ಬುದ್ದಿ ಕಲಿಯದ ಪಾಕ್, ಪಾಕ್ ಬೆಂಬಲಿತ ಉಗ್ರರಿಂದ ಮತ್ತೇ ದಾಳಿ

ಜಮ್ಮು: ಭಾರತದ ವಿರುದ್ಧ ಸದಾ ಹಲ್ಲು ಮಸೆಯುವ ಪಾಕಿಸ್ತಾನ ಮತ್ತು ಪಾಕ್ ಪೋಷಿತ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದ್ದು, ಮತ್ತೇ ಶನಿವಾರ ಬೆಳಗ್ಗೆ ಸಂಜುವಾನ ಸೈನಿಕ ಶಿಬಿರದ ಮೇಲೆ -ಜೈಷ್ ಏ ಮಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ದಾಳಿ ನಡೆಸಿದ್ದು, ಇಬ್ಬರು ಭಾರತೀಯ ಧೀರ ಯೋಧರು ಹುತಾತ್ಮರಾಗಿದ್ದಾರೆ.
ಶನಿವಾರ ನಸುಕಿನ ಜಾವ ಸೈನಿಕ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸುಬೇದಾರ ಮಗನ್ಲಾಲ್ ಮತ್ತು ಸುಬೇದಾರ ಮೊಹ್ಹಮ್ಮದ್ ಆಶ್ರಫ್ ಹುತಾತ್ಮರಾಗಿದ್ದಾರೆ. ಅಲ್ಲದೇ ಸೇನಾಧಿಕಾರಿಗಳ ಮಗಳು ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ನಾಲ್ಕರಿಂದ ಐದು ಉಗ್ರರ ತಂಡ ನಸುಕಿನ ಜಾವ 5 ಗಂಟೆ ಸುಮಾರಿಗೆ ಸೈನಿಕ ಶಿಬಿರ ಹೊಕ್ಕಿರುವ ಉಗ್ರರ ಚಲನವಲನ ಕಂಡತಕ್ಷಣ ಕಾರ್ಯ ಆರಂಭಿಸಿ, ಕಾರ್ಯಾಚರಣೆ ಆರಂಭಿಸುವಾಗಲೇ ದಾಳಿ ಬಂಕರ್ ಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಸೈನಿಕರ ವಿರುದ್ಧ ಭರ್ಜರಿ ಕಾರ್ಯಾಚರಣೆ ಭಾರತೀಯ ಸೈನ್ಯ ನಡೆಸಿದ್ದು, ಶಿಬಿರದ ಕಟ್ಟಡವೊಂದರಲ್ಲಿ ಉಗ್ರರು ಬಚ್ಚಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಸುತ್ತಮುತ್ತಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ, ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಉಗ್ರರ ವಿರುದ್ಧ ಕಾರ್ಯಾಚರಣೆಗೆ ಪ್ಯಾರಾ ಕಮಾಂಡೋ, ಏರ್ ಫೋರ್ಸ್ ಪಡೆಯನ್ನು ಬಳಸಲಾಗಿದೆ.
Leave A Reply