ರಾಹುಲ್ ಶೋಕಿಗೆ ಮಧ್ಯಾಹ್ನವೇ ತಲೆ ಎತ್ತಿದ್ದ ಮರಗಳು, ಅನುಮಾನ ಮೂಡಿಸಿದ ಕೈ ಶಾಸಕನ ದಿಢೀರ್ ಅಭಿವೃದ್ಧಿ
ಕಲಬುರಗಿ: ಕಾಂಗ್ರೆಸ್ ನಾಯಕರ ಅಭಿವೃದ್ಧಿ ಏಷ್ಟರ ಮಟ್ಟಿಗೆ ದಾರಿದ್ರ್ಯಕ್ಕೆ ಇಳಿದಿದ್ದಾರೆ ಎಂದರೇ ಕೇವಲ ರಾಹುಲ್ ಗಾಂಧಿ ಭೇಟಿ ನೀಡುತ್ತಾರೆ ಎಂಬ ಕಾರಣಕ್ಕೆ ಸರ್ಕಾರದ ಲಕ್ಷಾಂತರ ಹಣವನ್ನು ಶೋಕಿಗಾಗಿ ಹಾಳು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಇದೀಗ ತಟ್ಟನೇ ರಾಹುಲ್ ಗಾಂಧಿ ಭೇಟಿ ನೀಡುವ ಅತಿಥಿ ಗೃಹಗಳು, ರಸ್ತೆಗಳು ನೆನಪಾಗಿದ್ದು, ರಾಹುಲ್ ಓಡಾಡುವ ರಸ್ತೆ ಮಾರ್ಗಗಳನ್ನು ತರಾತುರಿಯಲ್ಲಿ ಸುಸ್ತಿಗೊಳಿಸುತ್ತಿದ್ದಾರೆ.
ಇತ್ತೀಚೆಗೆ ಕೊಪ್ಪಳದಲ್ಲಿ ರಾಹುಲ್ ಗಾಂಧಿ ವ್ಯಾಸ್ತವ್ಯ ಹೂಡಲಿರುವ ಅತಿಥಿ ಗೃಹಕ್ಕೆ ಸರ್ಕಾರದ ಅನುದಾನದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡಿಸಿದ್ದರು, ಇದೀಗ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಫೆ.12ರಂದು ರಾಹುಲ್ ರ್ಯಾಲಿ ನಡೆಸುವ ರಸ್ತೆಯಲ್ಲಿ ಕೃತಕ ಹಸಿರುಕರಣಕ್ಕೆ ಮುಂದಾಗಿದ್ದಾರೆ. ಜೇವರ್ಗಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಲಂಕಾರಿಕಾ ಗಿಡಗಳನ್ನು ನೆಡುತ್ತಿದ್ದಾರೆ.
ಕೃತಕ ಹಸಿರೀಕರಣ ಮಾಡಲು ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಕ್ರಮ ಕೈಗೊಂಡಿದ್ದಾರೆ. ರಾಹುಲ್ ಗಾಂಧಿ ಸಂಚರಿಸುವ ಮಾರ್ಗ ಮಧ್ಯದ ಉದ್ದಕ್ಕೂ ಸುಮಾರು 14 ಸಾವಿರ ರೂಪಾಯಿ ಬೆಲೆಯ, ಬೆಳೆದು ನಿಂತ ಪಾಮ್ ಗಿಡಗಳನ್ನು ನೆಡಲಾಗುತ್ತಿದೆ.
ಯಾವ ಯೋಜನೆ ರಾಹುಲ್ ಶೋಕಿಗೆ..?
ರಾಹುಲ್ ಪ್ರವಾಸಕ್ಕೆ ಬರುವ ವೇಳೆ ಶೋಕಿಗಾಗಿ ಮರಗಳನ್ನು ನೆಡುತ್ತಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ. ಯಾವ ಯೋಜನೆ ಅಥವಾ ಯಾರ ಅನುದಾನದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.
Leave A Reply