• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಓವೈಸಿ ಎನ್ನುವ ಆಧುನಿಕ ಅಲ್ಲಾವುದ್ಧಿನ್ ಖಿಲ್ಜಿಯಿಂದ ಮತ್ತೆ ಗುಟುರು!!

Hanumantha Kamath Posted On February 10, 2018
0


0
Shares
  • Share On Facebook
  • Tweet It

ಹೈದ್ರಾಬಾದಿನ ಸಂಸದ ಓವೈಸಿ ಮೊನ್ನೆ ಲೋಕಸಭೆಯಲ್ಲಿ ಮತ್ತೆ ಮೂಲಭೂತ ಮುಸ್ಲಿಮರ ಬಗ್ಗೆ ಬ್ಯಾಟಿಂಗ್ ಮಾಡಿದ್ದಾರೆ. ಆ ವ್ಯಕ್ತಿಗೆ ಮುಸ್ಲಿಮರ ಬಗ್ಗೆ ಎಷ್ಟು ಪ್ರೀತಿ ಇದೆ ಎಂದರೆ ಭಾರತ-ಪಾಕಿಸ್ತಾನ ಇಬ್ಭಾಗ ಮಾಡಲು ಆವತ್ತು ಜಿನ್ನಾ ಹಟ ಹಿಡಿದಿದ್ದರಲ್ಲ, ಅಂತಹ ಜಿನ್ನಾ ಅವರ ಕಸಿನ್ ತರಹ ಈ ಮನುಷ್ಯ ವರ್ತಿಸುತ್ತಾನೆ. ಓವೈಸಿ ಮೊದಲು ಸುದ್ದಿಯಾದದ್ದೇ ಹಿಂದೂಗಳ ವಿರುದ್ಧ ಮಾತನಾಡಿ. ಹದಿನೈದು ನಿಮಿಷ ಭಾರತದ ಪೊಲೀಸರು ಮೌನವಾಗಿದ್ದರೆ 80% ಇರುವ ಹಿಂದೂಗಳನ್ನು ಹೊಸಕಿ ಹಾಕುತ್ತೇವೆ ಎಂದಿದ್ದ ಖತರ್ ನಾಕ್ ಮನುಷ್ಯ ಓವೈಸಿ. ಈ ಬಾರಿ ಓವೈಸಿ ಹೇಳಿರುವುದು ಭಾರತದ ಮುಸ್ಲಿಮರನ್ನು ಪಾಕಿಸ್ತಾನಿಗಳು ಎಂದು ಕರೆಯುವವರಿಗೆ ಮೂರು ವರ್ಷ ಜೈಲು ಶಿಕ್ಷೆ ನೀಡಬೇಕು ಎಂದಿದ್ದಾನೆ ಓವೈಸಿ. ಅದಕ್ಕಾಗಿ ಒಂದು ಕಾನೂನು ತರಬೇಕು ಎಂದು ಆಗ್ರಹಿಸಿದ್ದಾನೆ. ಅವನಿಗೆ ಗೊತ್ತಿದೆ, ಹೀಗೆ ಹೇಳುವ ಮೂಲಕ ಪಾಕಿಸ್ತಾನಕ್ಕೆ ಜೈಕಾರ ಹಾಕುವ ತನ್ನ ಸಮುದಾಯದವರ ಪ್ರೀತಿಗಳಿಸಬಹುದು.

ಈತ ಮುಸ್ಲಿಮ್ ಮಹಿಳೆಯರ ಪರ ಇಲ್ಲ…

ಒಂದು ವಿಷಯ ಇಲ್ಲಿ ಸ್ಪಷ್ಟಪಡಿಸಬೇಕು. ಭಾರತದಲ್ಲಿ ಸರಾಸರಿ 18% ಮುಸ್ಲಿಮರಿದ್ದಾರೆ. ಕೆಲವು ರಾಜ್ಯಗಳಲ್ಲಿ ಸರಾಸರಿಗಿಂತ ಕಡಿಮೆ ಇರಬಹುದು. ಕೆಲವು ರಾಜ್ಯಗಳಲ್ಲಿ ಹೆಚ್ಚು ಇರಬಹುದು. ಕೆಲವು ರಾಜ್ಯಗಳಲ್ಲಿ ಅವರು ಮತದಾನದಲ್ಲಿ ನಿರ್ಣಾಯಕರಿರಬಹುದು. ಕೆಲವು ಕಡೆ ಅವರ ಸಂಖ್ಯೆ ಮತದಾನದ ಮೇಲೆ ಏನೂ ಪರಿಣಾಮ ಬೀರದೆ ಇರಬಹುದು. ಕೆಲವು ರಾಜಕೀಯ ಪಕ್ಷಗಳಿಗೆ ಮುಸ್ಲಿಮರ ಮತ ತಮ್ಮ ಗೆಲುವಿಗೆ ಅತ್ಯಗತ್ಯ ಇರಬಹುದು. ಕೆಲವು ರಾಜಕೀಯ ಪಕ್ಷಗಳು ಮುಸ್ಲಿಮರ ಮತವನ್ನೇ ನೆಚ್ಚಿ ಜನ್ಮ ತಾಳಿರಬಹುದು. ಆದರೆ ಏನೇ ಆದರೂ ಅವರನ್ನು ಎರಡನೇ ದರ್ಜೆಯ ನಾಗರಿಕರಾಗಿ ನೋಡುವಂತಹ ಧೈರ್ಯ ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ಅವರು ಭಾರತೀಯ ಜನತಾ ಪಾರ್ಟಿಗೆ ಮತ ಹಾಕುತ್ತಾರಾ, ಇಲ್ವಾ ಎನ್ನುವುದು ಬೇರೆ ವಿಷಯ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರನ್ನು ಭಾರತದ ಇತರ ನಾಗರಿಕರಷ್ಟೇ ಗೌರವಯುತವಾಗಿ ಕಾಣುತ್ತಾರೆ ಎನ್ನುವುದಕ್ಕೆ ತ್ರಿವಳಿ ತಲಾಕ್ ಎನ್ನುವ ಅನಿಷ್ಟ ಪದ್ಧತಿ ಹೋಗಲಾಡಿಸಲು ಕೇಂದ್ರ ಸರಕಾರ ದಿಟ್ಟ ಕ್ರಮ ತೆಗೆದುಕೊಂಡಿರುವುದೇ ಸಾಕ್ಷಿ.

ಆದರೆ ಮುಸ್ಲಿಂ ಮಹಿಳೆಯರ ಸಾಫ್ಟ್ ಕಾರ್ನರ್ ಬಿಜೆಪಿ ಕಡೆಗೆ ವಾಲುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಮೊದಲು ಎದ್ದವನೇ ಓವೈಸಿ. ಕಾನೂನು ಸರಿಯಿಲ್ಲ. ಅದನ್ನು ಜಾರಿಗೆ ತರಬಾರದು ಎಂದ. ಲೋಕಸಭೆಯಲ್ಲಿ ಆಗಲಿಲ್ಲ. ರಾಜ್ಯಸಭೆಯಲ್ಲಿ ಗುಟ್ಟಾಗಿ ಕಾಂಗ್ರೆಸ್ಸಿಗರೊಂದಿಗೆ ಹಸೆಮಣೆ ಏರಿ ಅಲ್ಲಿ ಅದು ಕಾನೂನಾಗದಂತೆ ತಡೆದ. ಈ ಮೂಲಕ ಲಕ್ಷಾಂತರ ಮುಸ್ಲಿಂ ಮಹಿಳೆಯರು ಅವರ ಧರ್ಮದ ಪುರುಷರ ಭೋಗ ವಸ್ತುವಾಗಿ ಮುಂದುವರೆಯಲು ಪುರುಷರಿಗೆ ಅವಕಾಶ ಕೊಟ್ಟ. ಓವೈಸಿ ಇತಿಹಾಸದ ಪೋಷಾಕುಗಳನ್ನು ಧರಿಸಿದರೆ ಪದ್ಮಾವತ್ ಸಿನೆಮಾದಲ್ಲಿ ಅಲ್ಲಾವುದ್ಧಿನ್ ಖಿಲ್ಜಿಯ ಪಾತ್ರ ಮಾಡಲು ಹೇಳಿ ಮಾಡಿಸಿದ ವ್ಯಕ್ತಿ ತರಹದ ಕಾಣುತ್ತಾನೆ.

ಈಗ ಈ ಖಿಲ್ಜಿಗೆ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವ ಮುಸ್ಲಿಮರ ಮೇಲೆ ಕನಿಕರ ಉಂಟಾಗಿದೆ. ಪಾಪ, ತವರು ಮನೆಯನ್ನು ನೆನೆದು ಎಷ್ಟು ಅಳುತ್ತಿದ್ದಾರೋ ಎಂದು ಅನಿಸಿದೆ. ಅಂತವರನ್ನು ಪಾಕಿಸ್ತಾನಿ ಎಂದು ಹೇಳುವವರಿಗೆ ಅಥವಾ ಪಾಕಿಸ್ತಾನಕ್ಕೆ ಹೋಗಿ ಎನ್ನುವವರಿಗೆ ಮೂರು ವರ್ಷ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾನೆ. ಅದಕ್ಕಾಗಿ ಕಾನೂನು ತನ್ನಿ ಎಂದಿದ್ದಾನೆ.

ಪಾಕ್ ಪರ ಇದ್ದವರಿಗೆ ಪಾಕಿ ಎನ್ನದೇ ಅಮೇರಿಕಾದವ ಎನ್ನಬೇಕಾ…

ನಿಜ, ಕೆಲವು ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಹೋಗಿ, ಅಲ್ಲಿರಿ, ನೀವು ಪಾಕಿಗಳ ಪರ, ನೀವು ಪಾಕಿಸ್ತಾನದವರಾ ಎಂದು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ನಾಯಕರು ಬಹಿರಂಗವಾಗಿ ಅಥವಾ ಸಾಮಾಜಿಕ ತಾಣಗಳ ಮೂಲಕ ಟಾಂಗ್ ಕೊಟ್ಟಿದ್ದಾರೆ. ಅದು ಯಾವಾಗ ಎಂದರೆ ಪಾಕಿಸ್ತಾನದ ಪರವಾಗಿ ಇಲ್ಲಿನ ಮುಸಲ್ಮಾನರು ಮೃದುತ್ವ ತೋರಿದಾಗ ಮಾತ್ರ. ಇಲ್ಲಿನ ಗಾಳೀ, ನೀರು, ಆಹಾರ ಸೇವಿಸಿ, ಕೇಂದ್ರ, ರಾಜ್ಯ ಸರಕಾರ ತರುವ ಯೋಜನೆಗಳ ಅತ್ಯಧಿಕ ಸೌಲಭ್ಯ ಪಡೆದು, ಜನಸಂಖ್ಯೆ ಹೆಚ್ಚಳಕ್ಕೆ ಹೆಚ್ಚಿನ ಕೊಡುಗೆ ಕೊಡುತ್ತಾ ಇರುವ ಮುಸಲ್ಮಾನರನ್ನು ಸಾರಾಸಗಟಾಗಿ ಯಾರೂ ಕೂಡ ಪಾಕಿಸ್ತಾನದವರು ಎಂದು ಜರೆದಿಲ್ಲ. ಆದರೆ ಅದೇ ಮುಸಲ್ಮಾನರಲ್ಲಿ ಕೆಲವರು ಇಂಡಿಯಾ-ಪಾಕ್ ಮ್ಯಾಚ್ ನಡೆಯುವಾಗ ಪಾಕ್ ಪರ ಮನಸ್ಥಿತಿ ಹೊಂದಿದರೆ, ಅತ್ತ ಕಾಶ್ಮೀರದಲ್ಲಿ ಪಾಕ್ ಧ್ವಜ ಹಿಡಿದು ರ್ಯಾಲಿ ನಡೆಸಿದರೆ, ಪಾಕಿಸ್ತಾನವನ್ನು ಹೊಗಳಿದರೆ ಆಗ ಯಾರು ಬೇಕಾದರೂ ಅಂತವರನ್ನು ಪಾಕಿಸ್ತಾನದವರು ಎಂದು ಜರೆದಿರಬಹುದು. ಅದರಲ್ಲಿ ತಪ್ಪೇನಿದೆ.

ಹಾಗಾದರೆ ಯಾರಾದರೂ ಮುಸ್ಲಿಮರು ಪಾಕಿಗಳ ಪರ ಏನೂ ಕೆಲಸ ಬೇಕಾದರೂ ಮಾಡಲಿ, ರ್ಯಾಲಿ ಮಾಡಲಿ, ಘೋಷಣೆ ಕೂಗಲಿ ಅವರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಾ? ಸರಿಯಾಗಿ ನೋಡಿದರೆ ಹಾಗೆ ಪಾಕ್ ಪರ ಇರುವವರನ್ನು ಪಾಕಿಸ್ತಾನಿಗಳು ಎನ್ನುವುದು ಮಾತ್ರವಲ್ಲ ಅವರಪ್ಪ ಕಸಬ್ ಬಳಿ ಕಳುಹಿಸಬೇಕು. ನಮ್ಮಲ್ಲಿ ಅಷ್ಟು ಕಠಿಣ ಕಾನೂನಿಲ್ಲ. ಹಾಗಿರುವಾಗ ನಿನ್ನೆ ಮೊನ್ನೆ ಸಂಸದ್ ಪ್ರವೇಶಿಸಿದ ಮನುಷ್ಯ ಇದಕ್ಕೊಂದು ಕಾನೂನು ತಂದು ಹಾಗೆ ಪಾಕಿಸ್ತಾನಿಗಳು ಎಂದು ನಮ್ಮನ್ನು ಹೇಳುವವರಿಗೆ ಕಡಿವಾಣ ಹಾಕಬೇಕು ಎಂದಿದ್ದಾನೆ. ಅವನಿಗೆ ಒಂದು ವಿಷಯ ಗೊತ್ತಿಲ್ಲ. ನಮ್ಮ ದೇಶದಲ್ಲಿ ಮಾತ್ರ ನಮ್ಮ ದೇಶವನ್ನು ಬೈದರೆ, ಪಾಕಿಸ್ತಾನದ ಪರ ಘೋಷಣೆ ಕೂಗಿದರೆ, ಪಾಕ್ ಧ್ವಜ ಹಿಡಿದು ಕಾಶ್ಮೀರದಲ್ಲಿ ರ್ಯಾಲಿ ಮಾಡಿದರೆ ನಾವು ಹೃದಯ ವೈಶಾಲ್ಯತೆಯನ್ನು ಮೆರೆದು ಹಾಗೆ ಬಿಡುತ್ತೇವೆ. ಅದೇ ಪಾಕಿಸ್ತಾನದಲ್ಲಿ ಇತ್ತೀಚೆಗೆ ಒಬ್ಬ ಭಾರತದ ಧ್ವಜವನ್ನು ತನ್ನ ಮನೆಯ ಟೇರೆಸಿನ ಮೇಲೆ ಕಟ್ಟಿದ್ದಕ್ಕೆ ಅವನನ್ನು ಜೈಲಿನ ಒಳಗೆ ಹಾಕಿ ಸರಿಯಾಗಿ ರುಬ್ಬಲಾಗಿದೆ. ಅವನು ಸದ್ಯ ಕೆಲವು ವರ್ಷ ಹೊರಗೆ ಬರುವಷ್ಟು ಸುಲಭದ ಕಾನೂನು ಅಲ್ಲಿಲ್ಲ. ಅಂತಹ ಸಂಕುಚಿತ ಮನಸ್ಥಿನ ದೇಶದವರ ಪರವಾಗಿ ಮಾತನಾಡುವ ಓವೈಸಿ ಅಲ್ಲಿಯೇ ಹೋಗಿ ಚುನಾವಣೆಗೆ ನಿಂತು ಪ್ರಧಾನಿಯಾಗಲಿ, ನಮಗೆನೂ. ಅದು ಬಿಟ್ಟು ಇಲ್ಲಿದ್ದ ಮೇಲೆ ಇದೇ ದೇಶದ ಪರ ಮಾತ್ರ ಮಾತನಾಡಬೇಕು. ಬೇರೆ ದೇಶದವರ ಪರ ಮಾತನಾಡಿದರೆ ಪಾಕಿಸ್ತಾನಿ ಎನ್ನುವುದಲ್ಲ, ಘೋಷಣೆ ಕೂಗುವುದಕ್ಕೂ ಸ್ವರ ಇರಬಾರದು, ಅಂತಹ ಕಾನೂನು ಮೋದಿ ತರಲಿ ಎನ್ನುವುದು ನನ್ನ ಆಶಯ!

0
Shares
  • Share On Facebook
  • Tweet It




Trending Now
ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
Hanumantha Kamath July 12, 2025
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Hanumantha Kamath July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
  • Popular Posts

    • 1
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 2
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 3
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 4
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 5
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!

  • Privacy Policy
  • Contact
© Tulunadu Infomedia.

Press enter/return to begin your search