ಹುತಾತ್ಮ ಯೋಧರ ಕುಟುಂಬದವರಿಗೆ ಸರ್ಕಾರ ನೌಕರಿ ನೀಡಲು ಯೋಗಿ ನಿರ್ಧಾರ
Posted On February 1, 2018
ಲಖನೌ: ದೇಶದ ರಕ್ಷಣೆಗಾಗಿ ತಮ್ಮ ಕುಟುಂಬವನ್ನು ಬಿಟ್ಟು ಹೋರಾಡುವಾಗ, ಹುತಾತ್ಮರಾಗುವ ಯೋಧರನ್ನೇ ಆಶ್ರಯಿಸಿದವರ ನೆರವಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿರ್ಧರಿಸಿದ್ದು, ಹುತಾತ್ಮ ಯೋಧರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಲು ನಿರ್ಧರಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಸಶಸ್ತ್ರ ಸೇನಾ ಪಡೆಯ ಮತ್ತು ಪ್ಯಾರಾ ಮಿಲಿಟರಿ ಪಡೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಹುತಾತ್ಮರಾದ ಯೋಧರ ಕುಟುಂಬದವರಿಗೆ ಸಹಾಯ ನೀಡಲು ನಿರ್ಧರಿಸಿದ್ದಾರೆ. ಈ ಮೂಲಕ ದೇಶಕ್ಕಾಗಿ ಹೋರಾಡಿದ ಯೋದರು ಹುತಾತ್ಮರಾದ ನಂತರ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಸ್ಥರಿಗೆ ನೆರವು ನೀಡಿದ್ದಾರೆ.
ಇದು ಯೋಧರಿಗೆ ನಾವು ಸಲ್ಲಿಸುತ್ತಿರುವ ಗೌರವ ಸಮರ್ಪಣೆ. ಇದರಿಂದ ಯೋಧರ ಕುಟುಂಬಕ್ಕೆ ನೆರವಾಗುತ್ತದೆ. ಯೋಧರಿಗೆ ಸ್ಫೂರ್ತಿ ನೀಡಿದಂತಾಗುತ್ತದೆ. ಅಲ್ಲದೇ ಹೊಸದಾಗಿ ಸೇನೆ ಸೇರುವವರಿಗೆ ಪ್ರೇರಣೆ ದೊರೆಯುತ್ತದೆ. ಆದ್ದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಉತ್ತರ ಪ್ರದೇಶದ ರಾಜ್ಯ ಖಾತೆ ಸಚಿವ ಶ್ರೀಕಾಂತ ಶರ್ಮಾ ತಿಳಿಸಿದ್ದಾರೆ.
- Advertisement -
Leave A Reply