ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿರುವ ಈ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯನವರಿಗೊಂದಿಷ್ಟು ಪ್ರಶ್ನೆಗಳು…
ದೇಶದ 19 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಕರ್ನಾಟಕದಲ್ಲಾದರೂ ಅಸ್ತಿತ್ವ ಉಳಿಸಿಕೊಳ್ಳುವ ತವಕ, ಧಾವಂತದಲ್ಲಿರುವ ಕಾಂಗ್ರೆಸ್, ಅಮಿತ್ ಷಾ ಕರ್ನಾಟಕಕ್ಕೆ ಬರುತ್ತಾರೆ ಎಂದು ಗೊತ್ತಾದ ಕೂಡಲೇ ಮಹದಾಯಿ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ನೀಡಿದ್ದ ಬಂದ್ ಕರೆಯನ್ನು ಜನವರಿ 27ರಿಂದ 25ಕ್ಕೆ ಇಳಿಸಿತು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಾರೆ ಎಂಬುದನ್ನು ಅರಿತ ಕಾಂಗ್ರೆಸ್ ಭೀತಿಗೊಳಗಾಗಿ ಹಲವು ತಡೆಯೊಡ್ಡಲು ಮುಂದಾಯಿತು. ಆದರೇನಂತೆ ಪ್ರಧಾನಿ ಮೋದಿ ಅವರ ಅಲೆ ಕಾಂಗ್ರೆಸ್ ತಂತ್ರಗಳನ್ನು ಕೊಚ್ಚಿಹೋಗುವಂತೆ ಮಾಡಿತು. ಲಕ್ಷಾಂತರ ಜನ ಮೋದಿ ಭಾಷಣಕ್ಕೆ ಸಾಕ್ಷಿಯಾದರು.
ಇದರಿಂದ ಮತ್ತೂ ಆತಂಕಕ್ಕೊಳಗಾದ ಕಾಂಗ್ರೆಸ್ ಮೋದಿ ಅವರು ಮಹದಾಯಿ ವಿಚಾರ ಪ್ರಸ್ತಾಪಿಸಲಿಲ್ಲ ಎಂಬ ರಾಗ ಶುರುವಿಟ್ಟುಕೊಂಡಿತು. ಆದರೆ ಈಗ, ಅಂದರೆ ಫೆಬ್ರವರಿ 10ರಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ ಆರಂಭಿಸಲಿದ್ದಾರೆ. ಈ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಂದಷ್ಟು ಪ್ರಶ್ನೆಗಳಿವೆ.
- ಮಹದಾಯಿ ವಿಚಾರದಲ್ಲಿ ಎಂದಿಗೂ ಪ್ರಧಾನಿಯವರನ್ನೇ ಟೀಕಿಸುವ ಸಿದ್ದರಾಮಯ್ಯನರೇ, ರಾಹುಲ್ ಗಾಂಧಿ ಭೇಟಿ ವೇಳೆ ಮಹದಾಯಿ ವಿಚಾರ ಪ್ರಸ್ತಾಪಿಸುವಂತೆ ಮಾಡುವಿರಾ?
- ಹಾಗೊಂದು ವೇಳೆ ರಾಹುಲ್ ಗಾಂಧಿಯವರು ಮಹದಾಯಿ ವಿಚಾರದ ಕುರಿತು ರ್ಯಾಲಿ, ಸಮಾರಂಭಗಳಲ್ಲಿ ಮಾತನಾಡದಿದ್ದರೆ, ರಾಹುಲ್ ಗಾಂಧಿ ರೈತ ವಿರೋಧಿ ಎಂದು ಷರಾ ಬರೆಯುವಿರಾ?
- ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದಾಗ, ಅವರನ್ನು ಸ್ವಾಗತಿಸುವ ಬದಲು ಖಾಸಗಿ ಕಾರ್ಯಕ್ರಮದ ನೆಪವೊಡಿ ತಪ್ಪಿಸಿಕೊಂಡಿರಲ್ಲ, ರಾಹುಲ್ ಬಂದಾಗಲೂ ಹಾಗೆಯೇ ಮಾಡುತ್ತೀರಾ?
- ಮಹದಾಯಿ ವಿಚಾರದಲ್ಲಿ ನಾವು ರೈತರ ಪರ ಎನ್ನುವ ಮುಖ್ಯಮಂತ್ರಿಯವರು ಗೋವಾ ಕಾಂಗ್ರೆಸ್ ಒಪ್ಪಿಸುವ ಕುರಿತು ರಾಹುಲ್ ಗಾಂಧಿ ಜತೆ ಮಾತನಾಡುವಿರಾ?
- ಅಥವಾ ಗೋವಾ ಕಾಂಗ್ರೆಸ್ಸಿಗೂ ಕರ್ನಾಟಕ ಕಾಂಗ್ರೆಸ್ಸಿಗೂ ಸಂಬಂಧ ಇಲ್ಲ ಎಂದು ಜಾರಿಕೊಂಡತೆ, ರಾಷ್ಟ್ರೀಯ ಕಾಂಗ್ರೆಸ್ಸಿಗೂ , ನಮಗೂ ಸಂಬಂಧವಿಲ್ಲ ಎಂದು ಹೇಳುವಿರಾ?
- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದಾಗ, ರಾಜ್ಯದ ಲೆಕ್ಕ ಕೇಳಲು, ನಮ್ಮ ವಿರುದ್ಧ ಮಾತನಾಡಲು ಅವರ್ಯಾರು ಎಂಬಂತೆ ಮಾತನಾಡಿದ್ದರು ಸಿಎಂ ಸಾಹೇಬ್ರು. ಈಗ ಕಾಂಗ್ರೆಸ್ ಅಧ್ಯಕ್ಷ ಬಂದಾಗ ಮೋದಿ ಅವರನ್ನು ತೆಗಳದೆ, ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನಷ್ಟೇ ಚರ್ಚೆ ಮಾಡುತ್ತೀರಾ?
- ಜನವರಿ 27ರಂದು ನಿಗದಿಯಾಗಿದ್ದ ರಾಜ್ಯ ಬಂದ್ 25ಕ್ಕೆ ಮಾಡಿ ಎಂದು ಹೇಳಿದಂತೆ, ಒಂದು ವೇಳೆ ಕನ್ನಡ ಪರ ಸಂಘಟನೆಗಳು ಫೆ.10ರಂದೇ ಕರ್ನಾಟಕ ಬಂದ್ ಮಾಡುವುದಾಗಿ ತಿಳಿಸಿದರೆ ನಿಮ್ಮ ಅಭಿಪ್ರಾಯ ಏನು? ಒಪ್ಪಿಗೆ ಸೂಚಿಸುವಿರಾ?
- ಇದುವರೆಗೂ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮಹದಾಯಿ ವಿವಾದದ ಕುರಿತು ಮಾತನಾಡಿಲ್ಲ. ಈ ಪ್ರವಾಸದ ವೇಳೆ ಮಾತನಾಡಲೇಬೇಕು, ಸಮಸ್ಯೆ ಬಗೆಹರಿಸಲೇಬೇಕು ಎಂದು ರಾಹುಲ್ ಗಾಂಧಿಯವರನ್ನು ಒತ್ತಾಯಿಸುವಿರಾ? ಸೋನಿಯಾ ಗಾಂಧಿ ಅವರಿಗೂ ಇದೇ ಮಾತು ಹೇಳುವಿರಾ?
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಕಳೆದ ನಾಲ್ಕೂವರೆ ವರ್ಷದಲ್ಲಿ ನೀವು ಎಷ್ಟರಮಟ್ಟಿಗೆ ರೈತರ ಪರ ಎಂಬುದು 3500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಅರಿತಾಗಲೇ ಸ್ಪಷ್ಟವಾಗುತ್ತದೆ. ಆದರೂ ರೈತರ ಪರ ಎನ್ನುವ ನೀವು ರಾಹುಲ್ ಗಾಂಧಿ ಬೇಟಿ ವೇಳೆ ಈ ವಿಚಾರ ಎತ್ತುವಿರಾ ಎಂಬುದನ್ನು ಸ್ಪಷ್ಟಪಡಿಸಿ. ಆಮೇಲೆ ರಾಗಾ ರಾಜ್ಯದಿಂದ ಹೊರಟು ಹೋದ ಮೇಲೆ ಅದೇ “ರಾಗ” ಹಾಡಬೇಡಿ ಮತ್ತೆ. ಉತ್ತರಿಸಿ.
Leave A Reply