ಲಡಾಖನ್ ಅತಿ ಎತ್ತರದ ಪ್ರದೇಶಕ್ಕೆ ಭೇಟಿ ನೀಡಿದ ಮೊದಲ ರಕ್ಷಣಾ ಸಚಿವೆ ಸೀತಾರಾಮನ್
ದೆಹಲಿ: ಆ ಪ್ರದೇಶಕ್ಕೆ ಹೋಗಲು ಗಟ್ಟಿ ಗುಂಡಿಗೆ ಬೇಕು. ಸ್ವಲ್ಪ ಏರು ಪೇರಾದರೂ ಮೈ ಮರಗುಟ್ಟುತ್ತೆ. ಅಂತಹ ಸ್ಥಿತಿಯಲ್ಲೇ ನಮ್ಮ ಸೈನಿಕರು ನಿತ್ಯ ದೇಶ ರಕ್ಷಣೆಗಾಗಿ ಹೋರಾಡುತ್ತಾರೆ. ಆ ಧೀರ ಸೈನಿಕರಿಗೆ ಸ್ಥೈರ್ಯ ತುಂಬಲು ದೇಶದ ರಕ್ಷಣಾ ಸಚಿವರ ಇತಿಹಾಸದಲ್ಲೇ ಯಾವುದೇ ರಕ್ಷಣಾ ಸಚಿವ ಭೇಟಿ ನೀಡದ ಭಾರತ ಚೀನಾ ಗಡಿಯ ಲಡಾಕ್ ಪ್ರದೇಶಕ್ಕೆ ರಕ್ಷಣಾ ನಿರ್ಮಲಾ ಸೀತಾರಾಮನ್ ಭೇಟಿ ನೀಡುವ ಮೂಲಕ ಭಾರತೀಯ ಸೈನಿಕರಿಗೆ ಸ್ಥೈರ್ಯ ತುಂಬಿದ್ದಾರೆ.
ಮೈನ್ ಸ್ 55 ಸಿ ಚಳಿ ಇರುವ 16,700 ಅಡಿ ಎತ್ತರದಲ್ಲಿರುವ ಪೂರ್ವ ಲಡಾಖ್ ನ ದೌಲತ್ ಬೇಗ್ ಒಲ್ಡಿ ಯಲ್ಲಿರುವ ಸೈನ್ಯದ ಶಿಬಿರಕ್ಕೆ ಭೇಟಿ ನೀಡಿ ಸೈನಿಕರೊಂದಿಗೆ ಕಾಲ ಕಳೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಇತಿಹಾಸದಲ್ಲೇ ರಕ್ಷಣಾ ಸಚಿವರ ಮೊದಲ ಭೇಟಿ
ಭಾರತ ಚೀನಾ ಗಡಿಯಾಗಿರುವ ಪೂರ್ವ ಲಡಾಖ್ ನ ದೌಲತ್ ಬೇಗ್ ಒಲ್ಡಿ ಸೈನಿಕರ ಶಿಬಿರಕ್ಕೆ ಭಾರತದ ಇತಿಹಾಸದಲ್ಲೇ ಪ್ರಥಮ ಭಾರಿಗೆ ರಕ್ಷಣಾ ಸಚಿವರೊಬ್ಬರ ಪ್ರಥಮ ಭೇಟಿಯಾಗಿದೆ. ಈ ಮೂಲಕ ರಕ್ಷಣ ಸಚಿವೆ ಮೈನಸ್ ಡಿಗ್ರಿ ಚಳಿಯಲ್ಲೂ ತಮ್ಮ ಕಾರ್ಯ ಚಟುವಟಿಕೆಯಿಂದ ಇದ್ದು, ಸೈನಿಕರೊಂದಿಗೆ ಮುಕ್ತ ಚರ್ಚೆ ನಡೆಸಿದ್ದಾರೆ. ಇದು ಸೈನಿಕರಲ್ಲಿ ಸ್ಥೈರ್ಯ ತುಂಬಿತಲ್ಲದೇ, ದೇಶದ ರಕ್ಷಣಾ ಸಚಿವರು ಸಂದಿಗ್ಧ ಪರಿಸ್ಥಿತಿಯಲ್ಲಿರುವ ಪ್ರದೇಶಕ್ಕೆ ಭೇಟಿ ನೀಡಿದ್ದು, ಸೈನಿಕರಲ್ಲಿ ಅಭಿಮಾನ ಹೆಚ್ಚಿಸಿದೆ.
ಮಂಜು ಮುಸುಕಿದ, ಚಳಿಯಲ್ಲಿ ಸೈನಿಕರನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್ ಭೇಟಿ ಕುರಿತು ಚಿತ್ರಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
Today visited some eastern Ladakh posts – DBO and Chushul sectors. pic.twitter.com/uz4YrHvEXM
— Nirmala Sitharaman (@nsitharaman) February 3, 2018
Leave A Reply