ಮುಸ್ಲಿಂ ಹುಡುಗಿಯನ್ನು ಇಷ್ಟಪಟ್ಟಿದ್ದೇ ಆ ಹಿಂದೂವಿನ ಜೀವಕ್ಕೆ ಕುತ್ತು ತಂದಿತು!
ದೆಹಲಿ: ದೇಶದಲ್ಲಿ ಲವ್ ಜಿಹಾದ್ ಹಾಗೂ ಬಲವಂತದ ಮತಾಂತರ ಪ್ರಕರಣಗಳು ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದೇ, ಆತನ ಬಾಳಿಗೆ ಮುಳುವಾಗಿದ್ದು, ಯುವತಿಯ ಸಂಬಂಧಿಕರೇ ಆತನ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿವೆ.
ಪೂರ್ವ ದೆಹಲಿಯ ಕೈಯಾಲ ಎಂಬಲ್ಲಿ ಮುಸ್ಲಿಂ ಯುವತಿಯನ್ನು ಮನಸಾರೆ ಪ್ರೀತಿಸುತ್ತಿದ್ದ, ಛಾಯಾಗ್ರಾಹಕನಾಗಿದ್ದ 23 ವರ್ಷದ ಅಂಕಿತ್ ಎಂಬಾತನನ್ನು ಯುವತಿಯ ಸಂಬಂಧಿಕರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಹಿಂದೂ ಯುವಕನೊಬ್ಬ ತಮ್ಮ ಧರ್ಮದ ಯುವತಿಯನ್ನು ಪ್ರೀತಿಸಿದ ಎಂಬ ದ್ವೇಷಕ್ಕೆ ಹೀಗೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಂಕಿತ್ ಹಾಗೂ ಶೆಹ್ಜಾದಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಇಬ್ಬರೂ ಮದುವೆಯಾಗಲು ನಿಶ್ಚಿದ್ದರು. ಆದರೆ ಯುವತಿಯ ಕುಟುಂಬಕ್ಕೆ ಇದು ಇಷ್ಟವಿರಲಿಲ್ಲ. ಹಾಗಾಗಿ ಕುಟುಂಬಸ್ಥರೇ ಅಂಕಿತ್ ನನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ಇದೆ. ಇದೇ ಕಾರಣಕ್ಕಾಗಿಯೇ ಯುವತಿಯ ಕುಟುಂಬದ ಮೂವರನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಹುಡುಕುತ್ತಿದ್ದೇವೆ ಎಂದು ಡಿಸಿಪಿ ವಿಜಯ್ ಸಿಂಗ್ ತಿಳಿಸಿದ್ದಾರೆ.
ನನ್ನ ಕುಟುಂಬದವರೇ ಕೊಂದರು ಎಂದ ಯುವತಿ
ನಾನು ಅವನನ್ನು ಭೇಟಿಯಾಗಲು ಹೋಗಬಯಸಿದ್ದೆ. ಆದರೆ ಅಷ್ಟೊತ್ತಿಗಾಗಲೇನನ್ನ ಕುಟುಂಬಸ್ಥರೇ ನಾನು ಮದುವೆಯಾಗಲು ಇಚ್ಛಿಸಿದ ಹುಡುಗನನ್ನು ಕೊಂದಿದ್ದಾರೆ. ನಾವಿಬ್ಬರೂ ಮದುವೆಯಾಗುವ ಕುರಿತು ಚರ್ಚಿಸಿದ ವಿಷಯ ನನ್ನ ಚಿಕ್ಕಪ್ಪನಿಗೆ ಗೊತ್ತಾಗಿದ್ದು, ಆತನೇ ಅಂಕಿತ್ ನನ್ನು ಕೊಂದಿದ್ದಾನೆ. ಈಗ ನನ್ನ ಕುಟುಂಬದ ಬಗ್ಗೆಯೇ ನನಗೆ ಭಯವಾಗುತ್ತಿದೆ ಎಂದು ಶೆಹ್ಜಾದಿ ತಿಳಿಸಿದ್ದಾರೆ.
ಒಂದೆಡೆ ಪ್ರೀತಿ ಪ್ರೇಮದ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಪ್ರೀತಿಸಿ ಮತಾಂತರವಾದ ಬಳಿಕ ಕೈಬಿಡುತ್ತಿರುವ ಪ್ರಕರಣ ಹಿಂದೂಗಳನ್ನು ಬೆಚ್ಚಿಬೀಳಿಸುತ್ತಿದ್ದರೆ, ಇನ್ನೊಂದೆಡೆ ಮನಸಾರೆ ಪ್ರೀತಿಸಿದ ಹಿಂದೂ ಯುವಕರನ್ನು ಕೊಲ್ಲುತ್ತಿರುವದು ಪ್ರೀತಿಗೆ ಮಾಡುವ ಅವಮಾನವಾಗಿದೆ. ಎರಡೂ ಪ್ರಕರಣಗಳಲ್ಲಿ ನರಳುತ್ತಿರುವುದು ಹಿಂದೂಗಳೇ ಎಂಬುದು ಘೋರ ದುರಂತ.
Leave A Reply