ಮುಂಬೈ ಸ್ಲಂ ಯುವಕ ಇಸ್ರೋ ವಿಜ್ಞಾನಿಯಾದ ಕಥೆ ಕೇಳಿ
ಮುಂಬೈ: ಜೀವನದಲ್ಲಿ ಸಾಧಕನಿಗೆ ಬಡತನ ಅಡ್ಡಿ ಬರುವುದಿಲ್ಲ ಎಂಬುದಕ್ಕೆ ಮುಂಬೈ ನಗರದ ಪ್ರಥಮೇಶ ಹಿರ್ವೆ ಸಾಕ್ಷಿಯಾಗಿದ್ದಾರೆ. ಸ್ಲಂ ನಲ್ಲಿ, ಕಡುಬಡತನದಲ್ಲಿ ಬೆಳೆದ ಯುವಕ ಪ್ರಥಮೇಶ್ ಇದೀಗ ಇಸ್ರೋ ವಿಜ್ಞಾನಿಯಾಗಿ ನೇಮಕವಾಗಿದ್ದಾರೆ.
ಮುಂಬೈನ ಸ್ಲಂ ಪ್ರದೇಶ ಪೋವೈ ಪ್ರದೇಶದ ಫಿಲ್ಟರ್ ಪಾಡದಿಂದ ಬಂದಿರುವ ಪ್ರಥಮೇಶ ಮುಂಬೈನಿಂದ ಇಸ್ರೋ ವಿಜ್ಞಾನಿಯಾಗಿ ನೇಮಕವಾದ ಪ್ರಥಮ ವ್ಯಕ್ತಿ. ಇಸ್ರೋಗೆ ಅರ್ಜಿ ಸಲ್ಲಿಸಿದ 16,000 ಜನರ ಮಧ್ಯೆ ಆಯ್ಕೆಯಾಗುವ ಮೂಲಕ ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾನೆ. ಇಸ್ರೋನಲ್ಲಿ ಎಲೆಕ್ಟ್ರಿಕಲ್ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಲಿದ್ದಾನೆ.
ಮುಂಬೈನ್ ಪೊವೈ ಫಿಲ್ಟರ್ ಪಾಡಾ ಸ್ಲಂ ನಲ್ಲಿ ಬಾಲ್ಯದಲ್ಲಿ ಕೇವಲ 10*10 ಅಡಿ ಮನೆಯಲ್ಲಿ ಜೀವನ ನಡೆಸಿದ್ದ ಹಿರ್ವೆ. ಆದರೆ ಹಿರ್ವೆ ಬಡತನವನ್ನು ಕಡೆಗಣಿಸಿ ಓದಿನತ್ತ ಚಿತ್ತ ಹರಿಸಿದ್ದರ ಫಲದಿಂದ ಇದೀಗ ಇಸ್ರೋ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾನೆ.
10ನೇ ತರಗತಿಯವರೆಗೆ ಮರಾಠಿಯಲ್ಲೇ ಅಧ್ಯಯನ ಮಾಡಿದ್ದ ಪ್ರಥಮೇಶ್ ಗೆ ನಂತರದ ಅಧ್ಯಯನ ಕಷ್ಟಕರವಾಗಿತ್ತು. ಆದರೆ ಫಿನಿಕ್ಸ್ ನಂತೆ ಎದ್ದು ಬಂದ ಹಿರ್ವೆ ಇಂಗ್ಲಿಷ್ ಭಾಷೆಯೊಂದಿಗೆ ಉತ್ತಮ ಫಲಿತಾಂಶವನ್ನು ತೆಗೆದಿದ್ದರು. ಅದನ್ನೇ ಮುಂದುವರಿಸಿಕೊಂಡು ಬಂದು ಕಷ್ಟದಲ್ಲೇ ವಿದ್ಯಾಭ್ಯಾಸ ಮಾಡಿದರು.
ಇನ್ನು ಮನೆಯವರು ಪ್ರಥಮೇಶ್ ಗೆ ಕಲಾ ವಿಭಾಗಕ್ಕೆ ಸೇರಿಸಬೇಕು ಎಂದು ಸೂಚಿಸಿದ್ದಾಗ, ನಿರಾಕರಿಸಿದ ಹಿರ್ವೆ ಏನೇ ಕಷ್ಟವಾದರೂ ಪರವಾಗಿಲ್ಲ ನಾನು ಎಂಜಿನಿಯರ್ ಆಗಬೇಕು ಎಂದು ನಿರ್ಧರಿಸಿ, ವಿಜ್ಞಾನ ವಿಭಾಗ ಸೇರಿಕೊಂಡರು. ಇದೀಗ ಇಸ್ರೋಗೆ ಅರ್ಜಿ ಸಲ್ಲಿಸಿದ 16,000 ಜನರಲ್ಲಿ ಆಯ್ಕೆಯಾದ 9 ಜನರಲ್ಲಿ ಪ್ರಥಮೇಶ್ ಒಬ್ಬರು ಎಂಬುದು ವಿಶೇಷ.
Leave A Reply