ಸಂಸತ್ತಿನಲ್ಲಿ ಮೋದಿ ಕಾಂಗ್ರೆಸ್ಸಿಗೆ ಹಿಗ್ಗಾಮುಗ್ಗ ಟೀಕಿಸುವಾಗ ಕಾಂಗ್ರೆಸ್ಸಿಗರು ಗಲಾಟೆ ಮಾಡಿದ್ದರ ಹಿಂದೆ ರಾಹುಲ್ ಕೈವಾಡ?
![](https://tulunadunews.com/wp-content/uploads/2018/02/raul.jpg)
ದೆಹಲಿ: ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಉಭಯ ಸದನಗಳಲ್ಲೂ 90 ಪ್ಲಸ್ 90 ನಿಮಿಷ ಕಾಂಗ್ರೆಸ್ಸಿನ ಮುಖವಾಡ ಬಯಲು ಮಾಡುತ್ತಲೇ ಕಾಂಗ್ರೆಸ್ಸಿಗರು ಸ್ಕೂಲ್ ಮೇಷ್ಟ್ರು ಹೊಡೆಯುವಾಗ ಮಕ್ಕಳು ಬೇಡ ಸರ್, ಕ್ಷಮಿಸಿ ಸರ್ ಎನ್ನುವ ಹಾಗೆ “ಬಂದ್ ಕರೋ, ಬಂದ್ ಕರೋ” ಎಂದು ಗದ್ದಲ ಎಬ್ಬಿಸಿದರು. ಆದರೂ ಮೋದಿ ಅವರು ದೇಶದ ಇತಿಹಾಸ ಬಿಚ್ಚಿಟ್ಟು, ಅದರಲ್ಲಿ ಕಾಂಗ್ರೆಸ್ ಮುಖವಾಡ ಎಂಥಾದ್ದು ಎಂದು ಬಯಲು ಮಾಡಿದರು.
ಆದರೆ ಹೀಗೆ ಮೋದಿ ಅವರು ಭಾಷಣ ಮಾಡುವಾಗ ಕಾಂಗ್ರೆಸ್ ಸಂಸದರು ಗಲಾಟೆ ಎಬ್ಬಿಸಿದ್ದರ ಹಿಂದೆ ರಾಹುಲ್ ಗಾಂಧಿಯವರ ಕೈವಾಡ, ಸೂಚನೆ ಇದೆಯಾ ಎಂಬ ಅನುಮಾನ ಮೂಡಿದೆ.
ಹೌದು, ಕಾಂಗ್ರೆಸ್ಸಿಗರು ಬಂದ್ ಕರೋ, ಬಂದ್ ಕರೋ ಎಂದು ಮೋದಿ ಅವರ ಭಾಷಣಕ್ಕೆ ಅಡ್ಡಿಪಡಿಸಿದರು ಎಂಬುದಕ್ಕೆ ಹಲವು ಸಾಕ್ಷ್ಯ ದೊರೆತಿವೆ. ಮೋದಿ ಅವರು ಭಾಷಣ ಆರಂಭಿಸುತ್ತಲೇ, ನಿಧಾನವಾಗಿ ಕಾಂಗ್ರೆಸ್ಸಿನ ನಿಜಬಣ್ಣ ಬಯಲು ಮಾಡಲು ಮುಂದಾದರು.
ಮೋದಿ ಅವರ ಮಾತುಗಳು ಯಾವಾಗ ಕಾಂಗ್ರೆಸ್ಸಿಗರನ್ನು ಚುಚ್ಚಲು ಆರಂಭಿಸಿದವೋ, ಯಾವಾಗ ಕಾಂಗ್ರೆಸ್ಸಿನ ಬಣ್ಣ ಕಳಚುತ್ತ ಹೋಯಿತೋ, ಅಲ್ಲೇ ಇದ್ದ ರಾಹುಲ್ ಗಾಂಧಿ ಮುಖ ಕೆಂಪಿಟ್ಟಿತು. ಆಗ ಅವರು ಕಾಂಗ್ರೆಸ್ಸಿಗರತ್ತ ಮುಖ ಮಾಡಿ, ಏನಿದು ಮೋದಿ ಎಷ್ಟೆಲ್ಲ ಜಾಡಿಸುತ್ತಿದ್ದರೂ ನೀವು ಸುಮ್ಮನೆ ಇದ್ದಿರಲ್ಲ, ಗದ್ದಲ ಆರಂಭಿಸಿ ಎಂಬಂತಹ ಮುಖಭಾವ ತೋರಿಸಿ, ಗದ್ದಲ ಆರಂಭಿಸಿ ಎಂದು ಹೇಳಿದ ಹಾಗಿತ್ತು. ಸಂಸತ್ತಿನಲ್ಲಿ ರಾಹುಲ್ ಸನ್ನೆ ಮಾಡಿರುವ ಕುರಿತು ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಅಷ್ಟೇ ಅಲ್ಲ, ಮೋದಿ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ಬಳಸಿ, ರಾಜ್ಯಸಭೆಗೆ ತೆರಳುವ ಮುನ್ನ ರಾಹುಲ್ ಗಾಂಧಿಯವರು ಕಾಂಗ್ರೆಸ್ ಸಂಸದರಿಗೆ ಗದ್ದಲ ಆರಂಭಿಸಿ, ಮೋದಿ ಮಾತನಾಡಲು ಬಿಡಬೇಡಿ ಎಂದು ಸೂಚಿಸದ್ದರು ಎಂದು ಸಹ ತಿಳಿದುಬಂದಿದೆ.
ಒಟ್ಟಿನಲ್ಲಿ ದೇಶದ ಗಂಭೀರ ವಿಷಯಗಳನ್ನಿಟ್ಟುಕೊಂಡು ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ಬಳಸಿದರೆ, ಅದಕ್ಕೆ ಉತ್ತರ ನೀಡುವ ಬದಲು ಕಾಂಗ್ರೆಸ್ಸಿಗರು ಗದ್ದಲ ಮಾಡಿದ್ದು, ಸಂಸತ್ತಿಗೆ ಮಾಡಿದ ಅವಮಾನ ಹಾಗೂ ಉತ್ತರಿಸಲು ಆಗದ ಪರಿಸ್ಥಿತಿಗೆ ಅವರು ತಲುಪಿದ್ದರು ಎಂಬುದು ಖಾತ್ರಿಯಾಗಿದೆ. ಮೋದಿ ಮಾತಿನ ಅಲೆಗೆ ಕಾಂಗ್ರೆಸ್ ನಾಯಕರು ಕೊಚ್ಚಿ ಹೋದರು ಹಾಗೂ ರಾಹುಲ್ ಗಾಂಧಿ ಬೆಚ್ಚಿಬಿದ್ದರು ಎಂಬುದಂತೂ ಸುಳ್ಳಲ್ಲ.
Leave A Reply