಮಾವೇಶ ಮಾಡಿಬಿಟ್ಟರು. ಅದಕ್ಕೆ ಜೆಎನ್ ಯು ವಿದ್ಯಾರ್ಥಿಗಳ ಸಾಥ್ ಬೇರೆ ಇತ್ತು. ನಮ್ಮ ದೊರೆಸ್ವಾಮಿ ಅವರೂ ಕಾಂಗ್ರೆಸ್ ವಕ್ತಾರರಂತೆ ಮಾತನಾಡಿಬಿಟ್ಟರು.
ಇನ್ನು ಈ ರೈ ಎಂಬ ತಥಾಕಥಿಕ ಬಿಜೆಪಿ ವಿರೋಧಿಯ, ಕಾಂಗ್ರೆಸ್ ಮನಸ್ಸಿನ, ಆದರೂ ವಿತಂಡವಾದ ಮಂಡಿಸುವ ಮಹಾಶಯನ ತರ್ಕ ನೋಡಿ. 2014ರ ಬಳಿಕ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಾವಿಗೆ ಮೋದಿಯವರೇ ಕಾರಣವಂತೆ.
ಅಲ್ಲ ಸ್ವಾಮಿ ಕರ್ನಾಟಕ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಮಾಡಿಕೊಂಡರೂ, ಅದನ್ನು ತಡೆಯುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲವೇ? ನಿಮಗೆ ಕೇಂದ್ರದ ಮೋದಿ ಕಾಣುತ್ತಾರೆಯೇ ಹೊರತು, ರಾಜ್ಯದಲ್ಲಿ 3500 ರೈತರು ಆತ್ಮಹತ್ಯೆ ಮಾಡಿಕೊಂಡರೂ, ಸಾಲ ಮನ್ನಾ ಮಾಡಲು ಮೀನಮೇಷ ಎಣಿಸಿದ ಸಿದ್ದರಾಮಯ್ಯನವರು ಕಾಣುವುದಿಲ್ಲ? ಇದೆಂಥ ಇಬ್ಬಂದಿತನ ಸ್ವಾಮಿ?
ಕರ್ನಾಟದಕಲ್ಲಿ 3500 ರೈತರು ಆತ್ಮಹತ್ಯೆ ಮಾಡಿಕೊಂಡರೂ ರಾಜ್ಯ ಸರ್ಕಾರವನ್ನು ಟೀಕಿಸದ ನೀವು, ರಾಜ್ಯದಲ್ಲಿ 22 (ಸಂತೋಷ್ ಸೇರಿ) ಹಿಂದೂಗಳ ಹತ್ಯೆಯಾದರೂ ಸರ್ಕಾರದ ವಿರುದ್ಧ ಕನಿಷ್ಠ ಗುಟುರು ಹಾಕದ ನೀವು, ಮೋದಿ ಅವರ ವಿರುದ್ಧ ಬರೀ ಬೊಂಬ ಹೊಡೆದುಕೊಂಡು ತಿರುಗಾಡಿದರೆ, ಕೇಳಲು ಇಲ್ಯಾರೂ ಮೂರ್ಖರಿಲ್ಲ ಪ್ರಕಾಶ್ ರೈ!
Leave A Reply