ಅಯೋಧ್ಯ ವಿವಾದ, ಮಸೀದಿ ಸ್ಥಳಾಂತರಿಸಲು ಇಸ್ಲಾಮನಲ್ಲಿ ಅವಕಾಶ, ಮುಸ್ಲಿಂ ಕಾನೂನು ಬೋರ್ಡ್

ಬೆಂಗಳೂರು: ಅಯೋಧ್ಯ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ಹೊರಬಂದಿದ್ದು, ಇಸ್ಲಾಮ್ ನಲ್ಲಿ ಮಸೀದಿ ಸ್ಥಳಾಂತರಕ್ಕೆ ಅವಕಾಶವಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಸೈಯದ್ ಸಲ್ಮಾನ್ ಹುಸೈನ್ ನಾದ್ವಿ ತಿಳಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಜೊತೆ ಬೆಂಗಳೂರಿನಲ್ಲಿ ಮುಸ್ಲಿಂ ಕಾನೂನು ಮಂಡಳಿಯ ಆರು ಸದಸ್ಯರು ಮಾತುಕತೆ ನಡೆಸಿದದ ನಂತರ ಮೌಲಾನಾ ಸೈಯದ್ ಈ ಹೇಳಿಕೆ ನೀಡಿದ್ದಾರೆ. ಶ್ರೀ ಶ್ರೀ ಜೊತೆ ಮೂರು ಗಂಟೆ ಸಭೆ ನಡೆಸಿದ ನಂತರ ಈ ಮಹತ್ವದ ಹೇಳಿಕೆ ಬಿಡುಗಡೆಯಾಗಿದೆ.
ಶಿಯಾ, ಸುನ್ನಿ ಸೇರಿ ಮುಸ್ಲಿಂ ಧರ್ಮದ ನಾನಾ ಪಂಗಡಗಳ, ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು. ಮುಂದಿನ ಸಭೆ ಮಾರ್ಚ್ ನಲ್ಲಿ ಅಯೋಧ್ಯೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಅಲಹದಾಬಾದ್ ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತೀರುವ ವೇಳೆಯೇ ಈ ಮಹತ್ವದ ತೀರ್ಪು ಹೊರ ಬಂದಿರುವುದು ದೇಶದ ಗಮನ ಸೆಳೆದಿದ್ದು, ಶೀಘ್ರದಲ್ಲಿ ಅಯೋಧ್ಯೆ ವಿವಾದಕ್ಕೆ ಇತಿಶ್ರೀ ಬೀಳುವ ಲಕ್ಷಣಗಳು ಗೋಚರಿಸಿವೆ.
Leave A Reply