ಆಂಧ್ರಪ್ರದೇಶ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುನ್ನುಡಿ, 1,000 ಕೋಟಿ ಅನುದಾನ
ದೆಹಲಿ: ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟದ ಪಾಲುದಾರ ಆಂಧ್ರ ಪ್ರದೇಶದ ಟಿಡಿಪಿ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಅನುದಾನ ಘೋಷಿಸಿದ್ದು, ಆಂಧ್ರ ಪ್ರದೇಶದ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆಯಲಿದೆ.
ಬಿಜೆಪಿ ಮೈತ್ರಿ ಪಕ್ಷ ಟಿಡಿಪಿ ಆಂಧ್ರಪ್ರದೇಶದಲ್ಲಿ ಆಡಳಿತದಲ್ಲಿದ್ದು, ಎನ್ ಡಿಎ ಒಕ್ಕೂಟದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಅಲ್ಲದೇ ಅಮರಾವತಿಯಂತಹ ಬೃಹತ್ ನಗರ ನಿರ್ಮಾಣಕ್ಕೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೈ ಹಾಕಿದ್ದಾರೆ. ಇನ್ನು ಹಲವು ಸಮಸ್ಯೆಗಳು ಆಂಧ್ರ ಪ್ರದೇಶದಲ್ಲಿದ್ದೂ, ಎಲ್ಲ ಸಮಸ್ಯೆಗಳಿಗೆ ಪೂರಕವಾಗಿ ಕೇಂದ್ರ ಸರ್ಕಾರ ಆಂಧ್ರಪ್ರದೇಶಕ್ಕೆ ಬೃಹತ್ ಮೊತ್ತದ ಅನುದಾನವನ್ನು ನೀಡುವ ಮೂಲಕ ಅನುಕೂಲ ಕಲ್ಪಿಸಿದೆ.
ಕೇಂದ್ರ ಸರ್ಕಾರ ಆಂಧ್ರ ಪ್ರದೇಶಕ್ಕೆ 1,269 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇದೇ ಅನುದಾನದಲ್ಲಿ ಪೋಲವಾರಂ ಯೋಜನೆಗೆ 417.44 ಕೋಟಿಯೂ ಸೇರಿರುವುದು ವಿಶೇಷ.
ಪೋಲವಾರಂ ಯೋಜನೆಗೆ 7,200 ಕೋಟಿ ರೂಪಾಯಿ ವೆಚ್ಚದ್ದಾಗಿದ್ದು, ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ. ಇದುವರೆಗೂ 4,329 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಜಂಟಿ ಆಯುಕ್ತ ತಿಳಿಸಿದ್ದಾರೆ.
ದೇಶಾದ್ಯಂತ ಮಹತ್ವದ ಯೋಜನೆಗಳಿಗೆ ನಿರಂತರವಾಗಿ ಅನುದಾನ ನೀಡುತ್ತಿರುವ ಸರ್ಕಾರ ಹಲವು ಅಭಿವೃದ್ಧಿಪರ ಕಾರ್ಯಗಳನ್ನು ಮಾಡುತ್ತಿದೆ. ಅದಕ್ಕೆ ಜತೆಯಾಗಿ ಇದೀಗ ಆಂಧ್ರ ಪ್ರದೇಶಕ್ಕೆ 1000 ಅನುದಾನ ಬಿಡುಗಡೆ ಮಾಡಿದೆ.
Leave A Reply