ಮಂಗಳೂರಿನ ಈ ಆಹಾರವೆಂದರೆ ಕುಸಲ್ದರಸೇ ನವೀನಣ್ಣನಿಗೆ ಪಂಚ ಪ್ರಾಣ!
ಕುಸಲ್ದರಸೆ ನವೀನ್ ಡಿ ಪಡೀಲ್ ಎಂದಾಗ ನೆನಪಾಗೋದು ಅವರ ನೈಜತೆಯ ನಟನೆ. ಯಾವುದೇ ನಟನೆಯಾಗಿರಲಿ ಎಲ್ಲದಕ್ಕೂ ಸೈ ಅನ್ನುವ ನಟ ಇವರು. ನಾಯಕ ನಟ, ಪೋಷಕ ನಟ, ಕಾಮೆಡಿ ಎಲ್ಲಾ ವಿಭಾಗದಲ್ಲೂ ಎತ್ತಿದ ಕೈ.
ಅವರ ಕಾಮಿಡಿಯು ಜನರನ್ನ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಅದಕ್ಕಾಗೇ ಅವರನ್ನ ಕುಸಲ್ದ ಅರಸೆ ನವೀನಣ್ಣೆ ಅಂತಾ ಕರೆಯುವುದು. ಇದೀಗ ಇವರು ಕೋಸ್ಟಲ್ವುಡ್ನ ಬಹುಬೆಡಿಕೆಯ ಸ್ಟಾರ್ ನಟರಾಗಿ ಮೂಡಿ ಬಂದಿದ್ದಾರೆ. ನವೀನ್ ಡಿ ಪಡೀಲ್ ಕೇವಲ ತುಳು ಸಿನಿಮಾಕ್ಕೆ ಸೀಮಿತವಾಗಿರದೆ ಕನ್ನಡ ತೆರೆ ಮೇಲೆ ಕೂಡ ಮಿಂಚಿ ತನ್ನ ಛಾಪನ್ನ ತೋರಿಸಿದ್ದಾರೆ.
ಮಜಾ ಟಾಕೀಸ್ನಲ್ಲಿ ವಿಭಿನ್ನ ನಗೆ ಚಾಟಕಿಗಳನ್ನ ಹರಿಸಿ ಕನ್ನಡ ಜನರ ಮನದಲ್ಲೂ ತುಳು ನಾಡಿನ ಕಂಪನ್ನ ಚೆಲ್ಲಿದ್ದಾರೆ.ಆ ಕಿರು ತೆರೆಯ ಷೋನಲ್ಲಿ ನವೀನ್ ಉಪಯೋಗಿಸುವ ತುಳು ಮಿಶ್ರಿತ ಕನ್ನಡ ಭಾಷೆ ಜನರನ್ನ ನಕ್ಕು ನಗಿಸಿಬಿಟ್ಟಿತ್ತು. ಅವರ ಪಂಚಿಂಗ್ ಡೈಲಾಗ್ಸ್ಗಳು ವೈರಲ್ ಕೂಡ ಆಗಿದೆ.
ಇನ್ನು ಕೋಸ್ಟಲ್ವುಡ್ ವಿಚಾರದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ನವೀನ್ ಡಿ ಪಡಿಲ್, ನವೀನಣ್ಣನಾಗಿ ಅಚ್ಚುಮೆಚ್ಚು. ಹಲವು ನಾಯಕ ನಟರ ಹಾಗೇ ಇವರು ಕೂಡ ಸಿಂಪಲ್. ಆಹಾರ ವಿಚಾರದಲ್ಲಿ ಬೇಜಾನ್ ಶ್ಟ್ರಿಕ್ಟ್ ಆಗಿರೋ ನವೀನ್ ಅಣ್ಣನಿಗೆ ಕರಾವಳಿಯ ಆಹಾರ ಹೇಳಿದ್ರೆ ತುಂಬಾನೆ ಇಷ್ಟ ಅಂತೆ, ಅದರಲ್ಲೂ ಎವರ್ಗ್ರೀನ್ ಫೇವರೀಟ್ ಗಂಜಿ ಹಾಗೂ ಚಟ್ನಿ ಎಂದು ಅವರೇ ಹೇಳುತ್ತಾರೆ. ಎಲ್ಲೆ ಹೋದರೂ ಊಟದ ಸಮಯಕ್ಕೆ ಫಸ್ಟ್ ಪ್ರಿಫರೆನ್ಸ್ ಗಂಜಿ ಮತ್ತು ಚಟ್ನಿಗೆ ಅಂತೆ. ಇದರ ಮೂಲಕ ಅವರ ಸಿಂಪಲ್ ಸಿಟಿ ಗೊತ್ತಾಗುತ್ತೆ. ಇಷ್ಟು ದೊಡ್ಡ ಸ್ಟಾರ್ ನಟ ಎಷ್ಟು ಸಿಂಪಲ್ ಅಂತಾ.
ಈ ಗಂಜಿ ಚಟ್ನಿ ಹಾಗೂ ನವೀನ್ ಡಿ ಪಡೀಲ್ ನಡುವೆ ಅವಿನಾಭಾವ ಸಂಬಂದವಿದೆ ಅದೇನೆಂದರೆ, ಇವರೊಂದು ಕಾರ್ಯಕ್ರಮ ನೀಡಲು ಬೇರೆ ಪ್ರದೇಶಕ್ಕೆ ಹೋಗಿದ್ದರಂತೆ ಮಧ್ಯಾಹ್ನದ ವೇಳೆ ಊಟಕ್ಕೆ ಏನು ಮಾಡೋದು ಅನ್ನೋವಾಗ ನನಗೆ ಗಂಜಿ ಊಟ ಸಾಕೂ ಅಂತಾ ಹೇಳಿದರಂತೆ. ಹೇಳಿ ಕೇಳಿ ಅದು ಬೇರೆ ಪ್ರದೇಶ ಗಂಜಿ ಊಟ ಸಿಗುವಂತ ಚಾನ್ಸ್ ಇರಲಿಲ್ಲ ಆದರೂ ಅದದ್ದೂ ಆಗಲಿ ಅಂತಾ ಹುಡುಕೋಕೆ ಶುರು ಮಾಡಿದ್ರು.. ಎಲ್ಲೂ ಗಂಜಿ ಚಟ್ನಿ ಸಿಗದಿದ್ದಾಗ ವೈಟ್ ರೈಸ್ ಅನ್ನ ಊಟ ಮಾಡಿದ್ದೇನೆ ಅಂತಾ ಸ್ವಾರಸ್ಯಕ್ಕಾರವಾಗಿ ಹೇಳತ್ತಾರೆ.
ಗಂಜಿ ಚಟ್ನಿ ಮಾತ್ರವಲ್ಲದೆ ಮಂಗಳೂರಿನ ಸೀಸನಲ್ ಫುಡ್ ಅಂದ್ರೆ ಅವರಿಗೆ ಪಂಚ ಪ್ರಾಣವಂತೆ.. ಎಷ್ಟೆ ದೊಡ್ಡ ನಟನಾದರೂ ಎಷ್ಟೆ ಜನಪ್ರಿಯತೆಯನ್ನ ಹೊಂದಿದರು ನಮ್ಮ ಭಾಷೆ, ನಮ್ಮ ಆಹಾರದ ಬಗ್ಗೆ ಪ್ರೀತಿ ಇರೋ ನಟ ಅಂದರೆ ಅದು ತುಳು ನಾಡಿನ ಹೆಮ್ಮೆಯ ನಟ ಕುಸಲ್ದರಸೇ ನವೀನ್ ಅಣ್ಣ.
ಕಿರಣ್ ದೊಂಡೋಲೆ
Leave A Reply