ಮೋದಿ ಎಫೆಕ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದಿಂದ ಇಸ್ರೇಲ್ ಗೆ ವಿಮಾನ ಹಾರಾಟಕ್ಕೆ ಸೌದಿ ಅರೇಬಿಯಾ ಅವಕಾಶ
ದೆಹಲಿ: ಸಾಂಪ್ರದಾಯಿಕ, ವೈರಿರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಇಸ್ರೇಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಬದಲಾವಣೆಯ ಮುನ್ಸೂಚನೆ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನವನ್ನು ನೇರವಾಗಿ ಇಸ್ರೇಲ್ ಪ್ರವೇಶಿಸಲು ಸೌದಿ ಅರೇಬಿಯಾ ಅವಕಾಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ, ಸ್ಪಷ್ಟ ನಡೆಗಳು ಸೌದಿ ಅರೇಬಿಯಾದ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಬದ್ಧ ವೈರಿ ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ತನ್ನ ವಾಯು ಪ್ರದೇಶದ ಮೂಲಕ ಇಸ್ರೇಲ್ ಗೆ ವಿಮಾನ ಪ್ರಯಾಣ ಮಾಡಲು ಅವಕಾಶ ನೀಡಿದೆ.
ಇಸ್ರೇಲ್ ಗೆ ಭಾರತದಿಂದ ವಿಮಾನ ಪ್ರಯಾಣಿಸಬೇಕಾದರೇ ಕೆಂಪು ಸಮುದ್ರದ ಮೂಲಕ ಸುಮಾರು 8 ಗಂಟೆ ಸಮಯ ಬೇಕಾಗುತ್ತದೆ. ಆದರೆ ಪ್ರಸ್ತುತ ಸೌದಿ ಅರೇಬಿಯಾದ ವಾಯುಪ್ರದೇಶದಿಂದ ಇಸ್ರೇಲ್ ನ ಟೆಲ್ ಅವೀವ್ ಗೆ ಪ್ರವೇಶಿಸಲು ಕೇವಲ 2 ರಿಂದ 2.50 ಗಂಟೆ ಬೇಕಾಗುತ್ತದೆ. ಈ ಮಹತ್ವದ ಪ್ರಯಾಣಕ್ಕೆ ಇಸ್ರೇಲ್ ವೈರಿ ರಾಷ್ಟ್ರ ಸೌದಿ ಅರೇಬಿಯಾ ಮೋದಿ ಪ್ರಯಾಣಕ್ಕೆ ವಿಶೇಷ ಒಪ್ಪಿಗೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯಾಣಕ್ಕೆ ಅವಕಾಶ ನೀಡಿರುವುದು ಇಸ್ರೇಲ್ ಮತ್ತು ಸೌದಿ ಅರೇಬಿಯಾದ ಸಂಬಂಧಗಳು ಉತ್ತಮವಾಗುವ ಲಕ್ಷಣಗಳು ಎಂದು ತಜ್ಞರು ವಿಶ್ಲೇಷಿಸಿದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ, ದಿಟ್ಟ, ಸ್ಪಷ್ಟ ರಾಜತಾಂತ್ರಿಕ ನಡೆಗಳು ಪೂರಕವಾಗಲಿವೆ ಎಂದು ವಿಶ್ಲೇಷಿಸಿದ್ದಾರೆ. ಮೋದಿ ವಿಶ್ವ ಸಮುದಾಯದ ಮನ ಪರಿವರ್ತಿಸುತ್ತಿದ್ದಾರೆ.
8 ಗಂಟೆ ಪ್ರಯಾಣವನ್ನು 2 ಗಂಟೆಗಿಳಿಸಿದ್ದರಿಂದ ಭಾರತಕ್ಕೆ ಹಣದ ಉಳಿತಾಯವೂ ಆಗುತ್ತೆ. ಸಣ್ಣ ಮೊತ್ತವಾದರೂ ಅದು ದೊಡ್ಡ ಸಂಬಂಧವೊಂದಕ್ಕೆ ಮುನ್ನುಡಿ ಬರೆಯಲಿದೆ.
Leave A Reply