ಅಜಾನ್ ಕಿರಿಕಿರಿ ಎಂದ ಸೋನು ನಿಗಮ್ ಗೆ ಮೂಲಭೂತವಾದಿಗಳಿಂದ ಜೀವ ಬೆದರಿಕೆ
Posted On February 6, 2018

ಮುಂಬೈ: ನಾನು ಮುಸ್ಲಿಂ ಅಲ್ಲ. ಆದರೂ ಮಸೀದಿಗಳಲ್ಲಿ ಅಜಾನ್ ಗಾಗಿ ಬಳಸುವ ಧ್ವನಿವರ್ಧಕಗಳಿಂದ ಕಿರಿಕಿರಿ ಉಂಟಾಗುತ್ತಿದೆ. ಧಾರ್ಮಿಕ ಆಚರಣೆಗಳನ್ನು ಬಲವಂತವಾಗಿ ಹೇರುತ್ತಿರುವುದು ಗೂಂಡಾಗಿರಿ ವರ್ತನೆ ತೋರಿದಂತೆ ಎಂದು ಮಸೀದಿಗಳ ಕಿರಿಕಿರಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಖ್ಯಾತ ಗಾಯಕ ಸೋನು ನಿಗಮ್ ಗೆ ಮುಸ್ಲಿಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ ಗುಪ್ತಚರ ಇಲಾಖೆ ಸೋನು ನಿಗಮ್ ಗೆ ಜೀವ ಬೆದರಿಕೆ ಎಂಬುದರ ಕುರಿತು ಮುಂಬೈ ಪೊಲೀಸರಿಗೆ ಎಚ್ಚರಿಕೆ ನೀಡಿತ್ತು. ಬಹಿರಂಗ ಸಮಾರಂಭ, ಪ್ರಚಾರ ಕಾರ್ಯಕ್ರಮದಲ್ಲಿ ಹತ್ಯೆ ಮಾಡುವ ಸಂಚು ಮೂಲಭೂತವಾದಿ ಸಂಘಟನೆಗಳು ಮಾಡಿವೆ ಎಂದು ಎಚ್ಚರಿಕೆ ನೀಡಿದೆ.
ಮಸೀದಿಗಳ ಧ್ವನಿವರ್ಧಗಳ ಬಗ್ಗೆ ಬೇಸರ ವ್ಯಕ್ತಪಡಿಸಿದಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಮುಂಬೈ ಪೊಲೀಸರು ಸೋನು ನಿಗಮ ಮನೆಗೆ ಭದ್ರತೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದೆ.
- Advertisement -
Leave A Reply