ಕರ್ನಾಟಕದ ಹಿಂದೂಗಳ ಮತಕ್ಕಾಗಿ ರಾಹುಲ್ ಗಾಂಧಿ ಹೂಡಿದ ತಂತ್ರ ತಿಳಿಯರಿ, ಡೋಂಗಿ ಹಿಂದುತ್ವವಾದಕ್ಕೆ ಮರುಳಾಗಿದಿರಿ
ಬೆಂಗಳೂರು: ಈ ಕಾಂಗ್ರೆಸ್ಸಿನವರೇ ಹಾಗೆ. ಯಾವುದೇ ರಾಜದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹಲವು ತಂತ್ರ ಹೆಣೆಯಲು ಶುರುವಿಟ್ಟುಕೊಳ್ಳುತ್ತದೆ. ಇದರಲ್ಲಿ ಗುಜರಾತ್ ಚುನಾವಣೆ ವೇಳೆ ರಾಹುಲ್ ಗಾಂಧಿ ಹಿಂದೂಗಳ ಮತ ಸೆಳೆಯಲು ಪದೇ ಪದೇ ದೇವಾಲಯಗಳಿಗೆ ಭೇಟಿ ನೀಡಿ ಹಿಂದೂಗಳ ಮರುಳು ಮಾಡಲು ಮುಂದಾದರು. ಆದರೇನಾಯಿತು? ಕೊನೆಗೂ ಜನ ಬಿಜೆಪಿಯನ್ನೇ ಗೆಲ್ಲಿಸಿದರು.
ಇಂತಹ ಡೋಂಗಿ ಹಿಂದುತ್ವ ಪ್ರತಿಪಾದಿಸುವ ರಾಹುಲ್ ಗಾಂಧಿ, ಗುಜರಾತಿನ ವರಸೆಯನ್ನೇ ಕರ್ನಾಟಕದಲ್ಲಿ ಆರಂಭಿಸಲು ಹೊರಟಿದ್ದಾರ. ಫೆ.10ರಿಂದ ಕರ್ನಾಟಕದಲ್ಲಿ ಅವರು ಚುನಾವಣಾ ಪ್ರವಾಸ ಆರಂಭಿಸಿದ್ದು, ಅದರಲ್ಲಿ ಹಿಂದೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಹಿಂದೂಗಳ ಮತ ಸೆಳೆಯಲು ತಂತ್ರ ಹೂಡಿದ್ದಾರೆ.
ಹೌದು, ಫೆ.10ರಿಂದ 13ರವರೆಗೆ ರಾಹುಲ್ ಗಾಂಧಿ ರಾಜ್ಯ ಪ್ರವಾಸದಲ್ಲಿ ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಈ ಭಾಗದಲ್ಲಿ ಲಿಂಗಾಯತರು ಜಾಸ್ತಿ ಇದ್ದಾರೆ ಎಂಬುದು ಧಾರ್ಮಿಕ ಅಂಶವಾಗಿದ್ದು, ಸಾಫ್ಟ್ ಹಿಂದುತ್ವ ಪ್ರತಿಪಾದಿಸುವ ಹುನ್ನಾರ ನಡೆಸಿದ್ದಾರೆ. ಈ ಜಿಲ್ಲೆಗಳ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದು ರಾಹುಲ್ ಉದ್ದೇಶ.
ಇದರ ಭಾಗವಾಗಿ ರಾಹುಲ್ ಗಾಂಧಿ ಮೊದಲಿಗೆ ಕೊಪ್ಪಳ ಜಿಲ್ಲೆ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ ಇದೇ ಜಿಲ್ಲೆಯ, ಸುಮಾರು 800 ವರ್ಷಗಳ ಇತಿಹಾಸವಿರುವ ಹಾಗೂ ಅಪಾರ ಲಿಂಗಾಯತ ಅನುಯಾಯಿಗಳನ್ನು ಹೊಂದಿರುವ ಗವಿಸಿದ್ದೇಶ್ವರ ಮಠಕ್ಕೆ ರಾಹುಲ್ ಎರಡನೇ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಇನ್ನು ಬರೀ ಹಿಂದೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರೆ ಮುಸ್ಲಿಮರು ಮುನಿಸಿಕೊಳ್ಳುತ್ತಾರಲ್ಲ? ಅದೇ ಕಾರಣಕ್ಕಾಗಿ ರಾಹುಲ್ ಗಾಂಧಿ ಮೂರನೇ ಧಾರ್ಮಿಕ ಸ್ಥಳದ ಭೇಟಿಗಾಗಿ ಕಲಬುರಗಿಯ ಪ್ರಸಿದ್ಧ ಖಾಜಾ ಬಂದೇನವಾಜ್ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.
ನಾಲ್ಕನೇ ಹಾಗೂ ಕೊನೆಯ ಧಾರ್ಮಿಕ ಸ್ಥಳವಾಗಿ ಬೀದರ್ ಜಿಲ್ಲೆ ಬಸವ ಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದು, ಈ ಭಾಗದ ಬಸವಣ್ಣನ ಅನುಯಾಯಿಗಳನ್ನು ಸೆಳೆಯುವ ಹುನ್ನಾರ ರಾಹುಲ್ ಗಾಂಧಿಯವರದ್ದು.
ಒಟ್ಟಿನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಿಂದೂ ಪರ ಎಂದು ಡೋಂಗಿತನ ಮೆರೆಯಲು ಆರಂಭಿಸಿದ್ದಾರೆ. ಇದುವರೆಗೆ ರಾಜ್ಯಕ್ಕೆ ಬಂದರೂ ರ್ಯಾಲಿ ನಡೆಸಿಯೋ, ಕಾರ್ಯಕರ್ತರನ್ನು ಭೇಟಿಯಾಗಿಯೋ ಹೋಗುತ್ತಿದ್ದ ರಾಹುಲ್ ಗಾಂಧಿ ಈಗ ಹಿಂದೂಗಳ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಕುತಂತ್ರ ಮೆರೆಯಲು ಮುಂದಾಗಿದ್ದಾರೆ. ಆದರೆ ಹಿಂದೂಗಳು ಇಂತಹ ಡೋಂಗಿ ಹಿಂದುತ್ವಕ್ಕೆ ಮರುಳಾಗಬಾರದು.
Leave A Reply