ಮಗಳನ್ನು ಒತ್ತೆಯಾಳಾಗಿಟ್ಟುಕೊಂಡು ತಾಯಿಯನ್ನು ಅತ್ಯಾಚಾರ ಮಾಡಿದ ಮೂವರು ಮುಸ್ಲಿಂ ಯುವಕರ ಬಂಧನ
ದೆಹಲಿ: ದೇಶದಲ್ಲಿ ಬಲವಂತದ ಮತಾಂತರ ಹಾಗೂ ಲವ್ ಜಿಹಾದ್ ಪ್ರಕರಣಗಳು ಪದೇ ಪದೇ ಸುದ್ದಿಯಾಗುತ್ತಿರುವ ಬೆನ್ನಲ್ಲೇ ದೆಹಲಿಯ ಪಾಂಡವ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾರುಣ ಘಟನೆಯೊಂದು ನಡೆದಿದ್ದು, ಮುಸ್ಲಿಂ ಯುವಕರು ಮಗಳನ್ನು ಒತ್ತೆಯಾಳಾಗಿಟ್ಟುಕೊಂಡು ತಾಯಿಯನ್ನು ಅತ್ಯಾಚಾರ ಎಸಗಿದ್ದಾರೆ.
ಮೂವರು ಮುಸ್ಲಿಂ ಯುವಕರು ಮಹಿಳೆ ಮನೆಗೆ ತೆರಳಿ ಅವರ ಬಾಲಕಿಯನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ನಮ್ಮ ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಗುವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಮಗುವಿನ ಜೀವದ ಆಸೆಗೆ ಮಹಿಳೆ ಸುಮ್ಮನಿದ್ದು, ಮೂವರು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಮ್ಮ ಕಾಮತೃಷೆ ತೀರಿಸಿಕೊಂಡ ಬಳಿಕ ಬಾಲಕಿಯನ್ನು ಮಹಿಳೆಗೆ ಒಪ್ಪಿಸಿ ಪರಾರಿಯಾಗಿದ್ದಾರೆ. ಈ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಮನೆಗೆ ಬಂದ ಮೂವರಲ್ಲಿ ಒಬ್ಬ ಪಕ್ಕದ ಮನೆಯವನೇ ಇದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರು ಹಾಗೂ ಮಾಹಿತಿ ಮೇರೆಗೆ ತನಿಖೆ ನಡೆಸಿದ ಪೊಲೀಸರು ತೌಸಿಬ್, ಆಸಿಬ್ ಹಾಗೂ ಹಸೀಬ್ ಎಂಬ ಮೂವರು ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ.
Leave A Reply