ಪ್ಯಾಲೇಸ್ತೀನ್ ಗೆ ಮೋದಿ ಐತಿಹಾಸಿಕ ಭೇಟಿ, ಮೋದಿ ದಿನಚರಿ ಏನೇನು ಗೊತ್ತಾ..?
ದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತದ ಇತಿಹಾಸದಲ್ಲೇ ಮೊದಲ ಭಾರಿಗೆ ಪ್ಯಾಲೇಸ್ತೀನ್ ಗೆ ಭೇಟಿ ನೀಡುವ ಮೂಲಕ ದಾಖಲೆ ಬರೆಯುತ್ತಿದ್ದಾರೆ. ಶನಿವಾರ ಬೆಳಗ್ಗೆ ಪ್ಯಾಲೇಸ್ತೀನ್ ರಾಮಲಾಹ್ ದಲ್ಲಿ ಮಾಜಿ ಅಧ್ಯಕ್ಷ ದಿವಂಗತ ಯಾಸೀರ್ ಅರಾಫತ್ ಅವರ ಸಮಾದಿಗೆ ಭೇಟಿ ನೀಡಲಿದ್ದಾರೆ.
ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ 2015ರಲ್ಲಿ ಪ್ಯಾಲೇಸ್ತೀನ್ ಗೆ ಭೇಟಿ ನೀಡುತ್ತಿದ್ದಾರೆ. ಎರಡು ದಿನಗಳ ಪ್ಯಾಲೆಸ್ತೀನ್ ಪ್ರವಾಸದಲ್ಲಿ ಮೋದಿ ಹಲವಾರು ಮಹತ್ವದ ಒಪ್ಪಂದಗಳಿಗೆ ಮುನ್ನುಡಿ ಬರೆಯಲಿದ್ದಾರೆ. ಅಲ್ಲದೇ ಇಸ್ರೇಲ್ ನೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತ ಪ್ಯಾಲೆಸ್ತೀನ್ ಇಸ್ರೇಲ್ ಮಧ್ಯೆ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆಯಲಿವೆ. ಈ ಮೂಲಕ ವಿಶ್ವದ ಮಹಾನ್ ನಾಯಕರು, ಬಲಿಷ್ಠ ದೇಶಗಳು ಮಾಡದಂತ ಸೌಹಾರ್ದದ ಕೆಲಸಕ್ಕೆ ಮೋದಿ ಕೈ ಹಾಕಿದ್ದಾರೆ. ಆದ್ದರಿಂದ ಇಡೀ ವಿಶ್ವ ಇದೀಗ ಮೋದಿ ಪ್ಯಾಲೆಸ್ತೀನ್ ಭೇಟಿಯನ್ನು ಕುತೂಹಲದಿಂದ ವೀಕ್ಷಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷರ ಗೃಹ ಅಲ್ ಮುಖತಾಃ ದಲ್ಲಿ ವಿಶೇಷ ಆತಿಥ್ಯ ನೀಡಲಾಗಿದೆ. ಮೊಸೋಲಿಯಂ ನಲ್ಲಿ ಗೌರವ ಸಲ್ಲಿಸಿದ ನಂತರ ಮೋದಿ, ಪ್ರಧಾನಿ ರಮಿ ಹಮ್ದುಲಾಃ ಜೊತೆ ಮೋದಿ ಲಘು ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಇದೇ ವೇಳೆ ಭಾರತ ಮತ್ತು ಪ್ಯಾಲೆಸ್ತೀನ್ ಮಧ್ಯೆ ವಿಶೇಷ ಮಾತುಕತೆಗಳು ನಡೆಯಲಿವೆ.
ಪ್ಯಾಲೇಸ್ತೀನ್ ಅಧ್ಯಕ್ಷ ಪ್ರಧಾನ ಕಚೇರಿ ಮುಖತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಗೌರವ ಸಲ್ಲಿಕೆ ಸಮಾರಂಭ ನಡೆಯಲಿದೆ. ಪ್ಯಾಲೇಸ್ತೀನ್ ಅಧ್ಯಕ್ಷರ ಕಚೇರಿ ಅಧ್ಯಕ್ಷರ ರಕ್ಷಣಾ ಪಡೆ, ಭದ್ರತಾ ಕಚೇರಿ, ಸಲಹೆಗಾರರ ಕಚೇರಿ ಸೇರಿ ಮಹತ್ವದ ಕಚೇರಿಗಳನ್ನು ಹೊಂದಿದೆ.
ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ ‘ಪ್ಯಾಲೇಸ್ತೀನ್ ನ ರಾಮಲಲ್ಲಾ ಕ್ಕೆ ಭಾರತದ ಪ್ರಧಾನಿಯೊಬ್ಬರ ಪ್ರಥಮ ಭೇಟಿ ಇದು. ಆದ್ದರಿಂದ ಈ ಭೇಟಿ ತೀವ್ರ ಮಹತ್ವದ್ದು ಎಂದು ಹೇಳಿದ್ದಾರೆ. ಪ್ಯಾಲೇಸ್ತೀನ್ ಭೇಟಿ ನಂತರ ಮೋದಿ ಯುನೈಟೆಡ್ ಅರಬ್ ಎಮಿರೇಟ್ ಮತ್ತು ಒಮೆನ್ ಗೆ ಭೇಟಿ ನೀಡಲಿದ್ದಾರೆ. ಫೆ.9ರಂದು ಪ್ಯಾಲೇಸ್ತೀನ್ ನ ಜೋರ್ಡಾನ್ ನಲ್ಲಿ ಇಳಿದಿರುವ ಮೋದಿ ಅವರಿಗೆ ರಾಜ ಎರಡನೇ ಅಬ್ದುಲ್ಲಾ ಮೋದಿ ಅವರಿಗೆ ಅದ್ದೂರಿ ಸ್ವಾಗತ ನೀಡಿದ್ದರು.
Leave A Reply