ಮಾಣಿಕ್ ಸರ್ಕಾರ್ ಹಾಗೂ ಸಿಪಿಎಂ ವಿರುದ್ಧ ಬಿಜೆಪಿ ಬಿಡುಗಡೆಗೊಳಿಸಿದ ಕಿರು ಹೊತ್ತಗೆಯಲ್ಲಿ ಏನಿದೆ ಗೊತ್ತಾ?

ಅಗರ್ತಲಾ: ತ್ರಿಪುರ ರಾಜ್ಯದಲ್ಲಿ ಸಿಪಿಎಂ ಮುಕ್ತವಾಗಿಸಿ ಕಮಲ ಅರಳಿಸಲು ಸಜ್ಜಾಗಿರುವ ಬಿಜೆಪಿಯು ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹಾಗೂ ಸಿಪಿಎಂನ ಕರಾಳ ಮುಖವನ್ನು ತೆರೆದಿಡುವ ಕಿರುಹೊತ್ತಗೆಯೊಂದನ್ನು ಬಿಡುಗಡೆ ಮಾಡಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಕಾರ್ಯಕ್ರಮವೊಂದರಲ್ಲಿ “ಚಾರ್ಜ್ ಶೀಟ್ ಅಗೇನ್ಸ್ಟ್ ಸಿಪಿಎಂ” ಎಂಬ ಕಿರುಹೊತ್ತಗೆ ಬಿಡುಗಡೆಗೊಳಿಸಿದ್ದು, ಜನ ಬಿಜೆಪಿಗೇ ಮತ ಹಾಕಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಿರುಹೊತ್ತಗೆಯಲ್ಲಿ ಹುಸಿ ಆರೋಪ ಮಾಡದೆ, ಕಳೆದ 25 ವರ್ಷಗಳಲ್ಲಿ ತ್ರಿಪುರದಲ್ಲಿ ಸಿಪಿಎಂ ನಡೆಸಿದ ದುರಾಡಳಿತ, ಭ್ರಷ್ಟಾಚಾರ ಹಾಗೂ ಹಗರಣಗಳ ಕುರಿತ ಸಂಪೂರ್ಣ ಮಾಹಿತಿ ಕಿರು ಪುಸ್ತಕದಲ್ಲಿದೆ ಎಂದು ವಿವರಿಸಿದ್ದಾರೆ.
ಕಳೆದ 25 ವರ್ಷಗಳಿಂದ ರಾಜ್ಯವನ್ನಾಳುತ್ತಿರುವ ಸಿಪಿಎಂನಿಂದ ರಾಜ್ಯದ ಜನ ರೋಸಿ ಹೋಗಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧ ಪ್ರಕರಣಗಳಲ್ಲಿ ರಾಜ್ಯವೇ ನಂ.1 ಸ್ಥಾನದಲ್ಲಿದೆ. ಇದೆಲ್ಲದಕ್ಕೂ ಕಾರಣ ಸಿಪಿಎಂ ಎಂದು ರಾಮ್ ಮಾಧವ್ ಟೀಕಿಸಿದ್ದಾರೆ.
ಫೆಬ್ರವರಿ 18ರಂದು ತ್ರಿಪುರಾ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ-ಐಪಿಎಫ್ ಟಿ ಒಕ್ಕೂಟ ಚುನಾವಣೆ ಎದುರಿಸುತ್ತಿವೆ. ಫೆ.11ರಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
Leave A Reply