ಮಸೀದಿಗಳಲ್ಲಿ ಮೈಕ್ ಬಳಸಬಾರದು: ಜಾವೇದ್ ಅಕ್ತರ್
ದೆಹಲಿ: ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಮಸೀದಿಗಳಲ್ಲಿ ಅಜಾನ್ ವೇಳೆ ಮೈಕ್ ಬಳಕೆ ವಿರುದ್ಧ ಮಾತಾಡಿದಕ್ಕೆ ತೀವ್ರ ವಿರೋಧ ವ್ಯಕ್ತವಾಗಿ, ಫತ್ವಾ ಹೊರಡಿಸುವುದು, ಜೀವ ಬೆದರಿಕೆ ಹಾಕಲಾಗಿತ್ತು. ಆದರೆ ಇದೀಗ ಮುಸ್ಲಿಂ ಸಾಹಿತಿ, ಕವಿ ಜಾವೇದ್ ಅಕ್ತರ್ ಕೂಡ ಮಸೀದಿಗಳಲ್ಲಿ ಮೈಕ್ ಗಳನ್ನು ಬಳಬಾರದು ಎಂದು ಹೇಳಿದ್ದಾರೆ.
ಮಸೀದಿಗಳಲ್ಲಿ ಮೈಕ್ ಬಳಸಬಾರದು. ವಿಶೇಷವಾಗಿ ಜನಸಂದಣಿ ಇರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮಸೀದಿಗಳಲ್ಲಿ ಮೈಕ್ ಬಳಸಬಾರದು ಎಂದು ಟ್ವೀಟ್ ಮಾಡಿದ್ದಾರೆ. ನಾನು ಗಾಯಕ ಸೋನು ನಿಗಮ್ ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಅವರು ಅಜಾನ್ ವೇಳೆ ಮೈಕ್ ಬಳಕೆಯಿಂದ ನನ್ನ ನಿದ್ದೆಗೆ ಭಂಗವುಂಟಾಗುತ್ತಿದೆ ಎಂದು ಹೇಳಿದ್ದರು. ಅದಕ್ಕೆ ನನ್ನ ಸಹಮತವಿದೆ ಎಂದು ಹೇಳಿದ್ದಾರೆ.
ಅಜಾನ್ ವೇಳೆ ಮೈಕ್ ಬಳಕೆ ವಿರೋಧಿಸಿ ಹೇಳಿಕೆ ನೀಡಿದ್ದ ಸೋನು ನಿಗಮ್ ಗೆ ಜೀವ ಬೆದರಿಕೆ ಇದೆ ಎಂದು ಮಹಾರಾಷ್ಟ್ರ ಗುಪ್ತಚರ ಇಲಾಖೆ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿತ್ತು. ಆದ್ದರಿಂದ ಸೋನು ನಿಗಮ್ ಮನೆಗೆ ವಿಶೇಷ ಭದ್ರತೆ ಒದಗಿಸಲಾಗಿತ್ತು. ನಿಗಮ್ ಟ್ವೀಟ್ ಮಾಡಿರುವುದು ದೇಶಾದ್ಯಂತ ತೀವ್ರ ಕೋಲಾಹಲ ಸೃಷ್ಟಿಸಿತ್ತು.
Leave A Reply