ಯೋಗಿ ಸರ್ಜಿಕಲ್ ಸ್ಟ್ರೈಕ್: 48 ಗಂಟೆಯಲ್ಲಿ 15 ಎನ್ ಕೌಂಟರ್, 24 ಕ್ರಿಮಿನಲ್ ಗಳ ಬಂಧನ, ಗ್ಯಾಂಗಸ್ಟರ್ ಶೂಟೌಟ್
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ನಂತರ ಕ್ರಿಮಿನಲ್ ಗಳನ್ನು ಹೆಡೆಮುರಿ ಕಟ್ಟುವ ಕಾರ್ಯ ಮುಂದುವರಿಸಿದ್ದು, ಕೇವಲ 48 ಗಂಟೆಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಕ್ರಿಮಿನಲ್ ಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ್ದಾರೆ.
ಕ್ರಿಮಿನಲ್ ಗಳನ್ನು ನಿಯಂತ್ರಿಸಲು ಯೋಗಿ ಸರ್ಕಾರ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದ್ದು, ಪೊಲೀಸರು 48 ಗಂಟೆಯಲ್ಲಿ 15 ಎನ್ ಕೌಂಟರ್ ಗಳನ್ನು ನಡೆದಿದ್ದು. 24 ಕ್ರಿಮಿನಲ್ ಗಳನ್ನು ಬಂಧಿಸಿ, ಒಬ್ಬ ಗ್ಯಾಂಗಸ್ಟರ್ ಶೂಟೌಟ್ ನಡೆಸಿದ್ದಾರೆ. ಉತ್ತರ ಪ್ರದೇಶದ 10 ಜಿಲ್ಲೆಗಳಲ್ಲಿ ನಡೆದ ಪೊಲೀಸ್ ಕಾರ್ಯಚರಣೆಯಲ್ಲಿ ಕ್ರಿಮಿನಲ್ ಅಟ್ಟಹಾಸಕ್ಕೆ ಬ್ರೇಕ್ ಹಾಕುತ್ತಿದ್ದಾರೆ.
ಗ್ಯಾಂಗಸ್ಟಾರ್ ನನ್ನು ಬಂಧಿಸಲು ಹೋದಾಗ ಬಾರ್ ವೊಂದರ ಹಿಂದೆ ಅಡಗಿ ಕುಳಿತು, ಪೊಲೀಸರ ಮೇಲೆ ದಾಳಿ ನಡೆಸಿದ್ದ. ಆದ್ದರಿಂದ ಪೊಲೀಸರು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ. ಬೇರೆ ದಾರಿ ಇಲ್ಲದಿರುವುದರಿಂದ ಗುಂಡಿನ ದಾಳಿ ನಡೆಸಲಾಗಿದೆ. ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ತಡೆಯೊಡ್ಡಬೇಕು ಎಂದು ಇಂತಹ ಕಾರ್ಯಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಡಿಜಿಪಿ ಒಪಿ ಸಿಂಗ್ ತಿಳಿಸಿದ್ದಾರೆ.
ಇನ್ನು ದಾಳಿಯಲ್ಲಿ 32 ಪಿಸ್ತೂಲ್, 12 ಬೋರ್ ಗನ್, ಬುಲೆಟ್ಸ್ ಮತ್ತು ಮೋಟಾರ್ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರ್ಯಚರಣೆಯಲ್ಲಿ ಭಾಗವಹಿಸುವವರಿಗೆ 50,000 ಪ್ರಶಸ್ತಿಯನ್ನು ಘೋಷಿಸಲಾಗಿದೆ.
Leave A Reply