1ನೇ ಕ್ಲಾಸಿನ ಮಗು ಛದ್ಮವೇಷ ಸ್ಪರ್ಧೆಗೆ ನಿಂತಾಗ ಹೆದರಿದಂತೆ ಕಾಣಿಸುತ್ತಿದ್ದ ಪ್ರತಿಭಾ ಕುಳಾಯಿ!
ಪ್ರತಿಭಾ ಕುಳಾಯಿ ಅರ್ಜೆಂಟಾಗಿ ತನ್ನ ಸಮಕಾಲೀನ ರಾಜಕೀಯ ಎದುರಾಳಿಗಳಾದ ತನ್ನದೇ ಪಕ್ಷದ ಕವಿತಾ ಸನಿಲ್, ಶಾಲೆಟ್ ಪಿಂಟೋ ಎದುರು ಮಿಂಚಲು ಪ್ರಯತ್ನಿಸಿದ್ದಾರೆ. ಮೇಯರ್ ಆಗಿ ಆಯ್ಕೆಯಾಗಿದ್ದಲ್ಲಿ ಕವಿತಾ ಸನಿಲ್ ಗಿಂತ ಮೇಲೆ ಹೋಗಿ ಯಾವುದಾದರೂ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವಷ್ಟು ಮೈಲೇಜ್ ಪಡೆಯಲು ಸಾಮರ್ಥ್ಯವಿದ್ದ ಪ್ರತಿಭಾ ಕಳೆದ ಬಾರಿ ಕೊನೆಯ ಕ್ಷಣದಲ್ಲಿ ಉನ್ನತ ಮುಖಂಡರ ರಾಜಕೀಯ ಚದುರಂಗದಾಟದಲ್ಲಿ ಮೇಯರ್ ಸ್ಥಾನ ಕಳೆದುಕೊಂಡಿದ್ದರು. ಆದರೂ ಛಲ ಬಿಡದೆ ಕೆಪಿಸಿಸಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ನೇಮಕವಾಗಿ ಒರಗೆಯವರಿಗೆ ತನ್ನಲ್ಲೂ ಏನೋ ಇದೆ ಎಂದು ಸಾಬೀತುಪಡಿಸಿದವರು. ಅಂತಹ ಪ್ರತಿಭಾ ಕುಳಾಯಿ ಎನ್ನುವ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗೆ ಆ ಸ್ಥಾನದಲ್ಲಿ ನಿಂತು ಏನಾದರೂ ಮಾಡಬೇಕು ಎಂದೆನಿಸಿದೆ. ಅದಕ್ಕಾಗಿ ಕಾರ್ಕಳದ ಕಾಂಗ್ರೆಸ್ ಪ್ರತಿಭಟನಾ ಸಭೆಯನ್ನು ವೇದಿಕೆಯಾಗಿ ಉಪಯೋಗಿಸಿದ್ದಾರೆ. ಬಹುಶ: ಮೊದಲೇ ಸೂಚನೆ ಕೊಟ್ಟಿರಬೇಕು. ಅದಕ್ಕಾಗಿ ಪಾಯಿಂಟ್ ಬರೆದುಕೊಂಡೇ ಹೋಗಿದ್ದಾರೆ. ಆದರೆ ಅಲ್ಲಿ ಹೋಗಿ ಮೈಕ್ ಮುಂದೆ ನಿಂತ ಕೂಡಲೇ ಮೀಟರ್ ಆಫ್ ಆಗಿದೆ. ಬಹುಶ: ಬೆವರಿಗೆ ಬರೆದುಕೊಂಡು ಹೋದ ಕಾಗದ ಕೂಡ ಒದ್ದೆಯಾಗಿರಬೇಕು. ಪ್ರತಿಭಾ ಅದರಲ್ಲಿ ಬರೆದ ಪಾಯಿಂಟ್ ಗಳನ್ನು ಓದುವಾಗ ಬರೆಯುವಾಗ ಯಾರನ್ನು ಗುರಿಯಾಗಿಟ್ಟುಕೊಂಡು ಬರೆದಿದ್ದರೋ ಅದಕ್ಕೆ ವಿರೋಧವಾಗಿ ಓದಲು ಶುರು ಮಾಡಿದ್ದಾರೆ. ಒಂದು ವಾಕ್ಯ ಹೇಳುತ್ತಿದ್ದಂತೆ ತಾಳ ಮೇಳ ತಪ್ಪಿದ ಅನುಭವ ಆದ ಕಾರಣ “ಸಾರಿ” ಅಂದಿದ್ದಾರೆ. ಮತ್ತೆ ಕಾಗದ ನೋಡಿ ಏನೋ ಯೋಚಿಸಿ ಮತ್ತೆ ಓದಲು ಶುರು ಮಾಡಿದ್ದಾರೆ. ಅಲ್ಲಿ ಕೂಡ ಶಬ್ದಗಳು ಬಾಯಿಗೆ ಬಂದಿಲ್ಲ. ಮತ್ತೆ “ಸಾರಿ” ಎಂದಿದ್ದಾರೆ. ಅಲ್ಲಿಗೆ ನೆರೆದಿದ್ದ ಕಾಂಗ್ರೆಸ್ಸಿಗರಿಗೆ ಮುಜುಗರವಾಗಿದೆ. ಮೋದಿಗೆ ಬೈಯಲು ಹೊರಟ ಪ್ರತಿಭಾ ಒಂದನೇ ಕ್ಲಾಸಿನ ಮಗು ಛದ್ಮವೇಷ ಹಾಕಿ ಮೊದಲ ಬಾರಿ ವೇದಿಕೆಗೆ ಬಂದಾಗ ಹೇಗೆ ಆಡುತ್ತೊ ಹಾಗೆ ಆಡಿದ್ದಾರೆ.
ಅದರ ನಂತರ ಮತ್ತೆ ತಡವರಿಸಿಕೊಂಡು ಮೋದಿಯನ್ನು ಬಿಟ್ಟು ರಾಷ್ಟ್ರೀಯ ಸಂಘ ಪರಿವಾರದ ಸಂಘಟನೆಗಳಿಗೆ ಹೋಗುವ ಯುವಕರ ಬಗ್ಗೆ ಅಸಂಬದ್ಧವಾಗಿ ಮಾತನಾಡಲು ಶುರು ಮಾಡಿದ್ದಾರೆ. ಕೆಲಸವಿಲ್ಲದಿದ್ದರೆ ಹಿಂದೂ ಸಂಘಟನೆಗಳಿಗೆ ಸೇರಿ ಎಂದಿದ್ದಾಳೆ. ದೀಪಕ್ ರಾವ್ ಹಾಗೂ ಶರತ್ ಮಡಿವಾಳರ ಕುಟುಂಬಕ್ಕೆ ಏನೂ ಹಣಕಾಸಿನ ನೆರವು ಇಲ್ಲಿಯ ತನಕ ಬಂದಿಲ್ಲ ಎಂದಿದ್ದಾರೆ. ಒಂದು ಅಪ್ಪಟ ಸುಳ್ಳನ್ನು ಹೇಳಿ ಅವರು ಈಚೆ ಬರುವಷ್ಟರಲ್ಲಿ ದೀಪಕ್ ರಾವ್ ಮನೆಯಿಂದ ಸ್ವರ ಕೇಳುತ್ತಿತ್ತು. ನಮಗೆ ಹಣ ಬಂದಿದೆ.
ಇನ್ನು ಪ್ರತಿಭಾ ಕುಳಾಯಿ ಕಷ್ಟಪಟ್ಟು ಹೇಳಿದ ವಿಷಯಕ್ಕೆ ಬರೋಣ. ಜೈಲಿನಲ್ಲಿರುವ ಹಿಂದೂ ಸಂಘಟನೆಗಳ ಹುಡುಗರನ್ನು ನೋಡಲು ಕೂಡ ಯಾರೂ ಬರುವುದಿಲ್ಲ. ಜೈಲಿನಲ್ಲಿ ಬೇಕಾದಷ್ಟು ದಿನ ಫ್ರೀ ಊಟ ಮಾಡಿ ಹೊರಗೆ ಬರಬಹುದು ಎಂದು ಕಿಚಾಯಿಸಿದ್ದಾರೆ. ಒಬ್ಬ ಯುವಕ ಹಿಂದೂ ಧರ್ಮಕ್ಕೆ ಕೆಲಸ ಮಾಡುವಾಗ ಜೈಲಿಗೆ ಹೋದರೆ ಅವನಿಗೆ ಗೊತ್ತಿದೆ, ಅವನನ್ನು ಯಾರು ಬಿಡಿಸುತ್ತಾರೆ, ಯಾರು ಖರ್ಚು ನೋಡುತ್ತಾರೆ ಎನ್ನುವುದು. ಅದನ್ನು ಪ್ರತಿಭಾ ಕುಳಾಯಿ ಹೇಳಬೇಕಾಗಿಲ್ಲ. ಮೊದಲನೇಯದಾಗಿ ಪ್ರತಿಭಾ ಏನು ಮಾಡಬೇಕು ಎಂದರೆ ರಮ್ಯಾ ತರಹ ಏನೇನೋ ಮಾಡಲು ಹೋಗುವ ಮೊದಲು ತಾನು ಹೇಳುವ ವಿಷಯಗಳನ್ನು ಸ್ಟಡಿ ಮಾಡಬೇಕು. ಮೈಕ್ ಮುಂದೆ ನಿಂತಾಗ ಧೈರ್ಯ ಪ್ರದರ್ಶಿಸಬೇಕು ಮತ್ತು ಎರಡೆರಡು ಸಲ ಸಾರಿ ಹೇಳುತ್ತಾ ಭಾಷಣ ಮಾಡುವುದನ್ನು ನಿಲ್ಲಿಸಬೇಕು.
ಒಂದಂತೂ ನಿಜ, ಪ್ರತಿಭಾ ಕುಳಾಯಿ ಭಾಷಣ ಮಾಡಿದ ನಂತರ ತನ್ನ ಆಪ್ತರಲ್ಲಿ ತುಳುವಿನಲ್ಲಿ ಹೇಳಿದರಂತೆ ” ಏನೋ ಹೇಳಲು ಹೋಗಿದ್ದೆ. ಆದರೆ ಕೊನೆಗೆ ಏನೋ ಹೇಳಿ ಬಂದೆ. ನನ್ನ ಭಾಷಣದಿಂದ ಕಾಂಗ್ರೆಸ್ ಗೆ ಬರಲಿದ್ದ ಹತ್ತು ವೋಟ್ ಕೂಡ ಕಮ್ಯುನಿಸ್ಟರ ಪಾಲಿಗೆ ಹೋಯಿತು” ಎಂದರಂತೆ!
Leave A Reply