ಗೋರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ, 4 ಕೋಟಿ ಗೋವುಗಳಿಗೆ ಆಧಾರ್ ರೀತಿಯ ಗುರುತಿನ ನಂಬರ್!
ದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಗೋವುಗಳ ರಕ್ಷಣೆಗಾಗಿ ಹಲವು ಯೋಜನೆ ಜಾರಿಗೆ ತರಲು ಮುಂದಾಗಿದ್ದು, ಪ್ರಮುಖವಾಗಿ ಗೋ ಹತ್ಯೆ ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ.
ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರುವ ಕೇಂದ್ರ ಸರ್ಕಾರ ದೇಶದಲ್ಲಿ ಹಾಲು ಕೊಡುವ ಹಸುಗಳಿಗೆ ಆಧಾರ್ ರೀತಿಯ ಸಂಖ್ಯೆ ನೀಡಲು ಮುಂದಾಗಿದೆ. ಅಲ್ಲದೆ ಇದಕ್ಕಾಗಿ ಬಜೆಟ್ ನಲ್ಲಿ 200 ಕೋಟಿ ರೂ. ಮೀಸಲಿಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 4 ಕೋಟಿ ಹಸುಗಳಿಗೆ ಈ ಸಂಖ್ಯೆ ನೀಡಲು ಯೋಜನೆ ರೂಪಿಸಿದೆ.
2015ರಲ್ಲೇ ಕೇಂದ್ರ ಸರ್ಕಾರ ಗೋವುಗಳಿಗೆ ಆಧಾರ್ ಸಂಖ್ಯೆ ನೀಡಲು ಪ್ರಸ್ತಾಪಿಸಿದ್ದು, ಸದಸ್ಯ ಯೋಜನೆಗೆ ಚಾಲನೆ ನೀಡಲು ಮುಂದಾಗಿದೆ. ಪಶು ಸಂಜೀವಿನಿ ಎಂದು ಯೋಜನೆಗೆ ಹೆಸರಿಟ್ಟಿದ್ದು, ಹಸುವಿನ ವಯಸ್ಸು, ತಳಿ, ಎತ್ತರ, ದೇಹದ ಮೇಲಿರುವ ವಿಶೇಷ ಗುರುತುಗಳು ಸೇರಿ ಹಲವು ಮಾಹಿತಿ ಆಧರಿಸಿ ಆಧಾರ್ ಸಂಖ್ಯೆ ನೀಡಲಾಗುತ್ತದೆ. ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಕೃಷಿ ಸಚಿವಾಲಯ ವಹಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಗೊವುಗಳ ರಕ್ಷಣೆ ಜತೆಗೆ ಕೇಂದ್ರ ಸರ್ಕಾರ ಗೋವುಗಳ ಸಾಕಣೆ ಮಾಡುವ ರೈತರ ಆದಾಯ ಹೆಚ್ಚಿಸಲು ಸಹ ಚಿಂತನೆ ನಡೆಸಿದ್ದು, ಆಧಾರ್ ಸಂಖ್ಯೆಯ ಅನ್ವಯ ಮಾಹಿತಿ ಪಡೆದು, ಗೋವುಗಳ ಹಾಲಿನ ಉತ್ಪಾದನೆ ಜಾಸ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಹಂತದಲ್ಲಿ 4 ಕೋಟಿ ಹಸುಗಳಿಗೆ ಆಧಾರ್ ಕಾರ್ಡ್ ಅಥವಾ ಆಧಾರ್ ನಂಬರ್ ನೀಡಲು 50 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. 1 ಆಧಾರ್ ಕಾರ್ಡ್ ಗೆ 8-10 ರೂ ಬೇಕು ಎಂದು ಸಹ ಅಂದಾಜಿಸಲಾಗಿದೆ.
Leave A Reply