ಬಯಲಾಯ್ತು ಕಾಂಗ್ರೆಸ್ಸಿಗರ ಹಿಂದೂ ದ್ವೇಷ, ಕೃಷ್ಣ ಸೇರಿ ಹಿಂದೂ ದೇವರಿಗೆ ಅವಮಾನ!
ದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಎಷ್ಟೇ ದೇವಸ್ಥಾನಗಳಿಗೆ ಹೋಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಹಿಂದೂ, ನಾನೂ ಹಸು ಸಾಕಿದ್ದೇನೆ ಎಂದು ಹೇಳಲಿ, ಅದರೆ ಅವರ ಆಂತರ್ಯದಲ್ಲಿ ಮಾತ್ರ ಹಿಂದೂಗಳೆಂದರೆ ತಾತ್ಸಾರ, ನಿರ್ಲಕ್ಷ್ಯ.
ಅದೇ ರೀತಿ, ಈಗ ಉತ್ತರ ಪ್ರದೇಶದ ಅಲಹಾಬಾದ್ ನ ಕಾಂಗ್ರೆಸ್ ಮುಖಂಡರೊಬ್ಬರು ಹಿಂದೂ ದೇವರ ಮೇಲೆ ದ್ವೇಷ ಕಾರುವ ಮೂಲಕ ತಮಗೆ ಎಷ್ಟರಮಟ್ಟಿಗೆ ಹಿಂದೂಗಳ ಮೇಲೆ ಮಮಕಾರ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೌದು, ಹಸೀಬ್ ಅಹ್ಮದ್ ಎಂಬಾತ ಫೇಸ್ ಬುಕ್ ನಲ್ಲಿ ಫೋಟೋ ಒಂದನ್ನು ಅಪ್ ಲೋಡ್ ಮಾಡಿದ್ದು, ಅದರಲ್ಲಿ ಹಿಂದೂಗಳ ಆರಾಧ್ಯ ದೈವ ಕೃಷ್ಣ ಸೇರಿ ಹಲವು ವ್ಯಕ್ತಿಗಳನ್ನು ಬಿಜೆಪಿ ಮುಖಂಡರಿಗೆ ಹೋಲಿಸುವ ಮೂಲಕ ದೇವತೆಗಳಿಗೆ ಅವಮಾನ ಮಾಡಿದ್ದಾರೆ.
ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಆಡ್ವಾಣಿ ಅವರನ್ನು ಧ್ರತರನ್ನಾಗಿ, ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರನ್ನು ಕೌರವನನ್ನಾಗಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಯೋಧನರನ್ನಾಗಿ ಚಿತ್ರಿಸುವ ಫೋಟೋ ಅಪ್ ಲೋಡ್ ಮಾಡಿರುವುದು ವ್ಯಾಪಕ ಟೀಕೆಗೆ ಒಳಗಾಗಿದೆ.
ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವಾಗ ವಿನಾಕಾರಣ ಜೋರಾಗಿ ನಕ್ಕು ಕಲಾಪಕ್ಕೆ ಅಡ್ಡಿ ಮಾಡಿದ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರಿಗೆ ಸುಮ್ಮನಿರುವಂತೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸೂಚಿಸಿದ್ದು, ಮೋದಿ ಅವರು ನಗೆಚಟಾಕಿ ಹಾರಿಸಿದ್ದೇ ಇಂಥ ಅವಹೇಳನಕಾರಿ ಪೋಸ್ಟ್ ಹಾಕಲು ಕಾರಣ ಎನ್ನಲಾಗಿದೆ.
Leave A Reply