ದಾಳಿಯಲ್ಲಿ ಕಾಲು ಕಳೆದುಕೊಂಡರೂ ಸೈನ್ಯಕ್ಕೆ ಮರಳಿದ ಯೋಧನ ದೇಶಪ್ರೇಮ ಎಂಥಾದ್ದು
ರಾಯಪುರ್: ನಮ್ಮ ಸೈನಿಕರಿಗೆ ದೇಶದ ಮೇಲಿರುವ ಅಪಾರ ಶ್ರದ್ಧೆಯೇ ಅಂತದ್ದೂ. ತಮ್ಮ ಜೀವ ಆಪತ್ತಿನಲ್ಲಿದೆ, ಜೀವಕ್ಕೆ ಕುತ್ತು ಬರುತ್ತಿದೆ ಎಂದು ಗೊತ್ತಿದ್ದರೂ ಅವರು ಎಂದಿಗೂ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಸಾಕ್ಷಿ ಸಿಆರ್ ಫಿಎಫ್ ಯೋಧ ಭೋಗಡೆ ರಾಮದಾಸ್ ಬಾಹು.
ಯೋಧ ಬೋಗಡೆ ರಾಮದಾಸ್ ಬಾಹು ಜೀವನ ಗಾಥೆಯೇ ಅಂತಹದ್ದು. ನಕ್ಸಲರೊಂದಿಗೆ ಹೋರಾಟದಲ್ಲಿ ನಡೆದ ಬ್ಲಾಸ್ಟ್ ನಲ್ಲಿ ಎರಡು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಇದೀಗ ಸೂಕ್ತ ಚಿಕಿತ್ಸೆ ಪಡೆದುಕೊಂಡು ಮರಳಿ ಸೈನಿಕ ಶಿಬಿರಕ್ಕೆ ಕೆಲಸಕ್ಕೆ ಹಾಜರಾಗಿ, ಹೋರಾಟಕ್ಕೆ ಸಜ್ಜಾಗಿದ್ದಾರೆ.
ಕೋಬ್ರಾ ಕಮಾಂಡೋ ಆಗಿರುವ ರಾಮದಾಸ್ ಅವರು 2017ರಲ್ಲಿ ಛತ್ತಿಡಗಡದ ಸುಕ್ಮಾ ಜಿಲ್ಲೆಯ ನಕ್ಸಲರು ನಡೆಸಿದ ಬ್ಲಾಸ್ಟ್ ನಲ್ಲಿ ಗಾಯಗೊಂಡಿದ್ದರು. 208 ಬಟಾಲಿಯನ್, ಸಿಆರ್ ಫಿಎಫ್ ಮತ್ತು ಜಿಲ್ಲಾ ಪೊಲೀಸ್ ದಳ ಜಂಟಿಯಾಗಿ ಅರಣ್ಯ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಅರಣ್ಯದಲ್ಲಿರುವ ಕಸರಾಮ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ರಾಮದಾಸ್ ಐಇಡಿ ಬ್ಲಾಸ್ಟ್ ನಿಂದ ಗಂಭೀರವಾಗಿ ಗಾಯಗೊಂಡಿದ್ದರು.
2017 ನವೆಂಬರ್ 29ರಂದು ರಾಮದಾಸ್ ಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ ಗಂಭಿರವಾಗಿ ಗಾಯಗೊಂಡಿದ್ದರಿಂದ ರಾಮದಾಸ್ ಅವರ ಕಾಲನ್ನು ಮೊಳಕಾಲಿಗಿಂತ ಮೇಲೆ ತುಂಡರಿಸಲಾಗಿತ್ತು. ಮತ್ತು ಎಡಗೈಗೆ ಗಂಭೀರ ಗಾಯಗಳಾಗಿದ್ದವು. ಇದೀಗ ರಾಮದಾಸ್ ಚಿಕಿತ್ಸೆಯಿಂದ ಗುಣಮುಖರಾಗಿದ್ದು, 208 ಕೋಬ್ರಾ ಪಡೆಯಲ್ಲಿ ಕಾರ್ಯ ನಿರ್ವಹಿಸಲು ಮರಳಿದ್ದಾರೆ.
Leave A Reply