ಬಿಜೆಪಿ ಸೇರಿದಕ್ಕೆ ಸಿಪಿಎಂ ಕಾರ್ಯಕರ್ತರಿಂದ ಜೀವಬೆದರಿಕೆ, ಫೇಸ್ ಬುಕ್ ಲೈವ್ ನಲ್ಲಿ ಸಹಾಯ ಯಾಚಿಸಿದ ಮಗಳು

ಕೊಚ್ಚಿ: ಕೇರಳದಲ್ಲಿ ರಾಜಕೀಯ ಧ್ವೇಷ ಸಾಧನೆ ಮುಂದುವರಿದಿದ್ದು, ಆಡಳಿತದಲ್ಲಿರುವ ಕೆಂಪು ಸರ್ಕಾರ ವಿರೋಧ ಪಕ್ಷಗಳ ಕಾರ್ಯಕರ್ತರನ್ನು ಹಣಿಯುವ, ಕೊಲೆ ಮಾಡುವ, ಬೆದರಿಕೆ ಒಡ್ಡುವವರಿಗೆ ಸಾಥ್ ನೀಡುತ್ತಿದ್ದೇಯೇ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಕಾಸರಗೋಡು ಜಿಲ್ಲೆಯ ಸ್ಥಳೀಯ ಮುಖಂಡರೊಬ್ಬರು ಬಿಜೆಪಿ ಸೇರ್ಪಡೆಯಾಗಿದಕ್ಕೆ ಸಿಪಿಎಂ ಕಾರ್ಯಕರ್ತರಿಂದ ಕೊಲೆ ಬೆದರಿಕೆ ಒಡ್ಡಲಾಗಿದೆ. ನನ್ನ ತಂದೆಯನ್ನು ರಕ್ಷಿಸಿ ಎಂದು ಮಗಳೊಬ್ಬಳು ಫೇಸ್ ಬುಕ್ ಲೈವ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾಳೆ. ಇದೀಗ ಆ ವಿಡಿಯೋ ವೈರಲ್ ಆಗಿದ್ದು, ಮತ್ತೊಮ್ಮೆ ಕೆಂಪು ಉಗ್ರರ ಕರಾಳ ಮುಖದ ಅನಾವರಣವಾಗಿದೆ.
ಬಿಜೆಪಿ ಮುಖಂಡ ಸುಕುಮಾರನ್ ಇತ್ತೀಚೆಗೆ ಕಾಸರಗೋಡುನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮಣ್ಣಮಂ ರಾಜಶೇಖರನ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.
ಪುತ್ರಿ, ಹತ್ತನೇ ತರಗತಿಯ ವಿದ್ಯಾರ್ಥಿನಿ ಅಶ್ವೀನಿ ಫೇಸ್ ಬುಕ್ ಲೈವ್ ನಲ್ಲಿ ‘ನನ್ನ ತಂದೆ ಬಿಜೆಪಿ ಸೇರ್ಪಡೆಯಾಗಿದ್ದರಿಂದ ಕೊಲೆ ಬೆದರಿಕೆ ಒಡ್ಡಲಾಗಿದೆ. ಸ್ಥಳೀಯ ಸಿಪಿಎಂ ಮುಖಂಡರು ನನ್ನ ತಂದೆ ಬಿಜೆಪಿ ಸೇರಿದ್ದನ್ನು ವಿರೋಧಿಸುತ್ತಿದ್ದಾರೆ ಮತ್ತು ಕೊಲೆ ಬೆದರಿಕೆ ಒಡ್ಡಿದ್ದಾರೆ.
ಇತ್ತೀಚೆಗೆ ಕರಿಂತಲಮ್ ನಲ್ಲಿರುವ ಶಾಲೆಯಿಂದ ನನ್ನ ತಂದೆ ಮತ್ತು ನಾನು ಮನೆಗೆ ಬರುವಾಗ ಸಿಪಿಎಂನ ಐದು ಕಾರ್ಯಕರ್ತರು ನಮಗೆ ಜೀವ ಬೆದರಿಕೆ ಒಡ್ಡಿದ್ದಾರೆ. ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ. ನಗರದಲ್ಲಿ ನೆಮ್ಮದಿಯ ಜೀವನ ನಡೆಸು ನೋಡೋಣ ಎಂದು ಬೆದರಿಕೆ ಒಡ್ಡಿದ್ದಾರೆ. ಅವರು ಪೊಲೀಸರನ್ನು ಸೇರಿ ಯಾರಿಗೂ ಹೆದರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾಳೆ.
ನಾನು ನಿತ್ಯ ಶಾಲೆಗೆ ಹೋಗುವ ಮಾರ್ಗದಲ್ಲಿ ಅವರು ನಮಗಾಗಿ ಕಾಯುತ್ತಾರೆ. ಅವರಿಂದ ನಿತ್ಯ ಸಂಕಷ್ಟ ಎದುರಿಸುವಂತಾಗಿದೆ. ಪೊಲೀಸರಿಗೆ ದೂರು ನೀಡಿದರೂ, ಅವರು ಹೆದರುವುದಿಲ್ಲ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾಳೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ‘ಸುಕುಮಾರನ್ ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
https://www.facebook.com/BJP4keralam/videos/1954559554804164/