ಬಂಧಿಸಿದರೂ ಕಾಶ್ಮೀರಕ್ಕಾಗಿ ಹೋರಾಡುವುದು ಬಿಡೆನು: ಉಗ್ರ ಸಯೀದ್ ಉದ್ಧಟತನ
ಲಾಹೋರ: ಭಾರತದ ವಿರುದ್ಧ ಜಮಾತ್ ಉದ್ ದಾವಾ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ, ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಜಾಗತಿಕ ಉಗ್ರ ಹಫೀಜ್ ಸಯೀದ್ ಮತ್ತೇ ಉದ್ಧಟತನ ಮೆರೆದಿದ್ದು ‘ಪಾಕಿಸ್ತಾನ ಸರ್ಕಾರ ನನ್ನನ್ನು ಬಂಧಿಸಿದರೂ ನಾನು ಕಾಶ್ಮೀರಕ್ಕಾಗಿ ಹೋರಾಡುವುದನ್ನು ಬಿಡುವುದಿಲ್ಲ ಎಂದು ಹೇಳಿದ್ದಾನೆ.
ಪಾಕಿಸ್ತಾನ ಸರ್ಕಾರ ನನ್ನನ್ನು ಬಂಧಿಸಿದರೂ ಸ್ವೀಕರಿಸುತ್ತೇನೆ. ಆದರೆ 2018ರಲ್ಲಿ ಕಾಶ್ಮೀರಗಳಿಗಾಗಿ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ. ನನ್ನ ಹೋರಾಟಕ್ಕೆ ಯಾವುದೇ ಅಡೆ ತಡೆ ಬಂದರೂ ಕಾಶ್ಮೀರದ ಪರ ಹೋರಾಟ ಮುಂದುವರಿಯಲಿದೆ.
ಪಾಕಿಸ್ತಾನದ ಲಾಹೋರ್ ನಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದ ಸಯೀದ್, ನನ್ನನ್ನು ವಿರೋಧಿಸಿದಷ್ಟು ನಾನು ಬಲಿಷ್ಠವಾಗುತ್ತೇನೆ. ಅದರಲ್ಲಿ ಎರಡು ಮಾತಿಲ್ಲ. ಪಾಕಿಸ್ತಾನದ ಅಧ್ಯಕ್ಷ ಕಾಶ್ಮೀರದ ವಿಷಯದಲ್ಲಿ ಗಂಭೀರವಾಗಿ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಇದೀಗ ಷರೀಪ್ ವಿರುದ್ಧ ಹೋರಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾನೆ.
ಭಾರತ ಮತ್ತು ಅಮೆರಿಕದಾ ಒತ್ತಡದ ಬಗ್ಗೆ ಪಾಕಿಸ್ತಾನದಲ್ಲಿ ಮಾಧ್ಯಮ ಪ್ರಸಾರ ತಡೆಹಿಡಿಯಲಾಗಿದೆ. ಈ ಮೂಲಕ ಪಾಕಿಸ್ತಾನಿಗಳಿಗೆ ವಾಸ್ತವದ ಅರಿವಾಗುತ್ತಿಲ್ಲ ಎಂದು ಬೊಗಳೆ ಬಿಟ್ಟಿದ್ದಾನೆ. ಜಾಗತಿಕ ಉಗ್ರ ಹಫೀಜ್ ಸಯೀದ್ ತಲೆಗೆ ಅಮೆರಿಕ 10 ಮಿಲಿಯನ್ ಡಾಲರ್ ಘೋಷಿಸಿದೆ. ಇತ್ತೀಚೆಗೆ ಪಾಕಿಸ್ತಾನ ಸಯೀದ್ ಗೆ ಗೃಹ ಬಂಧನ ವಿಧಿಸುವ ನಾಟಕವಾಡಿತ್ತು.
Leave A Reply