ಮದುವೆಯಾಗುವುದಾಗಿ ನಂಬಿಸಿ ಇಸ್ಲಾಮಿಗೆ ಮತಾಂತರ ಮಾಡಿದವನ ವಿರುದ್ಧ ದೂರು ದಾಖಲು, ಲವ್ ಜಿಹಾದ್ ಶಂಕೆ!
ಹೈದರಾಬಾದ್: ದೇಶದಲ್ಲಿ ಪ್ರೀತಿಯ ಹೆಸರಲ್ಲಿ ನಡೆಯುವ ಧರ್ಮಯುದ್ಧ ಅರ್ಥಾತ್ ಲವ್ ಜಿಹಾದ್ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದ್ದು, ಹಿಂದೂ ಯುವತಿಯರು, ಪೋಷಕರು ನರಳಾಡುವಂತಾಗಿದೆ.
ಇದಕ್ಕೆ ಪೂರಕ ಎಂಬಂತೆ, ಹೈದರಾಬಾದ್ ನಲ್ಲಿ ಅನಿವಾಸಿ ಭಾರತೀಯನೊಬ್ಬ ಹಿಂದೂ ಯುವತಿಯನ್ನು ಪ್ರೀತಿಸಿ, ಆಕೆಯನ್ನು ಮತಾಂತರಗೊಳಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ಹಾಗೂ ಆಕೆಯ ಪೋಷಕರು ರಾಚ್ಕೊಂಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಫ್ದಾರ್ ಅಬ್ಬಾಸ್ ಜೈದಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದು, ಈತ ಹೈದರಾಬಾದ್ ನ ದರುಲ್ ಶಿಫಾ ಎಂಬ ಪ್ರದೇಶದವನಾಗಿದ್ದಾನೆ. ಕೆಲವು ವರ್ಷಗಳ ಹಿಂದೆ 25 ವರ್ಷದ ಹಿಂದೆ ಪ್ರೀತಿಸಿದ್ದು, ಬಳಿಕ ದುಬೈಗೆ ಹಾರಿದ್ದಾನೆ. ಯುವತಿಯನ್ನೂ ದುಬೈಗೆ ಕರೆಸಿ ಮದುವೆಗೂ ಮುಂಚಿನ ಪ್ರಕ್ರಿಯೆ ಎಂದು ಇಸ್ಲಾಮಿಗೆ ಮತಾಂತರಗೊಳಿಸಿದ್ದಾನೆ. ಅಷ್ಟೇ ಅಲ್ಲ ಅತ್ಯಾಚಾರವೂ ಎಸಗಿ ಈಗ ಮದುವೆಯಾಗುವುದಿಲ್ಲ ಎಂದು ವರಸೆ ಆರಂಭಿಸಿದ್ದಾನೆ ಎಂದು ಯುವತಿ ದೂರಿದ್ದಾರೆ.
ಕಳೆದ ವರ್ಷದ ಏಪ್ರಿಲ್ ನಲ್ಲಿ ಯುವಕ ಹಾಗೂ ಯುವತಿಯ ಕುಟುಂಬಸ್ಥರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಈಗ ಯುವಕ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಮಲ್ಕಾಜ್ ಗಿರಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಜೈದಿ ವಿರುದ್ಧ ಭಾರತೀಯ ದಂಡ ಸಂಹಿತೆಯ 376, 417 ಹಾಗೂ 420ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ.
Leave A Reply