ನೋಟ್ ಬ್ಯಾನ್ ಬಳಿಕ ಬ್ಯಾಂಕಿಗೆ 15 ಲಕ್ಷ ರು. ಠೇವಣಿ ಮಾಡಿದವರಿಗೆ ಐಟಿ ಇಲಾಖೆ ಕೈಗೊಂಡ ಕ್ರಮ ಏನು?
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್ 8ರಂದು ನೋಟ್ ಬ್ಯಾನ್ ಮಾಡಿದ ಕೈಗೊಂಡ ದಿಟ್ಟ ನಿರ್ಧಾರ ಇಂದಿಗೂ ಕಪ್ಪುಕುಳಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಹೌದು, ನೋಟು ನಿಷೇಧ, ಅಂದರೆ 2016ರ ನವೆಂಬರ್ 8ರ ಬಳಿಕ ಯಾರು ಬ್ಯಾಂಕಿಗೆ 15 ಲಕ್ಷ ರು. ಅಥವಾ ಅದಕ್ಕಿಂತ ಹೆಚ್ಚಿನ ಹಣ ಠೇವಣಿ ಮಾಡಿದ್ದಾರೋ, ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.
ನೋಟ್ ಬ್ಯಾನ್ ಡಿಸೆಂಬರ್ ನಿಂದ ಜನವರಿವರೆಗಿನ ಅವಧಿಯಲ್ಲಿ ಬಳಿಕ 15 ಲಕ್ಷ ರುಪಾಯಿವರೆಗೆ ಬ್ಯಾಂಕ್ ಖಾತೆಗೆ ಜಮೆ ಮಾಡಿಯೂ ಐಟಿ ರಿಟರ್ನ್ಸ್ ಸಲ್ಲಿಸದ ಸುಮಾರು 1.98 ಲಕ್ಷ ಜನರಿಗೆ ನೋಟಿಸ್ ನೀಡಲಾಗಿದೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಸುಶೀಲ್ ಚಂದ್ರ ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲ, ಐಟಿ ರಿಟರ್ನ್ಸ್ ಸಲ್ಲಿಸುವಲ್ಲಿ ವಿಳಂಬ, ತೆರಿಗೆ ಪಾವತಿ ಮಾಡದಿರುವಿಕೆ, ತೆರಿಗೆಯಿಂದ ನುಣುಚಿಕೊಳ್ಳುವುದು ಸೇರಿ ಹಲವು ಅಡ್ಡದಾರಿ ಹಿಡಿದ ಪ್ರಕರಣಗಳಲ್ಲಿ 3000 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
ತೆರಿಗೆ ಪಾವತಿಯಿಂದ ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ನೋಟಿಸ್ ನೀಡಲಾಗಿದ್ದು, ಎಲ್ಲರೂ ಐಟಿ ರಿಟರ್ನ್ಸ್ ಸಲ್ಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
Leave A Reply