ಮಗನೊಂದಿಗೆ ಮತ್ತೆ ಒಂದಾಗಲು ಸೊಸೆ ನಿಖಾ ಹಲಾಲಕ್ಕೆ ಒಳಗಾಗಬೇಕು ಎಂದ ನೀಚ ಮಾವ!
ಲಖನೌ: ಒಂದೆಡೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಕಾನೂನು ರೂಪಿಸಲು ಹೊರಟಿದೆ. ಇನ್ನೊಂದೆಡೆ ನಿಖಾ ಹಲಾಲ (ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಮತ್ತೆ ತನ್ನ ಮಾಜಿ ಗಂಡನ ಜತೆ ಒಂದಾಗಲು ಇನ್ನೊಬ್ಬರ ಜತೆ ಮದುವೆ ಮಾಡಿಕೊಳ್ಳುವುದು ಅಥವಾ ಒಂದು ರಾತ್ರಿ ಕಳೆಯುವುದು)ವನ್ನು ಅಸಾಂವಿಧಾನಿಕ ಎಂದು ಘೋಷಿಸಲು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಚಿಂತನೆ ನಡೆಸಿದೆ. ಹೀಗಿದ್ದರೂ ಅನಿಷ್ಟವೊಂದು ನಡೆದಿದೆ.
ಹೌದು, ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಮಾವನೊಬ್ಬ ಮಗನಿಂದ ವಿಚ್ಛೇದನ ಪಡೆದ ಸೊಸೆ ಮತ್ತೆ ತನ್ನ ಮಾಜಿ ಗಂಡನೊಂದಿಗೆ ಜೀವನ ನಡೆಸಲು ತನ್ನೊಂದಿಗೆ ಲೈಂಗಿಕ ಕ್ರಿಯೆ (ಇದೇ ನಿಖಾ ಹಲಾಲ)ಯಲ್ಲಿ ತೊಡಗು ಎಂದು ಒತ್ತಾಯಿಸುತ್ತಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಹೌದು, ನುಸ್ರತ್ ಎಂಬ ಮಹಿಳೆ ಸಲೀಂ ಎಂಬಾತನನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಮೊದಲು ಎಲ್ಲವೂ ಚೆನ್ನಾಗೇ ಇತ್ತು. ಆದರೆ ಬಳಿಕ ಗಂಡ ಹಾಗೂ ಮಾವ ಇಬ್ಬರೂ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸಲು ಆರಂಭಿಸಿದ್ದಾರೆ. ಮಹಿಳೆ ತಂದು ಕೊಡದ ಕಾರಣ ಸಲೀಂ ವಿಚ್ಛೇದನ ನೀಡಿದ್ದಾನೆ.
ವಿಚ್ಛೇದನ ಪಡೆದ ಮಹಿಳೆ ತವರು ಮನೆಯಲ್ಲಿದ್ದು, ಆಕೆಯ ಅಪ್ಪ ಈಗ ಸಲೀಂ ಜತೆ ಮತ್ತೆ ಜೀವನ ನಡೆಸುವಂತೆ ಕೋರಿದ್ದಾರೆ. ಮಹಿಳೆಯೂ ಒಪ್ಪಿದ್ದಾಳೆ. ಆದರೆ ಈ ಕೋರಿಕೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಸಲೀಂ ಅಪ್ಪ, ತನ್ನೊಂದಿಗೆ ನಿಖಾ ಹಲಾಲಕ್ಕೆ ಒಳಗಾಗಬೇಕು ಎಂದು ಷರತ್ತು ವಿಧಿಸಿದ್ದಾನೆ ಎಂದು ಮಹಿಳೆ ಬರೇಲಿಯ ಬರದಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಟ್ಟಿನಲ್ಲಿ, ಸಕಲರಿಗೂ ಒಳ್ಳೆಯದಾಗಬೇಕು ಎಂದು ಎಲ್ಲ ಧರ್ಮಗಳೂ ಬಯಸುತ್ತವೆ. ಆದರೆ ಕೆಲವು ಧರ್ಮಪಾಲಕರಿಂದ ಮುಸ್ಲಿಂ ಮಹಿಳೆಯರು ಸಂಕಟ ಅನುಭವಿಸುತ್ತಿದ್ದಾರಲ್ಲ ಎಂಬುದೇ ಬೇಸರದ ಸಂಗತಿ. ದುರದೃಷ್ಟವಶಾತ್, ಇಂತಹ ಸಂಗತಿಗಳು ಮಾಧ್ಯಮಗಳಿಂದಲೂ ದೂರ ಉಳಿಯುತ್ತವೆ ಹಾಗೂ ಅತ್ತ ಮುಸ್ಲಿಂ ಮಹಿಳೆಯರು ನರಳುತ್ತಿರುತ್ತಾರೆ.
Leave A Reply