• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಗೋಮೂತ್ರದಿಂದ ಔಷಧಿ ತಯಾರಿಸಲು ಮುಂದಾದ ಯೋಗಿ ಸರ್ಕಾರ

TNN Correspondent Posted On February 5, 2018
0


0
Shares
  • Share On Facebook
  • Tweet It

ಲಖನೌ: ಹಲವು ರೋಗಗಳಿಗೆ ರಾಮಬಾಣವಾಗಿರುವ ಗೋಮೂತ್ರದ ಮೂಲಕ ಔಷಧ ತಯಾರಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ನಾನಾ ರೋಗಗಳಿಗೆ ಚಿಕಿತ್ಸೆ ನೀಡುವ ಎಂಟು ಔಷಧಗಳನ್ನು ಈಗಾಗಲೇ ಯೋಗಿ ಸರ್ಕಾರ ಸಿದ್ಧಪಡಿಸಿದೆ. ದೇಶದ ಹಲವು ಖಾಸಗಿ ಸಂಸ್ಥೆಗಳು ಮತ್ತು ಫಾರ್ಮಸಿಗಳು ಗೋಮೂತ್ರದಿಂದ ಔಷಧ ತಯಾರಿಸುತ್ತಿವೆಯಾದರೂ ಸರಕಾರವೇ  ಪ್ರೋತ್ಸಾಹಿಸುತ್ತಿರುವುದು ಇದೇ ಮೊದಲು.

ಆಯುಷ್ ಇಲಾಖೆ ನಿರ್ದೇಶಕ ಡಾ. ಆರ್‌.ಆರ್‌. ಚೌಧರಿ ಮಾತಾಡಿ, ಆರಂಭದಲ್ಲಿ ಗೋಮೂತ್ರದಿಂದ ಸ್ವಚ್ಛತೆ ಮಾಡುವ ವಸ್ತುಗಳನ್ನು ತಯಾರಿಸುವ ಪ್ರಸ್ತಾವನೆ ಹೊಂದಲಾಗಿತ್ತು. ಆದರೆ ನಂತರ ಔಷಧಗಳನ್ನು ಸಿದ್ಧಡಿಸಲು ಮುಂಎದಾಗಿದೆ ಎಂದು ತಿಳಿಸಿದ್ದಾರೆ. ಆಯುರ್ವೇದ ಇಲಾಖೆಯು ಲಖನೌ ಮತ್ತು ಪಿಲಿಭಿತ್‌ನಲ್ಲಿರುವ ಎರಡು ಸರಕಾರಿ ಫಾರ್ಮಸಿ ಮತ್ತು ಖಾಸಗಿ ಘಟಕಗಳ ಸಹಯೋಗದಲ್ಲಿ ಔಷಧಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ಧಾರೆ.

ಬಾಂಡಾ, ಝಾನ್ಸಿ, ಮುಜಫ್ಫರ್‌ ನಗರ, ಅಲಹಾಬಾದ್‌, ವಾರಾಣಸಿ, ಬರೇಲಿ, ಲಖನೌ ಮತ್ತು ಪಿಲಿಭಿತ್‌ಗಳಲ್ಲಿ ರುವ ಎಂಟು ಮೆಡಿಕಲ್‌ ಕಾಲೇಜುಗಳಲ್ಲಿ ಆಯುರ್ವೇದ ಕೋರ್ಸ್‌ ಆರಂಭಿಸಲಾಗಿದ್ದು, ಇಲ್ಲಿಗೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆ ಬರುತ್ತಾರೆ. ಲೌಖನೌ ಆಸ್ಪತ್ರೆಯಗೆ ನಿತ್ಯ 700 ಜನರು ಔಷಧ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದುವರೆಗೆ ಲಿವರ್‌ ಸಮಸ್ಯೆ, ಗಂಟು ನೋವು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ 8 ಔಷಧ ತಯಾರಿಸಿದ್ದೇವೆ. ಇತರ ಸಮಸ್ಯೆ ಮತ್ತು ರೋಗಗಳಿಗೆ ಗೋಮೂತ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಆರ್‌.ಆರ್‌. ಚೌಧರಿ ತಿಳಿಸಿದ್ದಾರೆ.

ಆದಿತ್ಯನಾಥ ಸರಕಾರ ಏಳು ಜಿಲ್ಲೆಗಳು ಮತ್ತು 16 ನಗರ ಪ್ರದೇಶಗಳಲ್ಲಿ ತಲಾ 1000 ಸಾಮರ್ಥ್ಯ‌ದ ಗೋಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಮುಂದೆ ಪ್ರತಿ ಬ್ಲಾಕ್‌ನಲ್ಲಿ ಒಂದು ಗೋಶಾಲೆ ನಿರ್ಮಾಣವಾಗಲಿದೆ. ಸರಕಾರಿ ಭೂಮಿಯ ಅತಿಕ್ರಮಣವನ್ನು ತೆರವುಗೊಳಿಸಿ ಗೋಶಾಲೆಗೆ ನೀಡಲು ಆದಿತ್ಯನಾಥ್ ಸರಕಾರ ಚಿಂತಿಸುತ್ತಿದೆ.

 

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search