ಮತ್ತೆ ಬೆತ್ತಲಾಯಿತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಪಾಕಿಸ್ತಾನ ಪ್ರೇಮ, ಏನೆನ್ನಬೇಕು ಇವರಿಗೆ?
ಶ್ರೀನಗರ: ಜಮ್ಮು-ಕಾಶ್ಮೀರದ ಗಡಿಯಲ್ಲಿ ಸೈನಿಕರಿಗೆ ಅನುದಿನವೂ ರಣರಂಗದ ವಾತಾವರಣ. ದಿನಬೆಳಗಾದರೆ ಎಷ್ಟು ಸೈನಿಕರ ಜೀವ ಹೋಗುತ್ತೋ ಏನೋ? ಸರ್ಕಾರ ನೋಡಿದರೆ ಹೇಗಾದರೂ ಮಾಡಿ ಪಾಕಿಸ್ತಾನವನ್ನು ಕಟ್ಟಿ ಹಾಕಬೇಕು ಎಂದು ಉದ್ದೇಶಿಸಿದರೆ, ಇದೇ ಸೈನಿಕರು ತಮ್ಮ ಜೀವವನ್ನೇ ಒತ್ತೆ ಇಟ್ಟು ಕಾಶ್ಮೀರವನ್ನು ರಕ್ಷಿಸುತ್ತಾರೆ. ಪಾಕ್ ಉಗ್ರರು, ಸೈನಿಕರ ಎದೆಗೆ ಬಂದೂಕಿನ ನಳಿಕೆಯಿಡಲು ಹಾತೊರೆಯುತ್ತಿರುತ್ತಾರೆ.
ಆದರೆ ಜಮ್ಮು-ಕಾಶ್ಮೀರದಲ್ಲಿ ಆಳ್ವಿಕೆ ನಡೆಸುವ, ಭಾರತದ ಅನ್ನ ತಿನ್ನುವ ಕೆಲ ರಾಜಕಾರಣಿಗಳು, ಅದರಲ್ಲೂ ನ್ಯಾಷನಲ್ ಕಾನ್ಫರೆನ್ಸ್ ಎಂಬ ಪಕ್ಷದ ವಕ್ತಾರರಂತೂ ತಮ್ಮ ಆತ್ಮವನ್ನು ಪಾಕಿಸ್ತಾನದಲ್ಲೇ ಇಟ್ಟಿದ್ದೇವೆ ಎಂಬಂತೆ ವರ್ತಿಸುತ್ತಾರೆ.
ಇದಕ್ಕೆ ಸಾಕ್ಷಿಯಾಗಿ ಶನಿವಾರ ಕಾಶ್ಮೀರ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಶಾಸಕ ಅಕ್ಬರ್ ಲೋನ್ ಎಂಬಾತ ಪಾಕಿಸ್ತಾನದ ಪರ ಘೋಷಣೆ ಕೂಗುವ ಮೂಲಕ ತಮ್ಮ ಮನಸ್ಥಿತಿ ಎಂಥಾದ್ದು ಎಂಬುದನ್ನು ಸಾಬೀತುಪಡಿಸಿದ್ದಾನೆ.
ಅಷ್ಟೇ ಅಲ್ಲ, ವಿಧಾನಸಭೆಯಿಂದ ಹೊರಗೆ ಬಂದ ಈತ ಎಂಥಾ ಲಜ್ಜೆಗೇಡಿ ಹೇಳಿಕೆ ನೀಡುತ್ತಾನೆಂದರೆ, “ಹೌದು, ನಾನು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ನಿಜ. ಅದು ನನ್ನ ವೈಯಕ್ತಿಕ ದೃಷ್ಟಿಕೋನ” ಎಂದಿದ್ದಾನೆ.
ನಾನು ಹೀಗೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂಬುದನ್ನೇ ನನ್ನ ಭಾವನೆ ಎಂದಿರುವ ಈತನ ಹೇಳಿಕೆಗೆ ವ್ಯಾಪಕ ವಿರೋಧ ಸಹ ವ್ಯಕ್ತವಾಗಿದೆ.
ಮೊನ್ನೆಯಷ್ಟೇ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿಯರು ಎಂದರೆ ಅವರಿಗೆ ಮೂರು ವರ್ಷ ಜೈಲಿಗೆ ಹಾಕಬೇಕು ಎಂದಿದ್ದರು ಎಐಎಂಐಎಂ ಮುಖ್ಯಸ್ಥ, ಸಂಸದ ಅಕ್ಬರುದ್ದೀನ್ ಓವೈಸಿ. ಈಗ ಒಬ್ಬ ಮುಸ್ಲಿಂ ಶಾಸಕ ಪಾಕಿಸ್ತಾನದ ಪರವಾಗಿ ಮಾತನಾಡಿದ್ದಾನೆ. ಹೇಳಿ ಓವೈಸಿ ಏನು ಮಾಡಬೇಕು ಇವರಿಗೆ?
Leave A Reply